ಜೋಡಿ ಹೋಟೆಲ್ ರೂಮಿಗೆ ಹೋಗಿ ರತಿಯಲ್ಲಿ ತೊಡಗಿತ್ತು, ಆಗ ರೂಮಲ್ಲಿ ಇಣುಕಿ ನೋಡಿದ್ದು ಯಾರು ?

ಬೆಂಗಳೂರು:ಹೋಟೆಲ್ ಒಂದರಲ್ಲಿ ರೂಮ್ ಪಡೆದಿದ್ದ ಜೋಡಿಯೊಂದರ ಖಾಸಗಿ ವೀಡಿಯೋ ಸೆರೆ ಹಿಡಿದು ಹಣಕ್ಕೆ ಬೇಡಿಕೆ ಇಟ್ಟು ಬ್ಲಾಕ್ ಮೇಲ್ ನಡೆಸಿದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಈ ಸಂಬಂಧ ಮಹಿಳೆ ಸಹಿತ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆಯೊಂದು ಬೆಂಗಳೂರಿನ ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಂಧಿತರನ್ನು ಉಷಾ ಹಾಗೂ ಸುರೇಶ್ ಬಾಬು ಎಂದು ಗುರುತಿಸಲಾಗಿದ್ದು, ಇವರಿಬ್ಬರೂ ಸೇರಿಕೊಂಡು ಹೋಟೆಲ್ ರೂಮಿಗೆ ಕ್ಯಾಮೆರ ಫಿಕ್ಸ್ ಮಾಡಿ ಜೋಡಿಯೊಂದರ ಖಾಸಗಿ ವೀಡಿಯೋ ಸೆರೆಹಿಡಿದಿದ್ದರು ಎನ್ನುವ ಆರೋಪ ಕೇಳಿಬಂದಿತ್ತು.

ಘಟನೆ ವಿವರ: ಅವತ್ತು ಒಂದು ಜೋಡಿ ಯಲಹಂಕದ ಹೋಟೆಲು ಒಂದಕ್ಕೆ ಬಂದಿತ್ತು. ಹಾಗೆ ಹೋಟೆಲ್ಗೆ ಬಂದು ರೂಮ್ ಬುಕ್ ಮಾಡಿ ಒಳಗೆ ನುಗ್ಗಿದ ಜೋಡಿ ಬಂದ ಉದ್ದೇಶದಂತೆ ರತಿಯಲ್ಲಿ ತೊಡಗಿತ್ತು. ಆ ಜೋಡಿ ಮರುದಿನ ರೂಮ್ ಖಾಲಿ ಮಾಡಿದ ನಂತರ ಮತ್ತೊಂದು ಜೋಡಿ ಅದೇ ಯಲಹಂಕದ ಅದೇ ಲಾಡ್ಜ್ ಗೆ ತೆರಳಿ, ಅದೇ ರೂಮ್ ಬೇಕೆಂದು ರೂಮ್ ಅನ್ನು ಪಡೆದಿತ್ತು. ಮರುದಿನ ಆ ಜೋಡಿ ರೂಮ್ ಖಾಲಿ ಮಾಡಿದ ನಂತರ ಆ ಜೋಡಿಗೆ ಬಂದಿತ್ತು ಬ್ಲಾಕ್ ಮೇಲ್ ಕರೆ.

ನೀವು ನಿನ್ನೆ ರಾತ್ರಿಯಿಡೀ ಆಡಿದ ಆಟ ನಮಗೆ ಸಿಕ್ಕಿದೆ, ವೀಡಿಯೋ ವೈರಲ್ ಮಾಡಲಾ, ಅಥ್ವಾ 25 ಲಕ್ಷ ಕೊಡ್ತೀರಾ ಅಂದಿತ್ತು ಅತ್ತ ಕಡೆಯಿಂದ. ಆಗ ಆ ಜೋಡಿ ಎಲ್ಲಿ ಮಾನ ಮರ್ಯಾದಿ ಹೋಗುತ್ತೆ ಅಂತ ಭಯಭೀತರಾಗಿ, ಹಿಂದಿನ ದಿನ ಬಿಚ್ಚಿದ ತಪ್ಪಿಗಾಗಿ ಒಂದಷ್ಟು ಹಣ ಬಿಚ್ಚಲು ಮುಂದಾಗಿತ್ತು. ಆದರೆ ಬ್ಲಾಕ್ ಮೇಲ್ ದಾರರು 25 ಲಕ್ಷ ರೌಂಡ್ ಫಿಗರ್ ಗೆ ಪಟ್ಟು ಹಿಡಿದಿದ್ದರು. ಆಗ ಸಹಜವಾಗಿ ಬೇರೆ ಸಾರಿ ಕಾಣದ ಆ ಜೋಡಿ ಪೊಲೀಸರ ಬಳಿ ತೆರಳಿತ್ತು.

ನಿಜಕ್ಕೂ ಏನಾಗಿತ್ತೆಂದರೆ, ರತಿ ಕ್ರೀಡೆಗಾಗಿ ರೂಮ್ ಬುಕ್ ಮಾಡಿದ ಜೋಡಿ ಬರುವ ಒಂದು ದಿನ ಮುಂಚೆಯೇ ಮತ್ತೊಂದು ಖತರ್ನಾಕ್ ಜೋಡಿ ಅದೇ ರೂಮನ್ನು ಬುಕ್ ಮಾಡಿ ಅಲ್ಲಿ ಕ್ಯಾಮರಾ ಸಿಕ್ಕಿಸಿ ನಿರ್ಗಮಿಸಿದ್ದರು. ಅದೆಗೋ ನಾಳೆ ಇನ್ನೊಂದು ಜೋಡಿ ಅಲ್ಲಿಗೆ ಬಂದೇ ಬರುತ್ತದೆ ಎನ್ನುವ ಖಾತರಿ ಅವರಿಗಿತ್ತು. ಕಾರಣ ಅವರು ಪರಸ್ಪರ ಪರಿಚಯ ಉಳ್ಳವರಾಗಿದ್ದರು. ಆ ಬಳಿಕ ಅದೇ ರೂಮಿಗೆ ಇನ್ನೊಂದು ಜೋಡಿ ತೆರಳಿದ್ದು, ಖಾಸಗಿ ಕ್ಷಣಗಳ ಕಳೆಯುವಲ್ಲಿ ನಿರತವಾದ್ದ ವೀಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಬಳಿಕ ಮತ್ತೊಮ್ಮೆ ಅದೇ ರೂಮ್ ಪಡೆದ ಆರೋಪಿಗಳ ಜೋಡಿ ಕ್ಯಾಮೆರದಲ್ಲಿದ್ದ ವೀಡಿಯೋ ಪಡೆದುಕೊಂಡು ಸುಮಾರು 25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿತ್ತು. ಸಂತ್ರಸ್ತ ಜೋಡಿ ಹಣ ಕೊಡಲು ಒಪ್ಪದಿದ್ದಾಗ ವೀಡಿಯೋ ಎಲ್ಲಾ ಕಡೆಗೆ ಹರಿಯಬಿಡುವುದಾಗಿ ಬ್ಲಾಕ್ ಮೇಲ್ ನಡೆಸಿದ್ದು, ನೊಂದ ಜೋಡಿ ಠಾಣೆಯ ಮೆಟ್ಟಿಲೇರಿತ್ತು.

ಕೂಡಲೇ ಕಾರ್ಯಾಚರಣೆಗಿಳಿದ ಬಾಗಲೂರು ಠಾಣಾ ಪೊಲೀಸರು ಬ್ಲಾಕ್ ಮೇಲ್ ನಡೆಸಿದ್ದ ಜೋಡಿಯನ್ನು ವಶಕ್ಕೆ ಪಡೆದು, ವಿಚಾರಣೆಯ ಬಳಿಕ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.