ಶೀಘ್ರದಲ್ಲೇ ಮದುವೆಯಾಗಲಿದ್ದಾರೆ “ಮೈನಾ” ಬ್ಯೂಟಿ ನಿತ್ಯಾಮೆನನ್ | ಸ್ಟಾರ್ ನಟನ ಕೈ ಹಿಡಿಯುವ ಮುದ್ದು ಮುಖದ ಚೆಲುವೆ!!!

ನಟಿ ನಿತ್ಯಾ ಮೆನನ್ ಹೆಸರಿನ ಜೊತೆಗೆ ಸೌಂದರ್ಯವನ್ನೇ ಮೈಗೂಡಿಸಿಕೊಂಡಿರುವ ನಟಿ. ದುಂಡು ಮುಖದ ಚೆಲುವೆ. ನಟನೆಯಲ್ಲಿ ಪ್ರಸಿದ್ಧಿ ಪಡೆದ ಈ ನಟಿಯ ಬಗ್ಗೆ ಹೆಚ್ಚು ಪರಿಚಯಿಸುವ ಅವಶ್ಯಕತೆ ಇಲ್ಲ. ನಿತ್ಯಾ ಕೇವಲ ಒಂದು ಸಿನಿಮಾ ರಂಗಕ್ಕೆ ಸೀಮಿತವಾಗಿಲ್ಲ. ಟಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್ ಹಾಗೂ ಮಾಲಿವುಡ್‌ನಲ್ಲಿ ನಿತ್ಯಾ ಸಿಕ್ಕಾಪಟ್ಟೆ ಹೆಸರು ಮಾಡಿದ ನಟಿ.

 

ಬೆಂಗಳೂರು ಮೂಲದ ನಟಿ ನಿತ್ಯಾ ಮೆನನ್ ಸದ್ಯ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿಲ್ಲ. 34 ವರ್ಷದ ಈ ನಟಿ ಈಗ ಮಲಯಾಳಂನ ಸ್ಟಾರ್ ಹೀರೋನ ಕೈ ಹಿಡಿಯಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಸೆಲೆಬ್ರಿಟಿ ಮದುವೆಯ ಬಗ್ಗೆ ಆಗಾಗ್ಗೆ ಸುದ್ದಿಯಾಗುತ್ತಲೇ ಇದೆ. ಇದರಲ್ಲಿ ಬಂದಿರುವ ತಾಜಾ ಸುದ್ದಿಯೇ ಈಗ ನಿತ್ಯಾ ಮೆನನ್ ವಿಚಾರದಲ್ಲಿ ಕೇಳಿಬಂದಿದೆ. ಅದೇನೆಂದರೆ ಮಲಯಾಳಂ ಬ್ಯೂಟಿ ಮದುವೆಗೆ ಸಿದ್ದರಾಗುತ್ತಿದ್ದಾರಂತೆ. ಮೂಲಗಳ ಪ್ರಕಾರ ನಿತ್ಯಾ ಅವರು ಮಲಯಾಳಂ ಸ್ಟಾರ್ ನಟರೊಬ್ಬರನ್ನು ಮದುವೆ ಆಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಆದರೆ, ಆ ನಟ ಯಾರು ಎಂಬುದೇ ಈಗ ಎಲ್ಲರ ಮುಂದಿರುವ ಪ್ರಶ್ನೆ. ಇದಕ್ಕೆ ನಿತ್ಯಾ ಅವರೇ ಉತ್ತರ ನೀಡಬೇಕಿದೆ.

ಸಿನಿಮಾ ಲೋಕಕ್ಕೆ ಕಾಲಿಡುವ ಮೊದಲೇ ನಿತ್ಯಾ ಮತ್ತು ಸ್ಟಾರ್ ನಟನ ನಡುವೆ ಸ್ನೇಹವಿತ್ತು ಎನ್ನಲಾಗಿದೆ. ಮೊದಲ ಪರಿಚಯ ನಂತರ ಸ್ನೇಹಕ್ಕೆ ತಿರುಗಿ, ಬಳಿಕ ಇಬ್ಬರ ನಡುವೆ ಲವ್ ಆಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಹೀಗೊಂದು ವದಂತಿ ಸಾಮಾಜಿಕ ಜಾಲತಾಣ ಮತ್ತು ಮಲಯಾಳಂ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಈ ಸುದ್ದಿಯ ಬಗ್ಗೆ ನಿತ್ಯಾ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

1998ರಲ್ಲಿ ಹನಯಮಾನ್ ಎಂಬ ಚಿತ್ರದಲ್ಲಿ ನಿತ್ಯಾ ಬಾಲನಟಿಯಾಗಿ ಕಾಣಿಸಿಕೊಂಡರು. ಆ ನಂತರ ಅವರು ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡ ’70’ Clock’ ಚಿತ್ರ 2006ರಲ್ಲಿ ರಿಲೀಸ್ ಆಯಿತು. ಅದಾದ ನಂತರದಲ್ಲಿ ಮಲಯಾಳಂ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ನಿತ್ಯಾ ನಟಿಸಿದ್ದಾರೆ. ಅವುಗಳನ್ನು ಕೆಲವು ಹಿಟ್, ಇನ್ನೂ ಕೆಲವು ಸಾಮಾನ್ಯವಾಗಿವೆ. ಚಿತ್ರರಂಗದಲ್ಲಿ ಗ್ಲಾಮರ್, ರೊಮ್ಯಾಂಟಿಕ್ ಪಾತ್ರಗಳ ಜೊತೆಗೆ ಅವರು ವಿಭಿನ್ನವಾದ ಪಾತ್ರಗಳಲ್ಲಿ ವಿಶಿಷ್ಟ ಪಾತ್ರಗಳಲ್ಲಿ ನಿತ್ಯಾ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ವೆಬ್ ಸಿರೀಸ್‌ನತ್ತ ಮುಖ ಮಾಡಿರುವ ನಿತ್ಯಾ, ರಿಯಾಲಿಟಿ ಶೋನಲ್ಲಿಯೂ ಜಡ್ಜ್ ಆಗಿ ಗುರುತಿಸಿಕೊಂಡರು.

ಕನ್ನಡದಲ್ಲಿ ಜೋಶ್, ಮೈನಾ ಹಾಗೂ ಕೋಟಿಗೊಬ್ಬ 2 ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದಾರೆ.

Leave A Reply

Your email address will not be published.