ಜನಪ್ರಿಯ ಇನ್‌ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸಪ್ ತನ್ನ ಬಳಕೆದಾರರಿಗೆ ಹಲವಾರು ಆಕರ್ಷಕ ವೈಶಿಷ್ಟ್ಯ ಪರಿಚಯಿಸುತ್ತಾ ಇದೆ. ಇದೀಗ ಮತ್ತೊಂದು ಅಚ್ಚರಿ ಬೆಳವಣಿಗೆಯೊಂದರಲ್ಲಿ WhatsApp ಸ್ಟೇಟಸ್ ನಲ್ಲಿ ಇನ್ನೊಂದು ಅಪ್‌ಡೇಟ್ ಪರಿಚಯಿಸಲು ಸಜ್ಜಾಗಿದೆ ಎಂಬ ಮಾಹಿತಿ ಇದೆ.
ವಾಟ್ಸಪ್ ಬೀಟಾ ಟ್ರ್ಯಾಕರ್ WABetalnfo ಹಂಚಿಕೊಂಡಿರುವ ಇತ್ತೀಚಿನ ಮಾಹಿತಿಯಲ್ಲಿ , ವಾಟ್ಸಪ್ ಸ್ಟೇಟಸ್ ಅನ್ನು ಹಾಕುವಾಗ ಅದರಲ್ಲಿ ಫೋಟೋಗಳು ಮತ್ತು ವೀಡಿಯೊಗಳ ಜೊತೆಗೆ ‘ಆಡಿಯೋ ನೋಟ್’ ಗಳನ್ನೂ ಸಹ ಶೇರ್ ಮಾಡಿಕೊಳ್ಳಬಹುದಾದ ಆಯ್ಕೆಯನ್ನು ಶೀಘ್ರದಲ್ಲೇ ತರಲಾಗುತ್ತಿದೆ ಎಂದು ಹೇಳಲಾಗಿದೆ. ಈ ಆಡಿಯೋ ನೋಟ್ ವೈಶಿಷ್ಟ್ಯವನ್ನು ‘ವಾಟ್ಸಾಪ್ ವಾಯ್, ಸೇಟಸ್’ ಎಂದು ಕರೆಯಬಹುದು ಎಂದು ಎಂದು WABetalnfo ವರದಿಯು ಹೇಳಿದೆ.
ಕಾರ್ಯನಿರ್ವಹಣೆ ಹೇಗೆ ? ಸ್ಟೇಟಸ್ ಟ್ಯಾಬ್‌ನ ಕೆಳಭಾಗದಲ್ಲಿ ಹೊಸ ಆಯ್ಕೆ ಅಥವಾ ಐಕಾನ್ ಇರುತ್ತದೆ. ಇದರ ಮೂಲಕ ಬಳಕೆದಾರರು ಸ್ಟೇಟಸ್ ಅಪ್ಡೇಟ್ ಗಳಲ್ಲಿ ವಾಯ್ಸ್ ನೋಟ್ ಗಳನ್ನು ಬಳಸಬಹುದು ಎಂದು ತಿಳಿಸಿದೆ. ಮೈಕ್ (ವಾಯ್ಸ್ ನೋಟ್ ಐಕಾನ್) ಸ್ಥಿತಿ ವಿಂಡೋದ ಕೆಳಭಾಗದಲ್ಲಿ ಎಡಿಟ್ ಮತ್ತು ಕ್ಯಾಮೆರಾ ಐಕಾನ್ ನಲ್ಲಿ ಕಾಣಿಸಿಕೊಳ್ಳುತ್ತದೆ. ಧ್ವನಿಯನ್ನು ರೆಕಾರ್ಡ್ ಮಾಡಲು, ಅಪ್‌ಲೋಡ್ ಮಾಡಲು ನೀವು ಐಕಾನ್ ಅನ್ನು ಒತ್ತಿ ಹಿಡಿಯಬೇಕಾಗುತ್ತದೆ. ಈ ವೈಶಿಷ್ಟ್ಯವು Android 2.22.16.3 ಅಪ್‌ಡೇಟ್‌ಗಾಗಿ WhatsApp ಬೀಟಾದಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.
You must log in to post a comment.