ಟೆಕ್ನೋಲಜಿ ಗಳು ಹೆಚ್ಚುತ್ತ ಹೋದಂತೆ ಮೋಸದ ಜಾಲಕ್ಕೆ ಸಿಲುಕುವ ಜನರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಮೋಸ ಹೋಗುವವರ ಸಂಖ್ಯೆ ಹೆಚ್ಚು ಎಂದು ಹೇಳಬಹುದು. ಮ್ಯಾಟ್ರಿಮೊನಿ ಆಪ್ ಅನ್ನು ಬಳಸಿ ತನ್ನ ಸಂಗಾತಿಯನ್ನು ಹುಡುಕಿಕೊಳ್ಳುವ ಒಂದು ಟ್ರೆಂಡ್ ಶುರುವಾಗಿದ್ದು , ಇದರಿಂದ ಅದೆಷ್ಟೋ ಜನ ಮೋಸದ ವಂಚನೆಗೆ ಒಳಗಾಗಿದ್ದಾರೆ.
ಇದೀಗ ಮ್ಯಾಟ್ರಿಮೊನಿ ಮೂಲಕ ಮಹಿಳೆಯೊಬ್ಬಳು ವಂಚನೆಗೊಳಗಾಗಿದ್ದಾಳೆ. ತಾನೊಬ್ಬ ವೈದ್ಯ, ದುಬೈಯಲ್ಲಿ ಕೆಲಸ ಮಾಡುತ್ತಿದ್ದು, ನಾವಿಬ್ಬರೂ ಮದುವೆಯಾಗೋಣ ಎಂದು ಹೇಳಿ ನಂಬಿಸಿದ್ದ ಇದೇ ನಂಬಿಕೆಯಿಂದಲೇ ಆತನಿಗೆ ಲಕ್ಷ ಲಕ್ಷ ಹಣ ಕೊಟ್ಟ ಮಹಿಳೆ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಮುಂಬೈ ಅಂಧೇರಿ ನಿವಾಸಿಯಾಗಿರುವ 38 ವರ್ಷದ ಮಹಿಳೆಗೆ ಮ್ಯಾಟ್ರಿಮೋನಿಯಲ್ನಲ್ಲಿ ವ್ಯಕ್ತಿಯೊಬ್ಬನ ಪರಿಚಯವಾಗಿದೆ. ಈ ವೇಳೆ ತಾನು ವೈದ್ಯ, ದುಬೈಯಲ್ಲಿದ್ದೇನೆ ಎಂದು ನಂಬಿಸಿದ್ದ ಈತ, ತನ್ನ ವಿಳಾಸವನ್ನೂ ಕೂಡ ನೀಡಿಲ್ಲ. ಆದರೆ ಇದನ್ನೇ ನಿಜ ಎಂದು ನಂಬಿದ್ದ ಮಹಿಳೆ ತನ್ನ ಬಳಿ ಇದ್ದ ಹಣವನ್ನು ನೀಡಿ ಮೋಸ ಹೋಗಿದ್ದಾಳೆ.
ಸದ್ಯಕ್ಕೆ ತನ್ನ ಬಳಿ ಹಣವಿಲ್ಲ, ವೇತನ ಬಂದ ಕೂಡಲೇ ಕೊಡುತ್ತೇನೆ ಎಂದು ಹೇಳಿದ್ದನು. ಕೆಲ ದಿನಗಳಾದರೂ ಹಣ ವಾಪಸ್ ನೀಡದಿದ್ದಾಗ ಈ ಮಹಿಳೆ ಹಣ ಕೇಳಿದ್ದಾಳೆ. ಆಗಲೇ ಆತನ ನಿಜಬಣ್ಣ ಬಯಲಾಗಿದೆ. ಆದರೆ ಆತನ ಬಗ್ಗೆ ಸ್ಪಷ್ಟ ಮಾಹಿತಿಯೂ ಗೊತ್ತಿರದ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
You must log in to post a comment.