‘ಪಾನಿಪುರಿ’ಯಿಂದ ಕಾಡುತ್ತೆ ಈ ಕಾಯಿಲೆ!!

‘ಪಾನಿಪುರಿ’ ಪ್ರತಿಯೊಬ್ಬರ ಫೇವರಿಟ್ ಆಗಿದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸೇವಿಸುತ್ತಾರೆ. ಆದ್ರೆ, ಪಾನಿಪುರಿ ಕಾರಣವಾಗುತ್ತೆ ಅಂತೆ ಈ ರೋಗಕ್ಕೆ. ಹೌದು. ತೆಲಂಗಾಣದಲ್ಲಿ ಹೆಚ್ಚಿನ ಸಂಖ್ಯೆಯ ಟೈಫಾಯಿಡ್ ಪ್ರಕರಣಗಳು ದಾಖಲಾಗುತ್ತಿರುವುದಕ್ಕೆ ʻಪಾನಿ ಪುರಿʼ ಕಾರಣ ಎಂದು ತೆಲಂಗಾಣದ ಉನ್ನತ ಆರೋಗ್ಯ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ.

ಸಾರ್ವಜನಿಕ ಆರೋಗ್ಯ ನಿರ್ದೇಶಕ ಡಾ.ಜಿ.ಶ್ರೀನಿವಾಸ ರಾವ್ ಮಂಗಳವಾರ ಮಾತನಾಡಿ, ಟೈಫಾಯಿಡ್ ಅನ್ನು ಪಾನಿಪುರಿ ಕಾಯಿಲೆ ಎಂದು ಕರೆಯಬಹುದು. ಟೈಫಾಯಿಡ್ ಮತ್ತು ಇತರ ಕಾಲೋಚಿತ ಕಾಯಿಲೆಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರಸ್ತುತ ಮಳೆಗಾಲದಲ್ಲಿ ಜನರು ಪಾನಿ ಪುರಿ ಮತ್ತು ಇತರ ಬೀದಿ ಆಹಾರವನ್ನು ತ್ಯಜಿಸಲು ಸಲಹೆ ನೀಡಿದರು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ರಸ್ತೆ ಬದಿ ಅಂಗಡಿಗಳಲ್ಲಿ ಹಲವಾರು ಪಾನಿ ಪುರಿಯನ್ನು ತಿನ್ನುವ ಅನೇಕ ಜನರ ಅಭ್ಯಾಸವನ್ನು ಉಲ್ಲೇಖಿಸಿದ ಅವರು, ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಒತ್ತಾಯಿಸಿದರು. ‘ನಿಮಗೆ ಪಾನಿ ಪುರಿ 10-15 ರೂ.ಗೆ ಸಿಗಬಹುದು. ಆದರೆ, ನಾಳೆ ಕಾಯಿಲೆಗೆ ಒಳಗಾದರೆ, ಆಸ್ಪತ್ರೆಗೆ 5,000-10,000 ರೂ. ಖರ್ಚು ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ಮಾರಾಟಗಾರರು ನೈರ್ಮಲ್ಯದ ಬಗ್ಗೆ ವಿಶೇಷ ಗಮನ ಹರಿಸಬೇಕು ಮತ್ತು ಸುರಕ್ಷಿತ ಕುಡಿಯುವ ನೀರಿನ ಬಳಕೆಯನ್ನು ಖಚಿತಪಡಿಸಿಕೊಳ್ಳಬೇಕು. ಈ ವರ್ಷ ಹೆಚ್ಚು ಟೈಫಾಯಿಡ್ ಪ್ರಕರಣಗಳು ವರದಿಯಾಗುತ್ತಿವೆ. ಮೇ ತಿಂಗಳಲ್ಲಿ, 2,700 ಪ್ರಕರಣಗಳು ವರದಿಯಾಗಿದ್ದು, ಜೂನ್‌ನಲ್ಲಿ ಈ ಸಂಖ್ಯೆ 2,752 ರಷ್ಟಿದೆ ಎಂದರು.

error: Content is protected !!
Scroll to Top
%d bloggers like this: