ತನ್ನದೇ ಮಗುವನ್ನು ಕೊಂದು ಗೋಣಿಚೀಲದಲ್ಲಿ ತುಂಬಿ ಕೊಳಕ್ಕೆ ಎಸೆದ ಮಹಾತಾಯಿ!

ತಾಯಿಯೆಂದರೆ, ಪ್ರೀತಿ ಮಮಕಾರ ಎಂಬ ನೂರೆಂಟು ಪದಗಳಿಗೆ ಅರ್ಥವಾದವಳು. ಇಂತಹ ಕರುಣಾಮಯಿ ತಾಯಿ ಎಂಬ ಪದಕ್ಕೇಯೇ ವಿರುದ್ಧವಾಗಿ ನಡೆದುಕೊಂಡಿದ್ದಾಳೆ ಈ ಮಹಿಳೆ. ಹೌದು. ತಾಯಿಯೋರ್ವಳು ತನ್ನ 4 ವರ್ಷದ ಮಗನನ್ನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

ತನ್ನ ನಾಲ್ಕು ವರ್ಷದ ಮಗನನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧಿತಳಾದ ಮಹಿಳೆ, 10 ವರ್ಷಗಳ ಹಿಂದೆ ತನ್ನ ಮಗಳನ್ನು ಕೊಂದಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿರುವ ಘಟನೆ ಚಂಡೀಘಡ್​ನಲ್ಲಿ ಜುಲೈ 14 ರಂದು ನಡೆದಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಮಗುವಿನ ತಾಯಿ, ಉತ್ತರ ಪ್ರದೇಶದ ಬಬಿತಾ( 45). ಈಕೆಯ ನಾಲ್ಕು ವರ್ಷದ ಮಗು ಮುಲ್ಲನ್‌ಪುರ ದಖಾದ ಭನೋಹರ್ ಗ್ರಾಮದಲ್ಲಿ ನಾಪತ್ತೆಯಾಗಿತ್ತು. ಈಕೆಯೇ ಮಗುವನ್ನು ಕೊಂದು ಗಂಡನ ಬಳಿ ಮಗು ನಾಪತ್ತೆಯಾಗಿದೆ, ಬಾಲಕ ಕೊನೆಯದಾಗಿ ತಮ್ಮ ಮನೆಯ ಹೊರಗೆ ಆಟವಾಡುತ್ತಿರುವುದು ಕಂಡುಬಂದಿದೆ ಎಂದು ಹೇಳಿಕೊಂಡಿದ್ದಳು. ಅದರ ನಂತರ ಸೈಕಲ್ ರಿಪೇರಿ ಅಂಗಡಿಯನ್ನು ನಡೆಸುತ್ತಿರುವ ಆಕೆಯ ಪತಿ ಶಾಮ್ ಲಾಲ್, ಕೆಲವು ಗ್ರಾಮಸ್ಥರೊಂದಿಗೆ ಕಾಣೆಯಾದ ಮಗುವನ್ನು ಹುಡುಕಲು ಪ್ರಾರಂಭಿಸಿದರು.

ಬಳಿಕ, ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡುವಾಗ, ಬಬಿತಾ ತನ್ನ ತಲೆಯ ಮೇಲೆ ಗೋಣಿಚೀಲದೊಂದಿಗೆ ಹಳ್ಳಿಯ ಮೂಲಕ ಹೋಗುತ್ತಿರುವುದನ್ನು ಅವರು ಗುರುತಿಸಿದರು. ಪತ್ನಿಯೇ ಮಗನನ್ನು ಕೊಂದಿದ್ದಾಳೆ ಎಂಬ ಭಯದಿಂದ ಶಾಮ್ ಲಾಲ್ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವ ಸಬ್ ಇನ್ಸ್‌ಪೆಕ್ಟರ್ ಸುಖಜೀಂದರ್ ಸಿಂಗ್, “ವಿಚಾರಣೆಯ ಸಮಯದಲ್ಲಿ, ಆರೋಪಿಯು ತನ್ನ ಮಗನನ್ನು ಕತ್ತು ಹಿಸುಕಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಅವಳು ಅವನ ದೇಹವನ್ನು ಗೋಣಿ ಚೀಲದಲ್ಲಿ ತುಂಬಿ ಕೊಳಕ್ಕೆ ಎಸೆದಿದ್ದಾಳೆ. ಇದೀಗ ದೇಹವನ್ನು ಕೊಳದಿಂದ ಹೊರತೆಗೆಯಲಾಗಿದೆ ಎಂದು ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ, 10 ವರ್ಷಗಳ ಹಿಂದೆ ತನ್ನ ಆರು ವರ್ಷದ ಮಗಳನ್ನು ಕೊಂದಿರುವುದಾಗಿ ಬಬಿತಾ ಒಪ್ಪಿಕೊಂಡಿದ್ದಾಳೆ. ಗರ್ಭಪಾತವಾಗಲು ಗಟ್ಟಿಯಾದ ವಸ್ತುವಿನಿಂದ ತನ್ನ ಹೊಟ್ಟೆಯನ್ನು ಹೊಡೆದು ಎರಡು ಗರ್ಭಧಾರಣೆಯನ್ನು ನಾಶ ಮಾಡಿದ್ದಾಗಿ ಅವಳು ಒಪ್ಪಿಕೊಂಡಿದ್ದಾಳೆ ಎಂದು ಎಸ್‌ಐ ಹೇಳಿದರು.

ಮಹಿಳೆಯು ಮಾನಸಿಕವಾಗಿ ಅಸ್ಥಿರಳಾಗಿದ್ದಳು. ಅದಕ್ಕಾಗಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದಳು. ತನ್ನ ಮಗಳನ್ನು ಹೇಗೆ ಕೊಂದಿದ್ದಾಳೆ ಎಂಬುದನ್ನು ಮಹಿಳೆ ಇನ್ನೂ ಬಹಿರಂಗಪಡಿಸಿಲ್ಲ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ಮತ್ತು 201 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

error: Content is protected !!
Scroll to Top
%d bloggers like this: