ಖ್ಯಾತ ನಟ, ನಿರ್ದೇಶಕ ಪ್ರತಾಪ್ ಅಪಾರ್ಟ್ಮೆಂಟ್ ನಲ್ಲಿ ಶವವಾಗಿ ಪತ್ತೆ!
ನಟ, ನಿರ್ದೇಶಕನಾಗಿ ಹೆಸರು ಮಾಡಿಕೊಂಡಿರುವ ಮಲಯಾಳಂ ಚಿತ್ರರಂಗದ ಪ್ರತಾಪ್ ಪೋಥೆನ್ ಚೆನ್ನೈನ ತನ್ನ ಅಪಾರ್ಟ್ ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇವರಿಗೆ 69 ವರ್ಷ ಪ್ರಾಯವಾಗಿತ್ತು.
ಸುಮಾರು 12 ಸಿನಿಮಾಗಳನ್ನು ಇವರು ನಿರ್ದೇಶನ ಮಾಡಿದ ನಟ ಈ ರೀತಿ ಶವವಾಗಿ ಪತ್ತೆಯಾಗಿತ್ತು ಆಘಾತವೆಂದೇ ಹೇಳಬಹುದು. ಎಂದಿನಂತೆ ಮನೆ ಕೆಲಸ ಮಾಡಲು ಕೆಲಸದವರು ಬಂದಾಗ ಪ್ರತಾಪ್ ಪೋಥೆನ್ ಮೃತ ದೇಹವನ್ನು ಬೆಡ್‌ರೂಮ್‌ನಲ್ಲಿ ನೋಡಿ ಶಾಕ್ ಆಗಿದ್ದಾರೆ.
ಮಲಯಾಳಂಗಿಂತ ತಮಿಳಿನಲ್ಲಿ ಪ್ರತಾಪ್ ಹೆಚ್ಚಿನ ಸಿನಿಮಾದಲ್ಲಿ ನಟಿಸಿದ್ದಾರೆ. 1987ರಲ್ಲಿ ಋತುಬೇದಮ್ ಸಿನಿಮಾ ಮೂಲಕ ನಿರ್ದೇಶಕನಾಗಿ ಗುರುತಿಸಿಕೊಂಡ ಇವರು, ಅನಂತರ ಡೈಸಿ, ಜೀವಾ, ಏತ್ರಿ ಏತ್ರಿ, ಸೀವಲಪೇರಿ ಪಂಡಿ ಮತ್ತು ಲಕ್ಕಿ ಮ್ಯಾನ್ ಹೆಸರಿನ ಸೂಪರ್ ಹಿಟ್ ಸಿನಿಮಾ ನಿರ್ದೇಶನ ಮಾಡಿದ್ದಾರೆ.
100ಕ್ಕೂ ಹೆಚ್ಚು ಮಲಯಾಳಂ, ಹಿಂದಿ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಪ್ರತಾಪ್ ಪೋಥೆನ್ ಅಭಿನಯಿಸಿದ್ದಾರೆ. 1979ರಲ್ಲಿ ಆರವ್ ಸಿನಿಮಾ ಮೂಲಕ ಪ್ರತಾಪ್ ಪೋಥೆನ್ ಅವರನ್ನು ಭರತ್ ಚಿತ್ರರಂಗಕ್ಕೆ ಕರೆ ತಂದರು. 1980ರಲ್ಲಿ ಲೋರಿ ಮತ್ತು ಚಮರಮ್ ಸಿನಿಮಾದಲ್ಲಿ ಪ್ರತಾಪ್ ಹೆಚ್ಚಿನ ಗಮನ ಸೆಳೆದ್ದರು.
ಪ್ರತಾಪ್ ಅವರು ಮೂಲತಃ ತಿರುವನಂತಪುರಂನವರು. ಊಟಿ ಬೋರ್ಡಿಂಗ್ ಸ್ಕೂಲ್‌ನಲ್ಲಿ ಮತ್ತು ಮಲಬಾರ್ ಕ್ರಿಸ್ಟಿಯನ್ ಕಾಲೇಜ್‌ನಲ್ಲಿ ವಿದ್ಯಾಭ್ಯಾಸ ಮಾಡಿದ ಅವರು, ನಂತರ ಮುಂಬೈನ ಪ್ರೈವೇಟ್ ಫರ್ಮ್‌ನಲ್ಲಿ ಕೆಲಸ ಮಾಡಿದ್ದಾರೆ. ಪ್ರತಾಪ್ ಅಲ್ಲಿಯೇ ರಂಗಭೂಮಿಗೆ ಸೇರಿಕೊಂಡು ನೂರಾರು ನಾಟಕ ಪ್ರದರ್ಶನಗಳನ್ನು ನೀಡಿದ್ದಾರೆ. ರಂಗಭೂಮಿಯಲ್ಲಿ ಭರತ್‌ರನ್ನು ಭೇಟಿ ಮಾಡಿದ್ದು, ಅದೇ ಅವರ ಜೀವನಕ್ಕೆ ಬಿಗ್ ಟರ್ನಿಂಗ್ ಪಾಯಿಂಟ್ ಎನ್ನಬಹುದು.
ತಮಿಳು ನಟಿ ರಾಧಿಕಾರನ್ನು ಪ್ರತಾಪ್ ವಿವಾಹವಾಗಿ ಒಂದು ವರ್ಷಕ್ಕೆ ವಿಚ್ಛೇದನ ನೀಡಿದ್ದರು ಆನಂತರ ಅಮಲಾರನ್ನು ಮದುವೆಯಾಗಿ 22 ವರ್ಷಗಳ ಕಾಲ ವೈವಾಹಿಕ ಜೀವನ ನಡೆಸಿ 2012ರಲ್ಲಿ ಡಿವೋರ್ಸ್ ನೀಡಿದ್ದಾರೆ. ಇವರಿಗೆ ಕೀಯಾ ಎಂಬ ಮಗಳಿದ್ದಾಳೆ.