ಸಾಲು ಸಾಲು ಹಬ್ಬಗಳ ಪ್ರಾರಂಭ ..| ಅಡುಗೆ ಎಣ್ಣೆ ದರದಲ್ಲಿ ಮತ್ತೊಮ್ಮೆ ಭಾರೀ ಇಳಿಕೆ!!!

ಇಂದು ಬೆಲೆ ಏರಿಕೆಯ ಸಮಸ್ಯೆ ಎದುರಿಸುತ್ತಿರುವ ಸಾರ್ವಜನಿಕರಿಗೆ ಕೊಂಚ ನೆಮ್ಮದಿ ಸಿಗುವಂಥ ಸುದ್ದಿ ಇದು. ಆಹಾರ ಉತ್ಪನ್ನ ತಯಾರಕ ಅದಾನಿ ವಿಲ್ಕರ್ ಖಾದ್ಯ ತೈಲದ ಬೆಲೆಯಲ್ಲಿ ಲೀಟರ್‌ಗೆ 30 ರೂಪಾಯಿ ಕಡಿತವನ್ನು ಘೋಷಿಸಿದೆ. ಅದಾನಿ ವಿಲ್ಮರ್ ತನ್ನ ಆಹಾರ ಉತ್ಪನ್ನಗಳನ್ನು ಫಾರ್ಚೂನ್ ಬ್ರಾಂಡ್ ಅಡಿಯಲ್ಲಿ ಮಾರಾಟ ಮಾಡುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿತದ ನಡುವೆ, ದೇಶೀಯ ಮಾರುಕಟ್ಟೆಯಲ್ಲಿ ಕಡಿತವನ್ನು ಘೋಷಿಸಲಾಗಿದೆ. ಕೆಲ ದಿನಗಳ ಹಿಂದೆ ತೈಲ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸರ್ಕಾರ ಸಭೆ ನಡೆಸಿ ಚಿಲ್ಲರೆ ಬೆಲೆ ಇಳಿಕೆ ಕುರಿತು ಚರ್ಚೆ ನಡೆಸಿತ್ತು. ಇದಾದ ಬಳಿಕ ಅದಾನಿ ವಿಸ್ಮರ್ ಬೆಲೆ ಇಳಿಕೆ ಮಾಡಿ ಪ್ರಕಟಣೆ ನೀಡಿದೆ.

ಅದಾನಿ ವಿಸ್ಮರ್ ಸೋಯಾಬೀನ್ ಎಣ್ಣೆಯ ದರದಲ್ಲಿ ಹೆಚ್ಚಿನ ಕಡಿತ ಮಾಡಿದ್ದಾರೆ. ಹೊಸ ಬೆಲೆಯೊಂದಿಗೆ ಉತ್ಪನ್ನಗಳು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ.
ಜಾಗತಿಕ ಬೆಲೆಗಳ ಕುಸಿತವನ್ನು ಗಮನದಲ್ಲಿಟ್ಟುಕೊಂಡು, ಕಡಿಮೆ ದರದಲ್ಲಿ ಗ್ರಾಹಕರಿಗೆ ಖಾದ್ಯ ತೈಲವನ್ನು ತಲುಪಿಸುವ ಸಲುವಾಗಿ ಕಂಪನಿಯು ಈ ಕಡಿತವನ್ನು ಮಾಡಿದೆ ಎಂದು ಅದಾನಿ ವಿಲ್ಮರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಳೆದ ತಿಂಗಳು ಕೂಡ ಕಂಪನಿಯು ಖಾದ್ಯ ತೈಲದ ಬೆಲೆಯನ್ನು ಕಡಿಮೆ ಮಾಡಿತ್ತು. ಈ ಕಡಿತದ ನಂತರ, ಫಾರ್ಚೂನ್ ಸೋಯಾಬೀನ್ ಎಣ್ಣೆಯ ಬೆಲೆಯನ್ನು ಲೀಟರ್‌ಗೆ 195 ರೂ.ನಿಂದ 165 ರೂ.ಗೆ ಇಳಿಸಲಾಗಿದೆ.
ಸೂರ್ಯಕಾಂತಿ ಎಣ್ಣೆ ಬೆಲೆಯನ್ನು ಲೀಟರ್‌ಗೆ 210 ರೂ.ನಿಂದ 199 ರೂ.ಗೆ ಇಳಿಸಲಾಗಿದೆ. ಸಾಸಿವೆ ಎಣ್ಣೆ ದರವೂ ಕಡಿಮೆಯಾಗಿದೆ. ಸಾಸಿವೆ ಎಣ್ಣೆಯ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ) ಲೀಟರ್‌ಗೆ 195 ರೂ.ನಿಂದ 190 ರೂ.ಗೆ ಇಳಿಕೆಯಾಗಿದೆ. ಫಾರ್ಚ್ಯೂನ್ ರೈಸ್ ಬ್ರೌನ್ ಆಯಿಲ್ ಬೆಲೆ ಲೀಟರ್ ಗೆ 225 ರೂ.ನಿಂದ 210 ರೂ.ಗೆ ಇಳಿಕೆಯಾಗಿದೆ. ಅದೇ ಸಮಯದಲ್ಲಿ ಕಡಲೆ ಎಣ್ಣೆಯ ಎಂಆರ್‌ಪಿ ಲೀಟರ್‌ಗೆ 220 ರೂ.ನಿಂದ 210 ರೂ.ಗೆ ಇಳಿಕೆಯಾಗಿದೆ.

Leave A Reply