ಮಹಿಳೆಯರಿಂದ ಬಿಜೆಪಿ MLA ಗೆ ಮಣ್ಣಿನ ಸ್ನಾನ । ವಿಡಿಯೋ ವೈರಲ್‌ !

ಉತ್ತರ ಪ್ರದೇಶ: ಮಹಾರಾಜ್‍ಗಂಜ್‍ನಲ್ಲಿ ಮಹಿಳೆಯರ ಗುಂಪೊಂದು ಬಿಜೆಪಿ ಶಾಸಕ ಜೈಮಂಗಲ್ ಕನೋಜಿಯಾ ಅವರಿಗೆ ಮಣ್ಣಿನ ಸ್ನಾನ ಮಾಡಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಇದಕ್ಕೆ ಅಸಲಿ ಕಾರಣ ತಿಳಿದು ನೆಟ್ಟಿಗರು ಶಾಕ್ ಆಗಿದ್ದಾರೆ.

ಬಿಜೆಪಿ ಶಾಸಕ ಜಯಮಂಗಲ್ ಕನೋಜಿಯಾ ಅವರಿಗೆ ಮಣ್ಣನ್ನು ಕಲಸಿದ ನೀರಿನಿಂದ ಸ್ನಾನ ಮಾಡಿಸಿದ ವೀಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಶಾಕ್‌ ಆಗಿದ್ದು, ಯಾಕೆ ರೀತಿ ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ರಸ್ತೆ ರಿಪೇರಿ ಮಾಡಿಸದೆ ಇದ್ದದ್ದಕ್ಕೆ ಈ ರೀತಿ ಮಾಡಿದ್ದಾರೆಯೇ ಆ ಊರಿನ ಮಹಿಳೆಯರು ? ಎಂಬ ಅನುಮಾನ ಮೂಡೋದು ಸಹಜ.


Ad Widget

Ad Widget

Ad Widget

Ad Widget

Ad Widget

Ad Widget

ಆಮೇಲೆ ತಿಳಿದ ವಿಚಾರ ಏನೆಂದರೆ ಇನ್ನು ಇದೊಂದು ಆಚರಣೆಯಾಗಿದ್ದು, ಮಹಿಳೆಯರು ಬಿಜೆಪಿ ಶಾಸಕನಿಗೆ ಮಡೆ ಸ್ನಾನ ಮಾಡಿಸಿದ್ದಾರೆ. ನಗರದ ಮುಖ್ಯಸ್ಥನಿಗೆ ಮಣ್ಣಿನ ಸ್ನಾನ ಮಾಡಿಸಿದರೆ ಇಂದ್ರದೇವನಿಗೆ ಸಂತೋಷವನ್ನು ನೀಡುತ್ತದೆ ಎಂಬುದು ವಾಡಿಕೆ ಅಂತೆ. ಇದರಿಂದ ಮಳೆಯಾಗಿ ಭತ್ತದ ಇಳುವರಿ ಚೆನ್ನಾಗಿ ಆಗುತ್ತೆ ಎಂದು ಮಹಿಳೆಯರಲ್ಲಿ ಒಬ್ಬರಾದ ಮುನ್ನಿ ದೇವಿ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಕನೋಜಿಯಾ ಅವರು, ಹಳೆಯ ಸಂಪ್ರದಾಯವಾಗಿದೆ. ನಾನು ನನ್ನ ವಾರ್ಡ್ನಲ್ಲಿ ತಿರುಗಾಡುತ್ತಿದ್ದಾಗ ಹಲವಾರು ಮಹಿಳೆಯರು ಮತ್ತು ಮಕ್ಕಳು ನನ್ನನ್ನು ಕೆಸರಿನಲ್ಲಿ ಸ್ನಾನ ಮಾಡಿಸಿದರು. ಇದು ಇಂದ್ರದೇವನನ್ನು ಮೆಚ್ಚಿಸುವ ಹಳೆಯ ಸಂಪ್ರದಾಯ ಮತ್ತು ನಂಬಿಕೆಯಾಗಿದೆ. ಅವರ ಪ್ರಾರ್ಥನೆಯನ್ನು ಕೇಳಬೇಕೆಂದು ನಾನು ಬಯಸುತ್ತೇನೆ ಮತ್ತು ಶೀಘ್ರದಲ್ಲೇ ಮಳೆಯಾಗುತ್ತದೆ ಎಂದು ಹೇಳಿದ್ದಾರೆ.

error: Content is protected !!
Scroll to Top
%d bloggers like this: