ಗೋಲ್ಡನ್ ಕ್ವೀನ್ ನಟಿ ಅಮೂಲ್ಯ, ಅಮ್ಮನಾದ ಮೇಲೆ ಫಸ್ಟ್ ಟೈಂ “ರೀಲ್ಸ್” | ಹೊಸ ಲುಕ್ ನಲ್ಲಿ ಮಿಂಚಿದ ನಟಿ

ಸ್ಯಾಂಡಲ್‌ವುಡ್ ನ ಗೋಲ್ಡನ್ ಕ್ಲೀನ್ ಎಂದೇ ಖ್ಯಾತಿ ಹೊಂದಿದ ನಟಿ ಅಮೂಲ್ಯ ಎಲ್ಲರಿಗೂ ಚಿರಪರಿಚಿತ. ಮದುವೆಯಾಗಿ ಸಂಸಾರದತ್ತ ವಾಲಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದ ಅಮೂಲ್ಯ, ಅನಂತರ ಗರ್ಭಿಣಿಯಾಗಿ, ಮಾರ್ಚ್‌ನಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮನೀಡಿದ್ದರು. ಆದರೆ ನಂತರ ಅಮೂಲ್ಯ ಸಾಮಾಜಿಕ ಜಾಲತಾಣದಿಂದ ಸ್ವಲ್ಪ ದೂರವಿದ್ದರು.

 

ನಂತರ ಮಕ್ಕಳ ಕಾಲಿನ ಫೋಟೋ ಹಾಗೂ ಅವರ ಕೆಲವು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಮತ್ತೆ ಆಕ್ಟಿವ್ ಆಗಿದ್ದರು. ಇದೀಗ ಅವರು ತಮ್ಮ ಮೊದಲ ರೀಲ್ಸ್ ಮಾಡಿ ಹಾಕಿದ್ದು, ಅಭಿಮಾನಿಗಳಿಗೆ ಬಹಳ ಇಷ್ಟವಾಗಿದೆ.

ಹೌದು, ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿರುವ ನಟಿ ಅಮೂಲ್ಯ ಮೊದಲ ಬಾರಿ ಹಾಡಿಗೆ ಡ್ಯಾನ್ಸ್ ಮಾಡುವ ರೀಲ್ಸ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಆ ವೀಡಿಯೋದಲ್ಲಿ ಅಮೂಲ್ಯ ಸುಂದರವಾಗಿ ಕಾಣಿಸಿಕೊಂಡಿದ್ದು, ಫ್ಯಾನ್ಸ್ ಸೂಪರ್ ಎಂದು ಕಮೆಂಟ್ ಮಾಡಿದ್ದಾರೆ. ನಟಿ ಅಮೂಲ್ಯ ನಟ ಶರಣ್ ಮತ್ತು ನಟಿ ನಿಶ್ವಿಕ ನಾಯ್ಡು ಅಭಿನಯದ ‘ಗುರು ಶಿಷ್ಯರು’ ಚಿತ್ರದ ಹಾಡೊಂದಕ್ಕೆ ರೀಲ್ಸ್ ಮಾಡಿ ಹಂಚಿಕೊಂಡಿದ್ದಾರೆ. ಅವರು ‘ಆಣೆ ಮಾಡಿ ಹೇಳುತೀನಿ’ ಎನ್ನುವ ಹಾಡಿಗೆ ರೀಲ್ಸ್ ಮಾಡಿದ್ದು, ವಿಡಿಯೋಗೆ ನನ್ನ ಮೊದಲ ರೀಲ್ಸ್ ಇದು, ಅದರಲ್ಲೂ ಇದು ನನಗೆ ತುಂಬಾ ಇಷ್ಟವಾದ ಹಾಡು. ನಿರ್ಮಾಪಕ ತರುಣ್ ಸುಧೀರ್ ಸೇರಿದಂತೆ, ಇಡೀ ಚಿತ್ರತಂಡಕ್ಕೆ ದೊಡ್ಡ ಯಶಸ್ಸು ಸಿಗಲಿ ಎಂದು ಬರೆದುಕೊಂಡಿದ್ದಾರೆ.

https://www.instagram.com/reel/CgEua-fDA6S/?utm_source=ig_web_copy_link

ಹೆರಿಗೆಯ ನಂತರ ಹೊರಗೆ ಎಲ್ಲೂ ಕಾಣಿಸಿಕೊಳ್ಳದ ಅಮೂಲ್ಯ, ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದ ಅಮೂಲ್ಯ, ಮಕ್ಕಳಾದ ನಂತರ ಸ್ವಲ್ಪ ದೂರವಿದ್ದರು, ಇದೀಗ ಮತ್ತೆ ಆಕ್ಟಿವ್ ಆಗಿದ್ದು, ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Leave A Reply

Your email address will not be published.