ಕಾಣಿಯೂರಿನಲ್ಲಿ ಶಾಲಾ ವಿದ್ಯಾರ್ಥಿಗೆ ಬೈಕ್ ಡಿಕ್ಕಿ

ಕಾಣಿಯೂರು: ಕಾಣಿಯೂರು ಶಾಲಾ ವಿದ್ಯಾರ್ಥಿಯೋರ್ವರಿಗೆ ಬೈಕ್ ಡಿಕ್ಕಿ ಹೊಡೆದ ಘಟನೆ ಕಾಣಿಯೂರಿನಲ್ಲಿ ಜು 15ರಂದು ನಡೆದಿದೆ. ಆಟೋ ರಿಕ್ಷಾದಿಂದ ಬಂದ ಚಿರಾಗ್ ರಿಕ್ಷಾದಿಂದ ಇಳಿದು ಶಾಲೆಗೆ ತೆರಳಲು ರಸ್ತೆ ದಾಟುವಾಗ ಪುಣ್ಚತ್ತಾರು ಕಡೆಯಿಂದ ಕಾಣಿಯೂರು ಕಡೆಗೆ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆಯಿಂದ ವಿದ್ಯಾರ್ಥಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

error: Content is protected !!
Scroll to Top
%d bloggers like this: