ಸಿದ್ದರಾಮಯ್ಯನವರ ಮೇಲೆ ಹಣ ವಾಪಸ್ ಎಸೆದ ಮುಸ್ಲಿಂ ಮಹಿಳೆ, ಶಾಕಿಂಗ್ ಹೇಳಿಕೆ ಕೊಟ್ಟ ಯು ಟಿ ಖಾದರ್

ಮಹಿಳೆಯೋರ್ವಳು ಮಾಜಿ ಸಿಎಂ ಸಿದ್ದರಾಮಯ್ಯನವರ ಮೇಲೆ ಹಣ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿರೋಧ ಉಪನಾಯಕ ಯು ಟಿ ಖಾದರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ” ಈ ಘಟನೆಯಿಂದ ವ್ಯಕ್ತಿತ್ವಕ್ಕೆ ಯಾವುದೇ ಕುಂದು ಉಂಟಾಗೋದಿಲ್ಲ” ಎಂದು ಹೇಳಿದ್ದಾರೆ.

ಬಾಗಲಕೋಟೆ ನಗರಕ್ಕೆ ಭೇಟಿ ನೀಡಿದ ಸಮಯದಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡುತ್ತಾ ಅವರು, ಸದನದ ಒಳಗೆ ಮತ್ತು ಹೊರಗೆ ಯಾರಿಗಾದ್ರು ತೊಂದರೆ, ಶೋಷಣೆಯಾದಲ್ಲಿ ಕಾಂಗ್ರೆಸ್ ಪಕ್ಷದಿಂದ ಧ್ವನಿ ಎತ್ತಿದವರೇ ಸಿದ್ದರಾಮಯ್ಯನವರು. ನ್ಯಾಯ ಕೊಡಿಸಿ ಅಂತ ಕೇಳಿದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇಲ್ಲ. ಸಿದ್ದರಾಮಯ್ಯ ಸಿಎಂ ಸಹ ಈಗ ಅಲ್ಲ. ನಮ್ಮಿಂದ ಹೋರಾಟದ ಮಾತ್ರ ಸಾಧ್ಯ. ಸಿದ್ದರಾಮಯ್ಯನವರು ನೊಂದವರ ಬಗ್ಗೆ ಅನುಕಂಪ ತೋರಿಸಿ ವೈಯಕ್ತಿಕ ಸಹಾಯ ಮಾಡಲು ಬಂದಿದ್ದರು. ಮಹಿಳೆ ಮೊದಲು ಬೇಡ ಎಂದು ನಿರಾಕರಿಸಿ ನಂತರ ಮನಬದಲಿಸಿ ಹಣ ಸ್ವೀಕರಿಸಿದ್ದಾರೆ. ಆದರೂ ಕೂಡ ಇದು ಕೋಮುವಾದಿಗಳಿಗೆ ಪ್ರೇರಣೆಯಿಂದಾಗಿ, ಮಹಿಳೆಯೊಬ್ಬಳು ಬೇರೆಯವರ ಕುಮ್ಮಕ್ಕಿನಿಂದ ಈ ರೀತಿ ಮಾಡಿದ್ದಾರೆ’ ಎಂದು ಹೇಳಿದ್ದಾರೆ.

ಈ ರೀತಿ ಮಾಡುವುದರಿಂದ ಕೋಮುವಾದಿಗಳಿಗೆ ಮತ್ತಷ್ಟು ಪ್ರೇರಣೆ ನೀಡಿದಂತಾಗುತ್ತೆ. ಮತ್ತಷ್ಟು ಗಲಭೆ ಮಾಡಲು ಪ್ರೇರಣೆ ಆಗುತ್ತೆ ಎಂದು ತಿಳಿಸಿದ ಖಾದರ್ ಅವರು, ಅನ್ಯಾಯ ಮಾಡಿದವರಿಗೆ ಸಂತೋಷವಾಗುತ್ತೆ. ಈ ಘಟನೆಗೆ ಕೆಲವರು ಕುಮ್ಮಕ್ಕು ನೀಡುತ್ತಾರೆ. ಅವರಿಗೂ ಖಂಡಿತವಾಗಿ ಪಶ್ಚಾತ್ತಾಪವಾಗುತ್ತೆ ಅಂತ ಹೇಳಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.