ಬೆಳ್ತಂಗಡಿ : ಧರ್ಮಸ್ಥಳ ದೇವಸ್ಥಾನಕ್ಕೆ ಬಂದ ಮಹಿಳೆ ನೇತ್ರಾವತಿ ಖಾಸಗಿ ಲಾಡ್ಜ್ ನಲ್ಲಿ ಆಕಸ್ಮಿಕ ಸಾವು!

ಬೆಳ್ತಂಗಡಿ : ಧರ್ಮಸ್ಥಳ ದೇವಸ್ಥಾನಕ್ಕೆಂದು ಬಂದು, ಲಾಡ್ಜ್ ನಲ್ಲಿ ನೆಲೆಸಿದ್ದ ಮಹಿಳೆ ಆಕಸ್ಮಿಕವಾಗಿ ಸಾವನ್ನಪ್ಪಿದ ಘಟನೆ ಇಂದು 11 ಗಂಟೆ ಸುಮಾರಿಗೆ ನಡೆದಿದೆ.

ಮೃತರು ಬೆಂಗಳೂರು ಮೂಲದ ನಂದಿನಿ (40).

ಫ್ಯಾಮಿಲಿ ಸಮೇತ ದೇವಸ್ಥಾನಕ್ಕೆಂದು ಬಂದವರು, ನೇತ್ರಾವತಿ ಸಮೀಪದ ಖಾಸಗಿ ಒಂದರ ಲಾಡ್ಜ್ ನಲ್ಲಿ ನೆಲೆಸಿದ್ದರು. ಈ ವೇಳೆ ಮಹಿಳೆಯೋರ್ವರು ಟಾಯ್ಲೆಟ್ ಗೆಂದು ಹೋಗಿದ್ದು, ತುಂಬಾ ಹೊತ್ತಾದರೂ ಬಾರದೇ ಇದ್ದುದನ್ನು ಗಮನಿಸಿದ ಮನೆಯವರು ಹೋಗಿ ಪರಿಶೀಲಿಸಿದ್ದಾರೆ. ಈ ವೇಳೆ ಮಹಿಳೆ ಕೆಳಗೆ ಬಿದ್ದ ಸ್ಥಿತಿಯಲ್ಲಿ ಇದ್ದು , ಕೆನ್ನೆಗೆ ತೀವ್ರವಾದ ಪೆಟ್ಟು ಬಿದ್ದಿತ್ತು ಎನ್ನಲಾಗುತ್ತಿದೆ.

ತಕ್ಷಣ ಉಜಿರೆಯ ಎಸ್ ಡಿಎಂ ಹಾಸ್ಪಿಟಲ್ ಗೆ ಮನೆಯವರು ತಮ್ಮದೇ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ರವಾನಿಸುತ್ತಿರುವಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ನಂತರ ಮೃತ ದೇಹವನ್ನು ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

Leave A Reply