ಜನಸಾಮಾನ್ಯರೇ ಗಮನಿಸಿ | ನಾಳೆಯಿಂದ ಮೊಸರು ಮಜ್ಜಿಗೆ ಲಸ್ಸಿ ಬೆಲೆ ಹೆಚ್ಚಳ- ಕೆಎಂಎಫ್

Share the Article

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳವು ಮೊಸರು, ಮಜ್ಜಿಗೆ ಮತ್ತು ಲಸ್ಸಿ ಬೆಲೆಗಳನ್ನು ಹೆಚ್ಚಿಸಲು ತೀರ್ಮಾನಿಸಿದೆ. ಹಾಲಿನ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರವು ಶೇ 5ರ ಸರಕು ಸೇವಾ ಸುಂಕ ವಿಧಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪ್ರತಿ ಉತ್ಪನ್ನದ ಮೇಲೆ ಸರಾಸರಿ ರೂ. 1 ರಿಂದ ರೂ. 3ರರವರೆಗೆ ಬೆಲೆ ಹೆಚ್ಚಾಗಲಿದೆ. ಈ ಮೊದಲು ಲೀಟರ್ ಮೊಸರಿಗೆ ರೂ. 43 ಇತ್ತು. ನಾಳೆಯಿಂದ (ಜುಲೈ 18) ರೂ. 46 ಆಗಲಿದೆ. ಅರ್ಧ ಲೀಟರ್ ಮೊಸರಿನ ಬೆಲೆ ರೂ. 22 ಇತ್ತು.

ನಾಳೆಯಿಂದ ರೂ. 24 ಆಗಲಿದೆ. ಮಜ್ಜಿಗೆ 200 ಎಂಎಲ್ ಮಜ್ಜಿಗೆ ಹಾಗೂ ಲಸ್ಸಿ ಮೇಲೆ ರೂ. 1 ಹೆಚ್ಚಿಸಲಾಗಿದೆ. ಪಾಕೆಟ್‌ಗಳ ಮೇಲೆ ಹಳೆಯ ದರಗಳೇ ನಮೂದಾಗಿರುತ್ತವೆ. ಆದರೆ ಗ್ರಾಹಕರು ಹೊಸದಾಗಿ ನಿಗದಿಪಡಿಸಿರುವಷ್ಟು ದರ ನೀಡಿ ಖರೀದಿಸಬೇಕು ಎಂದು ಕೆಎಂಎಫ್ ಪ್ರಕಟಣೆಯಲ್ಲಿ ತಿಳಿಸಿದೆ.

Leave A Reply