ಕಡಬ: ಕಂದಾಯ ನಿರೀಕ್ಷಕ ಅವೀನ್ ಕುಮಾರ್ ರಂಗತ್ತಮಲೆ ಬೆಳ್ತಂಗಡಿಗೆ ವರ್ಗಾವಣೆ!!

Share the Article

ಕಡಬ: ಕಂದಾಯ ಇಲಾಖಾ ಕಡಬ ಹೋಬಳಿಯ ಕಂದಾಯ ನಿರೀಕ್ಷಕರಾಗಿದ್ದ ಅವಿನ್ ರಂಗತ್ತಮಲೆ ಅವರನ್ನು ಬೆಳ್ತಂಗಡಿ ತಾಲೂಕು ಕಚೇರಿಗೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.

ಕಳೆದ ನವೆಂಬರ್ ನಲ್ಲೇ ವರ್ಗಾವಣೆ ಆದೇಶ ಹೊರಡಿಸಲಾಗಿದ್ದರೂ, ಅವಧಿಗೂ ಮುನ್ನ ಬೇರೆ ಯಾವುದೇ ಕೆಲಸದ ಜಾಗ ತೋರಿಸದೆ ವರ್ಗಾಯಿಸಿದ್ದಾರೆ ಎನ್ನುವ ಕಾರಣಕ್ಕಾಗಿ ಆದೇಶವನ್ನು ರದ್ದು ಪಡಿಸಲು ವಕೀಲರ ಮುಖಾಂತರ ಅರ್ಜಿ ಸಲ್ಲಿಸಲಾಗಿತ್ತು.

ಸದ್ಯ ಬೆಳ್ತಂಗಡಿ ತಾಲೂಕು ಕಚೇರಿಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದ್ದು, ಕಡಬದ ನೂತನ ಕಂದಾಯ ನಿರೀಕ್ಷಕರಾಗಿ ಬೆಳ್ತಂಗಡಿ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ಪೃಥ್ವಿರಾಜ್ ಅವರನ್ನು ಅಧಿಕೃತವಾಗಿ ನೇಮಿಸಿ ಕಂದಾಯ ಇಲಾಖಾ ಅಧೀನ ಕಾರ್ಯದರ್ಶಿ ಹರೀಶ್ ಆದೇಶಿಸಿದ್ದಾರೆ.

Leave A Reply