ಪಿಯುಸಿ ವಿದ್ಯಾರ್ಥಿಗಳೇ ನಿಮಗೆ ಸಿಹಿಸುದ್ದಿ | ದೇಶದ ಶ್ರೇಷ್ಠ 20 ಇಂಜಿನಿಯರಿಂಗ್ ಕಾಲೇಜುಗಳ ಲಿಸ್ಟ್ ಇಲ್ಲಿದೆ

ಭಾರತದಲ್ಲಿ ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ ಪದವಿ ಮತ್ತು ಇತರ ಕೋರ್ಸ್‌ಗಳಿಗೆ ಈ ವರ್ಷ ಪ್ರವೇಶ ಪಡೆಯಲಿರುವ ವಿದ್ಯಾರ್ಥಿಗಳಿಗೆ ನಿಮಗೊಂದು ಸಿಹಿ ಸುದ್ದಿ ಇದೆ. 12 ನೇ ತರಗತಿ ಪಾಸ್ ಆದ ವಿದ್ಯಾರ್ಥಿಗಳು NIRF ಶ್ರೇಯಾಂಕ 2022 ರ ಪ್ರಕಟಣೆಯಿಂದ ಭಾರಿ ಪ್ರಯೋಜನವನ್ನು ಪಡೆಯಲಿದ್ದಾರೆ. ಭಾರತ ಸರ್ಕಾರವು ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (NIRF) ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ.

 

ಸಂಶೋಧನೆ, ವಿಶ್ವವಿದ್ಯಾನಿಲಯ, ನಿರ್ವಹಣೆ, ಕಾಲೇಜು, ಫಾರ್ಮಸಿ, ವೈದ್ಯಕೀಯ, ಎಂಜಿನಿಯರಿಂಗ್, ಆರ್ಕಿಟೆಕ್ಚರ್ ಮತ್ತು ಒಟ್ಟಾರೆ ವಿಭಾಗಗಳಲ್ಲಿ ಯಾವ ಸಂಸ್ಥೆ ಉತ್ತಮವಾಗಿದೆ ಎಂಬುದನ್ನು ತಿಳಿಯಲು ಈ ಶ್ರೇಯಾಂಕವು ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ.

ಎನ್‌ಐಆರ್ಆಫ್ ಶ್ರೇಯಾಂಕ 2022, ಒಟ್ಟಾರೆ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಲ್ಲಿ ದೇಶದ ಅತ್ಯುತ್ತಮ ಸಂಸ್ಥೆಗಳನ್ನು ಪಟ್ಟಿ ಮಾಡಿದೆ. ಇದರಲ್ಲಿ ಇಂಜಿನಿಯರಿಂಗ್ ಕೂಡ ಸೇರಿದೆ. ಶಿಕ್ಷಣ ಸಚಿವಾಲಯವು ಬಿಡುಗಡೆ ಮಾಡಿದ ಎನ್‌ಐಆರ್‌ಆಫ್‌ ಇಂಜಿನಿಯರಿಂಗ್ ಶ್ರೇಯಾಂಕ 2022 ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (IT) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NIT)ಯ ಹೆಚ್ಚಿನ ಕಾಲೇಜುಗಳು ಟಾಪ್ 10 ಕಾಲೇಜುಗಳಾಗಿವೆ.

  1. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT),ಮದ್ರಾಸ್
  2. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT), ದೆಹಲಿ
  3. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT), ಬಾಂಬೆ
  4. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ( IIT) ಕಾನ್ಪುರ
  5. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
    (IIT), ಖರಗ್‌ಪುರ
  6. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
    (IIT), ರೂರ್ಕಿ
  7. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT), ಗುವಾಹಟಿ
  8. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NIT), ತಿರುಚಿರಾಪಳ್ಳಿ
  9. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
    (IIT), ಹೈದರಾಬಾದ್
  10. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NIT), ಕರ್ನಾಟಕ, ಸುರತ್ಕಲ್
  11. ಜಾದವ್‌ಪುರ ವಿಶ್ವವಿದ್ಯಾಲಯ, ಕೋಲ್ಕತ್ತಾ
  12. ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತಮಿಳುನಾಡು
  13. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT)(BHU) ವಾರಣಾಸಿ
  14. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
    (ಇಂಡಿಯನ್ ಸ್ಕೂಲ್ ಆಫ್ ಮೈನ್ಸ್), ಧನ್ಬಾದ್
  15. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
    (NIT) ರೂರ್ಕೆಲಾ
  16. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಇಂದೋರ್
  17. ಅಣ್ಣಾ ವಿಶ್ವವಿದ್ಯಾಲಯ, ಚೆನ್ನೈ
  18. ಇನ್ಸಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ, ಮುಂಬೈ
  19. ಅಮೃತ ವಿಶ್ವ ವಿದ್ಯಾಪೀಠ, ಕೊಯಮತ್ತೂರು
  20. ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ,
    ಮಂಡಿ

Leave A Reply

Your email address will not be published.