ಮದ್ಯದ ಬಾಟಲಿ ಬ್ಯಾಗ್ ನಲ್ಲಿ ಹಾಕಿಕೊಂಡು ಶಾಲೆಗೆ ಬಂದ ಬಾಲಕ | ಅನಂತರ ಆದ ಪಜೀತಿ ಯಾರಿಗೂ ಬೇಡ…

ನಾಟಿ ಮದ್ಯದ ಬಗ್ಗೆ ಎಲ್ಲರಿಗೂ ತಿಳಿದಿರಬಹುದು. ದೇಶದ ವಿವಿಧ ಭಾಗಗಳಲ್ಲಿ ನಾಟಿ ಮದ್ಯ ಚಿರಪರಿಚಿತ. ಕರ್ನಾಟಕ ಕೊಡಗಿನಲ್ಲಿ ಹಣ್ಣು ಹೂವಿನ ರುಚಿಯಾದ ವೈನ್ ತಯಾರಿಸಿದ ಹಾಗೆಯೇ ಆಯಾ ಪ್ರದೇಶಗಳಲ್ಲಿ ಲಭ್ಯವಿರುವಂತಹ ಹಣ್ಣು ತರಕಾರಿ, ಹೂಗಳನ್ನು ಬಳಸಿ ಮನೆಯಲ್ಲಿಯೇ ಮದ್ಯ ತಯಾರಿಸುವ ಬಹಳಷ್ಟು ಮಂದಿ ಇದ್ದಾರೆ.

 

ಕೇರಳದ ಕೆಲವು ಭಾಗಗಳಲ್ಲಿ ದೇಸಿ ಮದ್ಯ ಮಾಡುತ್ತಾರೆ. ಆದರೆ ಇದು ಅಕ್ರಮ. ಕಾನೂನಿಗೆ ವಿರುದ್ಧ. ಮದ್ಯವನ್ನು ತಯಾರಿಸಿ ಮಾರಾಟ ಮಾಡುವ ಹಾಗಿಲ್ಲ. ತಯಾರಿಸುವ ಹಾಗೆಯೇ ಇಲ್ಲ. ಆದರೆ ಬಹಳಷ್ಟು ಜನರು ಸ್ವಂತ ಬಳಕೆಗಾಗಿ ಈ ಮದ್ಯ ತಯಾರಿಸುತ್ತಾರೆ. ಆದರೆ ಕೇರಳದಲ್ಲಿ ಒಂದು ಘಟನೆ ನಡೆದಿದೆ. ಈ ಘಟನೆ ಬಗ್ಗೆ ನಗಬೇಕೋ, ಕೋಪ ಮಾಡಬೇಕೋ ಒಂದೂ ತಿಳಿಯೋದಿಲ್ಲ. ವಿದ್ಯಾರ್ಥಿ ಸ್ಕೂಲ್ ಬ್ಯಾಗ್‌ನಲ್ಲಿ ಮದ್ಯದ ಬಾಟಲಿ ತೆಗೆದುಕೊಂಡು ಬಂದಿರುವ ಘಟನೆ ಕೇರಳದಲ್ಲಿ ನಡೆದಿದೆ.

ಹೌದು, ಈ ಬಾಲಕನಿಗೆ ಯಾಕೆ ಹಾಗೆ ಅನಿಸುತ್ತೋ ಮದ್ಯದ ಬಾಟಲಿಯನ್ನು ಶಾಲೆಗೆ ತಗೊಂಡು ಹೋಗಿದ್ದಾನೆ. ಮನೆಯಲ್ಲಿ ತಯಾರಿಸಿದ ಮದ್ಯ ಅತಿಯಾದ ಘಾಟು ಹಾಗೂ ಗ್ಯಾಸ್ ಹೊಂದಿರುವ ಕಾರಣ ಇದರ ಹನಿ ಸಿಕ್ಕಿದರೂ ಸಿಕ್ಕಿಬೀಳುವುದು ಭಾರೀ ಸುಲಭ. ಹಾಗಾಗಿಯೇ ರೈಡ್‌ಗಳಾದಾಗ ಯಾರಿಗೂ ತಿಳಿಯದಿರಲು ಬಹಳಷ್ಟು ಕಡೆಗಳಲ್ಲಿ ಕಳ್ಳಭಟ್ಟಿ ಮಣ್ಣಿನಡಿಗೆ ಹೂತಿಡಲಾಗುತ್ತದೆ.

ಆದರೆ ಈ ವಿದ್ಯಾರ್ಥಿ ಬ್ಯಾಗ್‌ನಲ್ಲಿ ಮದ್ಯವನ್ನಿಟ್ಟುಕೊಂಡು ಶಾಲೆಗೆ ತಂದು ಗ್ಯಾಸ್ ತುಂಬಿದಂತಾಗಿ ಬಾಟಲಿ ಮುಚ್ಚಳ ದಿಢೀರ್ ಓಪನ್ ಆಗಿ ದೂರ ಹಾರಿಹೋಗಿ ಬಿದ್ದಿದೆ. ಬಾಟಲಿಯಲ್ಲಿದ್ದ ಮದ್ಯವೂ ಚೆಲ್ಲಿದೆ. ಈ ದಿಢೀರ್ ಬೆಳವಣಿಗೆ ನೋಡಿದ ಸಹಪಾಠಿಗಳು ಬೆಚ್ಚಿ ಬಿದ್ದಿದ್ದಾರೆ.

ಕೂಡಲೇ ಹೆದರಿದ ಮಕ್ಕಳೆಲ್ಲರೂ ಈ ಬಗ್ಗೆ ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಮದ್ಯ ತರಗತಿಗೆ ತಂದಿದ್ದು ಬಾಟಲಿಯ ಮುಚ್ಚಳ ಓಪನ್ ಆಗಿದ್ದು ಸೇರಿ ಇಡೀ ಘಟನೆಯನ್ನು ನೋಡಿ ಶಿಕ್ಷಕರೇ ಶಾಕ್ ಆಗಿದ್ದಾರೆ. ಸಾವರಿಸಿಕೊಂಡ ಶಿಕ್ಷಕರು ನಂತರ ವಿದ್ಯಾರ್ಥಿಯನ್ನು ವಿಚಾರಿಸಿ ಸಮಾಲೋಚನೆಗೆ ಸಿದ್ಧತೆ ಮಾಡಿದ್ದಾರೆ.

Leave A Reply

Your email address will not be published.