ಆರೋಗ್ಯವಂತ ಮನುಷ್ಯ ದಿನಕ್ಕೆ ಎಷ್ಟು ಬಾರಿ ಉಸಿರಾಡುತ್ತಾನೆ ಹಾಗು ಉಸಿರಾಡುವ ಗಾಳಿ ಪ್ರಮಾಣ ಎಷ್ಟು ಗೊತ್ತೆ

ನಿತ್ಯ ನೀವೆಷ್ಟು ಗಾಳಿಯನ್ನು ಉಸಿರಾಡುತ್ತೀರಿ ಎಂಬುದು ನಿಮಗೆ ತಿಳಿದಿದೆಯೇ? ಆರೋಗ್ಯವಂತ ವ್ಯಕ್ತಿಗಳು ನಿಮಿಷಕ್ಕೆ 16 ಬಾರಿ ಉಸಿರಾಡುತ್ತಾರೆಂದು ಅಧ್ಯಯನಗಳು ಹೇಳುತ್ತವೆ. ಅಂದರೆ ದಿನಕ್ಕೆ ಸುಮಾರು 23 ಸಾವಿರ ಬಾರಿ.

ನಾವು ಶ್ವಾಸದಲ್ಲಿ ತೆಗೆದುಕೊಳ್ಳುವ ಗಾಳಿಯು ಶೇಕಡಾ 20 ರಷ್ಟು ಆಮ್ಲಜನಕವನ್ನು ಹೊಂದಿರುತ್ತದೆ ಮತ್ತು ನಾವು ಬಿಡುವ ಗಾಳಿಯು ಶೇಕಡಾ 15 ರಷ್ಟು ಆಮ್ಲಜನಕವನ್ನು ಹೊಂದಿರುತ್ತದೆ. ಅಂದರೆ ಪ್ರತಿ ಉಸಿರಿಗೆ ಶೇಕಡಾ 5 ರಷ್ಟು ಅನಿಲ ಇಂಗಾಲದ ಡೈಆಕ್ಸೈಡ್ ಆಗಿ ಪರಿವರ್ತನೆಯಾಗುತ್ತದೆ

ಒಬ್ಬ ವ್ಯಕ್ತಿಯು ಪ್ರತಿದಿನ 7,570 ಲೀಟರ್ ಗಾಳಿಯನ್ನು ತೆಗೆದುಕೊಳ್ಳುತ್ತಾನೆ ಎಂದು ಲಂಗ್ ಅಸೋಸಿಯೇಷನ್ ಅಂದಾಜಿಸಿದೆ. ಉಸಿರಾಟದ ಪ್ರಮಾಣವು ನಿಮಿಷಕ್ಕೆ 12 ರಿಂದ 20 ರ ನಡುವೆ ಇದ್ದರೆ, ವ್ಯಕ್ತಿಯು ಆರೋಗ್ಯವಾಗಿರುತ್ತಾನೆ. ನಿಮಿಷಕ್ಕೆ 10 ಬಾರಿ ಮಾತ್ರ ಉಸಿರಾಡಿದರೆ ಉಸಿರಾಟದ ವ್ಯವಸ್ಥೆ ದುರ್ಬಲವಾಗಿದೆ ಎಂದರ್ಥ.

Leave A Reply