ಜೈಲಿನಲ್ಲಿರುವ ತನ್ನ ಬಾಯ್ ಫ್ರೆಂಡ್ ಗಾಗಿ ಗುಪ್ತಾಂಗದಲ್ಲಿ ಗಾಂಜಾ ಬಚ್ಚಿಟ್ಟು ತಂದ ಗರ್ಲ್ ಫ್ರೆಂಡ್| ಮುಂದೇನಾಯ್ತು?

ಎರಡೂ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಮಹಿಳೆಯರು ಗಾಂಜಾ ಕೇಸಲ್ಲಿ ಸಿಕ್ಕಿಬಿದ್ದಿರುವುದು ನಿಜಕ್ಕೂ ಕುತೂಹಲ ಮೂಡಿಸುತ್ತದೆ. ಗಾಂಜಾ ಸಪ್ಲೈ ಈ ರೀತಿ ಕೂಡಾ ಮಾಡಬಹುದಾ ? ಅದು ಕೂಡಾ ಪೊಲೀಸರ ಭಯ ಭೀತಿಯಿಲ್ಲದೇ ? ಏನು ಎಂತ ಎತ್ತ ಎಂದು ನಾವು ಇಲ್ಲಿ ಕೆಳಗೆ ನೀಡಿದ್ದೇವೆ.

 

ಜೈಲಿನಲ್ಲಿರುವ ತನ್ನ ಗೆಳೆಯನಿಗೋಸ್ಕರ ಏನೋ ಮಾಡಲು ಹೋಗಿ ಏನೋ ಮಾಡಿದೆ ಎನ್ನುವ ಹಾಗೇ ಮಾಡಿ ಈಗ ಈ ಇಬ್ಬರು ಮಹಿಳೆಯರು ಪೊಲೀಸ್ ಅತಿಥಿಯಾಗಿದ್ದಾರೆ. ಈ ಇಬ್ಬರು ಕೈದಿಗಳ ಗೆಳತಿಯರು ಅವರಿಗೆ ಗಾಂಜಾ ಪೂರೈಸುವ ಸಲುವಾಗಿ ತಮ್ಮ ಗುಪ್ತಾಂಗದಲ್ಲಿ ಗಾಂಜಾ ಇಟ್ಟುಕೊಂಡು ಬಂದಿದ್ದು, ಇದೀಗ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಡೆದಿದೆ.

ಚಾಮರಾಜಪೇಟೆಯ ಸಂಗೀತಾ ಎಂಬಾಕೆ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ತನ್ನ ಗೆಳೆಯ ಲೋಹಿತ್ ಗೆ ಗಾಂಜಾ ನೀಡಲು ಗುಪ್ತಾಂಗದಲ್ಲಿ 220 ಗ್ರಾಂ ಅಶಿಶ್ ಎಣ್ಣೆ ಪ್ಯಾಕೆಟ್ ಅನ್ನು ಇಟ್ಟುಕೊಂಡು ಬಂದಿದ್ದಳು.

ಸಂದರ್ಶನದ ನೆಪದಲ್ಲಿ ಬಂದ ಆಕೆಯ ನಡಿಗೆ ಕುರಿತು ಅನುಮಾನಗೊಂಡ ಜೈಲಿನ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ಮಹಿಳಾ ಪೊಲೀಸರ ಮೂಲಕ ತಪಾಸಣೆ ನಡೆಸಿದಾಗ ಇದು ಬೆಳಕಿಗೆ ಬಂದಿದೆ.

ಮತ್ತೊಂದು ಪ್ರಕರಣದಲ್ಲಿ ಶಿವಮೊಗ್ಗ ಜಿಲ್ಲೆ ಭದ್ರಾವತಿ
ತಾಲೂಕಿನ ಛಾಯಾ ಎಂಬಾಕೆ ಜೈಲಿನಲ್ಲಿದ್ದ ತನ್ನ ಗೆಳೆಯ ಕಾಳಪ್ಪ ಎಂಬಾತನ ಭೇಟಿಗೆ ಬಂದಿದ್ದು, ತನ್ನ ಗುಪ್ತಾಂಗದಲ್ಲಿ 50 ml ಕೊಬ್ಬರಿ ಎಣ್ಣೆ ಬಾಟಲಿಯಲ್ಲಿ ಅಶಿಶ್ ಆಯಿಲ್ ತುಂಬಿ ಗೆಳೆಯನಿಗೆ ಕೊಡಲು ಮುಂದಾಗಿದ್ದಳು. ಈಕೆ ಕೂಡ ಈಗ ಸಿಕ್ಕಿಬಿದ್ದಿದ್ದಾಳೆ.

ಇವರಿಬ್ಬರ ಧೈರ್ಯ ಮೆಚ್ಚಲೇಬೇಕು. ಪೊಲೀಸರಿದ್ದಾರೆ, ಅಲ್ಲಿಗೇ ಹೋಗುವುದು ನಾವು ಅದೂ ಕೂಡಾ ಕೈದಿ ಭೇಟಿಯಾಗಲು ಎಂಬುದರ ಪರಿವೇ ಇದ್ದು ಈ ರೀತಿ ಮಾಡಿರುವುದು ನಿಜಕ್ಕೂ ಆಶ್ಚರ್ಯಕರ.

Leave A Reply

Your email address will not be published.