ICSE 10 ನೇ ತರಗತಿ ಫಲಿತಾಂಶ ಇಂದು ಸಂಜೆ 5 ಗಂಟೆಗೆ ಪ್ರಕಟ

ನವದೆಹಲಿ : ಐಸಿಎಸ್​ಸಿಯ 10 ನೇ ತರಗತಿ ಪರೀಕ್ಷೆ ಫಲಿತಾಂಶ ಇಂದು ಸಂಜೆ 5 ಗಂಟೆಗೆ ಪ್ರಕಟವಾಗಲಿದೆ. ಎಲ್ಲಾ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಬಂದಿದ್ದರೂ, ICSE ರಿಸಲ್ಟ್ ಬಂದಿರಲಿಲ್ಲ. ಈಗ ತಡವಾಗಿ ಫಲಿತಾಂಶ ಬರುತ್ತಿದೆ. ವಿದ್ಯಾರ್ಥಿಗಳು ಟೆನ್ಷನ್ ನಿಂದ ಕಾಯುತ್ತಿದ್ದ ದಿನ ಬಂದಿದೆ. ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸುವುದಾಗಿ ಮಂಡಳಿಯ ಕಾರ್ಯದರ್ಶಿ ಗೆರ್ರಿ ಅರಾಥೂನ್ ಶನಿವಾರ ಮಾಹಿತಿ ನೀಡಿದ್ದಾರೆ.

 

ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್ www.cisce.org ಅಥವಾ www.results.cisce.org ಗೆ ಭೇಟಿ ನೀಡುವ ಮೂಲಕ ಫಲಿತಾಂಶವನ್ನು ನೋಡಬಹುದು. ಅಧಿಕೃತ ವೆಬ್‌ಸೈಟ್‌ನ ಹೊರತಾಗಿ, ವಿದ್ಯಾರ್ಥಿಗಳು ತಮ್ಮ 10 ನೇ ತರಗತಿಯ ಫಲಿತಾಂಶಗಳನ್ನು ಇಲ್ಲಿ ಸಹ ಪರಿಶೀಲಿಸಬಹುದು: results.cisce.org, results.nic.in.

ಐಎಸ್​ಸಿಇ ಈ ಬಾರಿ ಒಂದೇ ಪರೀಕ್ಷಾ ವರ್ಷದಲ್ಲಿ 2 ಪರೀಕ್ಷೆಗಳನ್ನು ನಡೆಸಿದೆ. 2021 ರ ನವೆಂಬರ್ ಮತ್ತು ಡಿಸೆಂಬರ್​ನ ಒಂದನೇ ಸೆಮಿಸ್ಟರ್ ಪರೀಕ್ಷೆ ಮತ್ತು ಐಸಿಎಸ್​ಸಿ (10 ನೇ ತರಗತಿ) ಮತ್ತು ಐಎಸ್​ಸಿ (12 ನೇ ತರಗತಿ) ಈ ವರ್ಷದ ಏಪ್ರಿಲ್/ಮೇ 2ನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲಾಗಿತ್ತು.

ಸಿಐಎಸ್‌ಇ ತರಗತಿ 10ನೇ ತರಗತಿ ಫಲಿತಾಂಶ ಪರಿಶೀಲಿಸುವುದು ಹೇಗೆ..?

ಹಂತ 1: ಕೌನ್ಸಿಲ್‌ನ ವೆಬ್ಸೈಟ್‌ ಮುಖಪುಟದಲ್ಲಿ, ‘ಫಲಿತಾಂಶಗಳು 2022’ ಲಿಂಕ್ ಕ್ಲಿಕ್ ಮಾಡಿ.

ಹಂತ 2: ಐಸಿಎಸ್ಇ / ಐಎಸ್ಸಿ ವರ್ಷ 2022 ರ ಪರೀಕ್ಷಾ ಫಲಿತಾಂಶಗಳನ್ನ ಪ್ರವೇಶಿಸಲು, ಅಭ್ಯರ್ಥಿಯು ಕೋರ್ಸ್ ಆಯ್ಕೆಯಿಂದ ಅನ್ವಯವಾಗುವಂತೆ ಐಸಿಎಸ್ಇ ಆಯ್ಕೆ ಮಾಡಬೇಕು.
ಹಂತ 3: ಐಸಿಎಸ್ಇ ವರ್ಷ 2022ರ ಪರೀಕ್ಷಾ ಫಲಿತಾಂಶಗಳನ್ನ ಪ್ರವೇಶಿಸಲು, ಅಭ್ಯರ್ಥಿಯು ಅವನ / ಅವಳ ವಿಶಿಷ್ಟ ಐಡಿ, ಸೂಚ್ಯಂಕ ಸಂಖ್ಯೆಯನ್ನ ನಮೂದಿಸಬೇಕು. ನಂತರ ಪರದೆಯ ಮೇಲೆ ತೋರಿಸಿರುವಂತೆ ಕ್ಯಾಪ್ಚಾ ನಮೂದಿಸಿ.
ಹಂತ 4: ಈಗ ಪರದೆಯ ಮೇಲೆ ಫಲಿತಾಂಶ ಕಾಣಿಸುತ್ತೆ.

ICSE ಫಲಿತಾಂಶ 2022 ನೋಡಲು ನಿಮ್ಮ ಮೊಬೈಲ್‌ನಲ್ಲಿ ICSE<Space><Unique Id> ಗೆ 09248082883 ಟೈಪ್‌ ಮಾಡುವ ಮೂಲಕ ನೋಡಬಹುದು.

Leave A Reply

Your email address will not be published.