ಬೆಳ್ತಂಗಡಿ: ಮನೆ ಮೇಲೆ ಮರ ಬಿದ್ದು, ವೃದ್ಧೆ ಗಂಭೀರ
ಗಾಯಗೊಂಡ ಘಟನೆ ಕೊಟ್ಟೂರು ಗ್ರಾಮದ ಆದರ್ಶ ನಗರದಲ್ಲಿ ನಡೆದಿದೆ.
ಗಂಭೀರ ಗಾಯಗೊಂಡ ವೃದ್ಧೆ ಕಮಲ(75) ಎಂದು ತಿಳಿದುಬಂದಿದೆ.
ಮನೆಯಲ್ಲಿ ಅಜ್ಜಿ ಕಮಲ ಮೊಮ್ಮಕ್ಕಳಾದ ಪವಿತ್, ಪರೀಕ್ಷಿತಾರ ಜೊತೆ ಇದ್ದಾಗ, ದೂಪದ ಮರ ಮನೆ ಮೇಲೆ ಬಿದ್ದು ಅನಾಹುತ ಸಂಭವಿಸಿದೆ. ವೃದ್ಧೆಯ ಕೈ ಮತ್ತು
ಕಾಲಿಗೆ ಗಂಭೀರ ಗಾಯವಾಗಿದ್ದು, ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ವೃದ್ಧೆಗೆ ಚಿಕಿತ್ಸೆ ನೀಡಲಾಗಿದೆ. ಘಟನೆಯಲ್ಲಿ ಪರೀಕ್ಷಿತಾಳಿಗೂ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಮತ್ತು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಾಮ್, ಕಂದಾಯ ನಿರೀಕ್ಷಕ ಪ್ರತೀಷ್, ಗ್ರಾಮ ಲೆಕ್ಕಿಗಾ ಸಿದ್ದೇಶ್ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
You must log in to post a comment.