ಕೊಡಗು :ಚೆಂಬು, ಗೂನಡ್ಕದಲ್ಲಿ ಮತ್ತೆ ನಡುಗಿದ ಭೂಮಿ !

ಸುಳ್ಯ : ಸುಳ್ಯ ತಾಲೂಕಿನ ತೊಡಿಕಾನ, ಗೂನಡ್ಕ ಹಾಗೂ ಕೊಡಗು ಜಿಲ್ಲೆಯ ಚೆಂಬು ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ 10.08 ರ ಸುಮಾರಿಗೆ ಮತ್ತೆ ಭೂಮಿ ಕಂಪಿಸಿದೆ. ಇದರ ಅನುಭವ ಹಲವರಿಗೆ ಆಗಿದೆ.

 

ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದೆ ಎಂದು ಜನರು ಹೇಳಿದ್ದಾರೆ. ಈ ಸದ್ದು ಹಾಗೂ ಕಂಪನವು ಅರಂತೋಡು, ಸಂಪಾಜೆ, ಗೂನಡ್ಕ ಹಾಗೂ ಆಸುಪಾಸಿನ ಪ್ರದೇಶದಲ್ಲಿ ಕೇಳಿದೆ. ಕಳೆದ ಕೆಲವು ದಿನಗಳಿಂದ ಆಗಾಗ ಭೂಮಿ ಕಂಪಿಸಿದೆ. ಸುಮಾರು 10 ಕ್ಕೂ ಅಧಿಕ ಬಾರಿ ಇದುವರೆಗೆ ಭೂಮಿ ಕಂಪಿಸಿದೆ. ಜನರಿಗೆ ಆತಂಕ ಇನ್ನಷ್ಟು ಹೆಚ್ಚಾಗಿದೆ.

ಹೆಚ್ಚಿನ ಜನರು ಗುಡ್ಡ ಪ್ರದೇಶದಲ್ಲಿ ವಾಸವಿರುವುದರಿಂದ ಜನರಿಗೆ ಭೂಕಂಪನದಿಂದಾಗಿ ಗುಡ್ಡ ಜರಿಯಬಹುದು ಎನ್ನುವ ಭಯದ ವಾತಾವರಣ ನಿರ್ಮಾಣವಾಗಿದೆ.

Leave A Reply

Your email address will not be published.