ಪ್ರವಾಹ ಪರಿಶೀಲನೆ ಸಂದರ್ಭ ಕೆಸರಲ್ಲಿ ಕಾಲು ಸಿಕ್ಕಾಕಿಕೊಂಡು ಪರದಾಡಿದ ಸಚಿವ!!!
ಕಳೆದ 15 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ.
ಎಲ್ಲಿ ನೋಡಿದರೂ ಅಲ್ಲಿ ಭೂಕುಸಿತ, ಗುಡ್ಡಕುಸಿತ, ರಸ್ತೆಗಳು ಕೆಸರು ಹಾಗೂ ಮಣ್ಣಿನಿಂದ ತುಂಬಿಕೊಂಡಿದೆ. ಅಷ್ಟು ಮಾತ್ರವಲ್ಲದೇ ಕೃಷಿ ಭೂಮಿ ಜಲಾವೃತಗೊಂಡು ನಾಶವಾಗಿರುವ ದೃಶ್ಯಗಳೇ ಹೆಚ್ಚಾಗಿ ಕಂಡು ಬರುತ್ತಿವೆ.
ವರುಣನ ಈ ಆರ್ಭಟದಿಂದ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ. ಸಚಿವರೊಬ್ಬರು ಈ ಮಳೆ ಹಾನಿಯಾದ ಪ್ರದೇಶದ ವೀಕ್ಷಣೆ ಮತ್ತು ಪರಿಶೀಲನೆಗಾಗಿ ಹೋಗಿದ್ದಾಗ ಕಾಲು ಕೆಸರಲ್ಲಿ ಸಿಲುಕಿಗೊಂಡಿದೆ. ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಕಾಲು ಕೆಸರಿನಲ್ಲಿ ಸಿಲುಕಿ ಪರದಾಡಿದ ಪ್ರಸಂಗವೊಂದು ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಅರೆನೂರಿನಲ್ಲಿ ಗುಡ್ಡ ಕುಸಿತವುಂಟಾಗಿ “ಕಾಫಿ ತೋಟಗಳೆಲ್ಲಾ ಮಣ್ಣು ಮತ್ತು ನೀರು ಪಾಲಾಗಿದ್ದು, ಪರಿಶೀಲನೆಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸಚಿವರ ಕಾಲು ಕಾಫಿ ತೋಟದ ಕೆಸರಿನಲ್ಲಿ ಸಿಲುಕಿಕೊಂಡಿದ್ದು, ಕೆಸರಿನಿಂದ ಕಾಲು ಹೊರತೆಗೆಯಲಾಗದೇ ಸಚಿವರು ಪರದಾಡಿದ್ದಾರೆ.
ತಕ್ಷಣ ಅಲ್ಲಿನ ಸ್ಥಳೀಯರು ಸಚಿವರಿಗೆ ಕಾಲನ್ನು ತೆಗೆಯಲು ಸಹಕರಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.