ವರದಕ್ಷಿಣೆ ಕೊಡದಿದ್ದರೆ ತವರು ಮನೆ ಭೇಟಿ ಇಲ್ಲ, ಗಂಡನ ತಾಕೀತು | ನೊಂದ ಗೃಹಿಣಿ ಆತ್ಮಹತ್ಯೆ

ಮದುವೆಯ ಸುಂದರ ಕನಸುಗಳನ್ನು ಕಂಡಿದ್ದ ಯುವತಿಯೋರ್ವಳಿಗೆ ಗಂಡ ಮಾನಸಿಕ ಚಿತ್ರಹಿಂಸೆ ನೀಡಿ, ಆಕೆಯ ಹೆತ್ತವರನ್ನೂ ಭೇಟಿ ಮಾಡಲು ಬಿಡದೆ ಸತಾಯಿಸಿದ್ದಾನೆ. ನೊಂದ ಗೃಹಿಣಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಇಲಿ ಪಾಷಾಣ ತಿಂದು ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಹೆಚ್ ಡಿ ಕೋಟೆ ತಾಲೂಕಿನ ಮಳ್ಳೂರು ಗ್ರಾಮದಲ್ಲಿ ನಡೆದಿದೆ. 22 ವರ್ಷದ ಜ್ಯೋತಿ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಮಳ್ಳೂರು ಗ್ರಾಮದ ಆನಂದ್ ಜೊತೆ ಜ್ಯೋತಿ ವಿವಾಹ 4 ವರ್ಷಗಳ ಹಿಂದೆ ಆಗಿತ್ತು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಮನೆಯವರ ವಿರೋಧದ ನಡುವೆ ಮದುವೆ ಆಗಿದ್ದರು. ಮದುವೆ ವೇಳೆ ಜ್ಯೋತಿ ಮನೆಯಲ್ಲಿದ್ದ ಚಿನ್ನ ನಗದು ತೆಗೆದುಕೊಂಡು ಹೋಗಿದ್ದಳು. ನಂತರ ವರದಕ್ಷಿಣೆ ತರುವಂತೆ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರೆಂಬ ಆರೋಪ ಕೇಳಿಬಂದಿದೆ.

ವರದಕ್ಷಿಣೆ ಕೊಡುವವರೆಗೂ ತವರು ಮನೆಯವರ ಭೇಟಿಗೆ ಅವಕಾಶ ಕೊಡುವುದಿಲ್ಲವೆಂದು ಹಿಂಸೆ ಕೊಡುತ್ತಿದ್ದರಂತೆ. ಜ್ಯೋತಿ ಭೇಟಿ ಮಾಡಲು ಬಂದಿದ್ದ ತವರು ಮನೆಯವರಿಗೆ ಅವಮಾನ ಮಾಡಿದ್ದರಂತೆ. ಇದರಿಂದ ಬೇಸತ್ತು ಜ್ಯೋತಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಜ್ಯೋತಿಯನ್ನು ಕ್ಯಾಲಿಕಟ್ ಆಸ್ಪತ್ರೆಗೆ ದಾಖಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಆನಂದ್ ಮನೆಯವರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆಂದು ಆರೋಪಿಸಿ ಜ್ಯೋತಿ ಪೋಷಕರು ಅಂತರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

error: Content is protected !!
Scroll to Top
%d bloggers like this: