ಸೇತುವೆಯಿಂದ ನದಿಗೆ ಉರುಳಿದ ಬಸ್, ಕನಿಷ್ಠ 13 ಮಂದಿ ಸಾವು

ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಸೇತುವೆಯಿಂದ ನದಿಗೆ
ಉರುಳಿ, ಕನಿಷ್ಠ 13 ಮಂದಿ ಮೃತಪಟ್ಟ ಘಟನೆ ನಡೆದಿದೆ.

 

ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ಮಹಾರಾಷ್ಟ್ರ ಸರ್ಕಾರದ ಇಂದೋರ್‌ನಿಂದ ಪುಣೆಗೆ ತೆರಳುತ್ತಿದ್ದಾಗ ಬಸ್, ಸೇತುವೆಯಿಂದ ನದಿಗೆ ಉರುಳಿದಿದೆ. ಪರಿಣಾಮವಾಗಿ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ.

ಸರಿಸುಮಾರು 100 ಅಡಿ ಎತ್ತರದಿಂದ ನರ್ಮದಾ ನದಿಗೆ ಬಸ್ಸು ಉರುಳಿದೆ. ಬಸ್ಸಿನಲ್ಲಿ ಎಷ್ಟು ಪ್ರಯಾಣಿಕರಿದ್ದರು ಎಂಬ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ರಾಜ್ಯ ವಿಪತ್ತು ನಿರ್ವಹಣಾ ದಳ ಧಾವಿಸಿ, ಬಸ್ ಮೇಲಕ್ಕೆತ್ತಲಾಗಿದೆ.

15 ಮಂದಿಯನ್ನು ರಕ್ಷಿಸಲಾಗಿದ್ದು, ಹಲವರಿಗೆ ಶೋಧ ನಡೆಸಲಾಗುತ್ತಿದೆ. ಈ ಘಟನೆಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ.

Leave A Reply

Your email address will not be published.