ತುಳು ಭಾಷೆಯ ಬಗ್ಗೆ ಮಾತನಾಡಿದ ಕಿಚ್ಚ ಹೇಳಿದ್ದೇನು ಗೊತ್ತೆ

ವಿಕ್ರಾಂತ್ ರೋಣ ಸಿನಿಮಾಕ್ಕಾಗಿ ಕಿಚ್ಚನ ಅಭಿಮಾನಿಗಳು ಹಾಗು ಜನತೆ ಕಾಯುತ್ತಿದ್ದಾರೆ . ಪ್ರಚಾರದ ವೆಳೆ ಸಂದರ್ಶನದಲ್ಲಿ ಕಿಚ್ಚ ತುಳು ಭಾಷೆಯ ಬಗ್ಗೆ ಮಾತನಾಡಿದ್ದಾರೆ.

 

ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್, ಆ ಸಿನಿಮಾ ಟ್ರೈಲರ್‌ನಲ್ಲಿ ತುಳು ಡೈಲಾಗ್ ಇರುವ ಬಗ್ಗೆ ಮಾತನಾಡಿದ್ದಾರೆ. ಈ ಸಿನಿಮಾದಲ್ಲಿ ತುಳು ಪ್ರಯೋಗವಿದೆ. ಯಾಕಂದ್ರೆ ನಮ್ಮ ಟೀಂನಲ್ಲಿ ಆಲ್ಮೋಸ್ಟ್ ಎಲ್ಲರಿಗೂ ತುಳು ಬರುತ್ತಿತ್ತು. ಅದನ್ನ ನಾನು ಎಂಜಾಯ್ ಮಾಡುತ್ತಿದ್ದೆ. ಯಾಕಂದ್ರೆ ನನ್ನ ತಾಯಿ ಉಡುಪಿಯವರು ಎಂದಿದ್ದಾರೆ. 

ತುಳು ಭಾಷೆಯಲ್ಲಿ ಒಂದು ರಿದಂ ಇದೆ.ಲಾಲಿತ್ಯ ಇದೆ. ನನಗೆ ತುಳು ಭಾಷೆ ಇಷ್ಟ ಆದರೆ ಮಾತನಾಡಲು ಬರಿವುದಿಲ್ಲ‌ . ನಮ್ಮ ಸಿನಿಮಾ ನಿತ್ತಿರುವುದೇ ಆ ತುಳು ಭಾಷೆಯ ಸಾಲಿನಲ್ಲಿ ನಿಮಗೆ ಅದು ಸಿನಿಮಾ ನೋಡಿದ ಮೇಲೆ ಅರ್ಥ ಆಗುತ್ತದೆ ಎಂದಿದ್ದಾರೆ ಸುದೀಪ್. ನಾನು ಮುಂದಿನ ದಿನದಲ್ಲಿ ತುಳು ಮಾತನಾಡಲು ಪ್ರಯತ್ನಿಸುತ್ತೇನೆ”ಎಂದು ಹೇಳಿದ್ದಾರೆ

Leave A Reply

Your email address will not be published.