ಬಂಟ್ವಾಳ: ಸಾಲದ ಹಣ ಮರು ಪಾವತಿಸದೆ ವಂಚನೆ!! ಕೇಳಲು ಬಂದ ಮಹಿಳೆಗೆ ಅವಾಚ್ಯ ನಿಂದನೆ-ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲು
ಬಂಟ್ವಾಳ:ಸಾಲ ನೀಡಿದ ಹಣವನ್ನು ಮರಳಿಸದೇ ವಂಚಿಸಿದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆಯೊಂದು ಬೆಳಕಿಗೆ ಬಂದಿದ್ದು ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬಂಟ್ವಾಳ ಠಾಣಾ ವ್ಯಾಪ್ತಿಯ ಸಜೀಪಮುನ್ನೂರು ನಿವಾಸಿ ಜೀನತ್ ಎನ್ನುವ ಮಹಿಳೆಯೊಬ್ಬರು ಪಾಣೆಮಂಗಳೂರು ಮೂಲದ ಆಲಿಯಮ್ಮ ಎಂಬಾಕೆಗೆ ಹಣ ಸಾಲದ ರೀತಿಯಲ್ಲಿ ಸುಮಾರು 7,55000 ಹಣವನ್ನು ನೀಡಿದ್ದು, ಮೊದಲ ಕಂತನ್ನು ಬಿಟ್ಟು ಉಳಿದೆಲ್ಲಾ ಕಂತಿಗೆ ಬಿಸಿರೋಡ್ ನ ವಕೀಲರೊಬ್ಬರ ಮುಖಾಂತರ ಕರಾರು ಪತ್ರಗಳನ್ನು ಮಾಡಿ ಇಬ್ಬರು ಸಾಕ್ಷಿದಾರರನ್ನು ಸಹಿ ಹಾಕಿಸಿಕೊಂಡಿದ್ದರು.
ಆದರೆ ಹಣ ಪಡೆದುಕೊಂಡ ಆಲಿಯಮ್ಮ ಆ ಬಳಿಕ ದಿನಕ್ಕೊಂದು ಹೈಡ್ರಾಮ ಮಾಡಿದ್ದು,ಹಣದ ಕಂತನ್ನು ವಾಪಸ್ಸು ನೀಡದೆ ಸತಾಯಿಸಿಡಿದಲ್ಲದೇ, ಕೇಳಲು ಬಂದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಲಾಗಿದೆ.
ಆರೋಪಿ ಆಲಿಯಮ್ಮ ಈ ಮೊದಲೂ ಇಂತಹ ಕೆಲವೊಂದು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿ ಠಾಣೆಯ ಮೆಟ್ಟಿಲೇರಿದ್ದು, ಈ ಹಿಂದೊಮ್ಮೆ ತನ್ನ ಮಗಳ ಒಡವೆಯನ್ನು ತಾನೇ ಕದ್ದು ಮಾರಾಟ ಮಾಡಿ,ಬಳಿಕ ದರೋಡೆ ನಡೆದಿದೆ ಎಂದು ನಾಟಕ ಮಾಡುತ್ತಾ ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ್ದಳು. ಆದರೆ ಪೊಲೀಸರ ತನಿಖೆಯಿಂದ ಅಸಲಿಯತ್ತು ಬೆಳಕಿಗೆ ಬಂದಿತ್ತು.