ಉದಯೋನ್ಮುಖ ನಟ, ದಿಯಾ ಖ್ಯಾತಿಯ ಪೃಥ್ವಿ ಅಂಬರ್ ತಾಯಿ ಸುಜಾತ ವೀರಪ್ಪ ಅಂಬರ್ ಹೃದಯ ಸಂಬಂಧಿ ಕಾಯಿಲೆಯಿಂದ ಇಂದು (ಜುಲೈ 15) ಮಂಗಳೂರಿನಲ್ಲಿ ನಿಧನರಾಗಿದ್ದಾರೆ.
ಸುಜಾತ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ನೇತಾರರಾದ ಶ್ರೀ ವೀರಪ್ಪ ಅಂಬಾರ್ ಅವರ ಧರ್ಮಪತ್ನಿಯಾಗಿದ್ದು ದುರ್ಗಾಪರಮೇಶ್ವರಿ ಮಹಿಳಾ ಸಂಘದ ಕಾರ್ಯದರ್ಶಿಯಾಗಿದ್ದ ಸುಜಾತ ಅವರು ಹಲವು ರೀತಿಯ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

You must log in to post a comment.