BIGG BOSS ಈ ಸೀಸನ್ ನ ಸ್ಪರ್ಧಿಗಳ ಪಟ್ಟಿ ಬಹುತೇಕ ಅಂತಿಮ, ಇವ್ರೇ ನೋಡಿ ‘ ದೊಡ್ಮನೆ ‘ ವಾಸಿಗಳು !

ದೊಡ್ಡ ಮನೆಗೆ ಸುಣ್ಣ ಬಣ್ಣ ಹಾಕಲಾಗುತ್ತಿದೆ. ಬಣ್ಣದ ಬದುಕಿನ ಬಣ್ಣದ ಚಿಟ್ಟೆಗಳು ಮತ್ತು ಬಣ್ಣ ಬಣ್ಣದ ಮಾತಾಡಬಲ್ಲ ದೊಡ್ಡವರು ಒಂದೆಡೆ ಸೇರಲಿದ್ದಾರೆ. ಮುಖವಾಡದ ಹಿಂದಿನ ಅವರ ಸಣ್ಣತನ, ನಿಜಕ್ಕೂ ಇರುವ ಅವರ ದೊಡ್ಡತನ; ದೊಡ್ಡವರ ತುಂಟತನ, ಕಿರಿಯರ ‘ಹಿರಿ’ತನ ಎಲ್ಲವನ್ನೂ ವೀಕ್ಷಕರು ದೂರದಿಂದಲೇ ನೋಡಿ ಮೌಲ್ಯ ಮಾಪನ ಮಾಡಿ ಹಾಕಲು ಇನ್ನೇನು ಸಮಯ ಸನ್ನಿಹಿತ. ಕಾರಣ ಬಿಗ್ ಬಾಸ್ ಬರ್ತಿದ್ದಾರೆ.

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್, ಈಗಾಗಲೇ ಯಶಸ್ವಿ 8 ಆವೃತ್ತಿಗಳನ್ನು ಮುಗಿಸಿದ್ದು, 9 ನೇ ಆವೃತ್ತಿಯ ಬಿಗ್ ಬಾಸ್ ಶೋಗೆ ಭರ್ಜರಿ ತಯಾರಿ ನಡೆದಿದೆ. ಕನ್ನಡ ಬಿಗ್ ಬಾಸ್ ಯಾವಾಗ ಎನ್ನುವ ಕುತೂಹಲವೊಂದು ಎಲ್ಲರಲ್ಲೂ ಇತ್ತು. ಈ ರಿಯಾಲಿಟಿ ಶೋ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರುತ್ತಿದೆ. ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಯಾವಾಗ ಎನ್ನುವ ಪ್ರಶ್ನೆ ಗೆ ಈಗ ಉತ್ತರ ದೊರಕಿದೆ. ಬಿಗ್ ಬಾಸ್ ಸೀಸನ್ ಅದು ಕೂಡಾ ಕನ್ನಡ ಬಿಗ್ ಬಾಸ್ ಗೆ ಕಿರುತೆರೆ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ಬಿಗ್ ಬಾಸ್ ಸೀಸನ್ 9 ಬಗ್ಗೆ ಹೊಸ ಅಪ್ ಡೇಟ್ ಹೊರಬಿದ್ದಿದೆ. ಹೌದು ಬಹುನಿರೀಕ್ಷೆಯ ಬಿಗ್ ಬಾಸ್ ಆಗಸ್ಟ್ ಮೊದಲ ವಾರದಿಂದ ಆರಂಭವಾಗಲಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ.

ದಿನಾಂಕ ಘೋಷಣೆಯಾಗಿಲ್ಲದಿದ್ದರೂ ಇನ್ನೂ ಕೆಲವೇ ದಿನಗಳಲ್ಲಿ ಶೋ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ ಈಗಾಗಲೇ ಕಿಚ್ಚ ಸುದೀಪ್ ಅವರು ಬಿಗ್‌ಬಾಸ್ ಪ್ರೋಮೋ ಶೂಟ್‌ನಲ್ಲಿ ಭಾಗಿಯಾಗಿ ಬಂದಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನಿನ್ನೆ ಬಿಬಿಕೆ (#BBK9) ಹ್ಯಾಷ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ನಲ್ಲಿಯೂ ಇತ್ತು. ಅಲ್ಲದೆ, ಈಗಾಗಲೇ ಬಿಗ್‌ಬಾಸ್ ಹೆಸರಿನಲ್ಲಿ ಕಲರ್ಸ್ ಕನ್ನಡ ಟ್ವಿಟರ್ ಖಾತೆಯನ್ನೂ ತೆರೆದಿದೆ.

ಕಳೆದ ಬಾರಿಯಂತೆ ಈ ಬಾರಿಯೂ ಸಹ ವೂಟ್ ಸೆಲೆಕ್ಟ್ ನಲ್ಲಿಯೂ ಬಿಗ್ ಬಾಸ್ ಪ್ರಸಾರವಾಗಲಿದೆ. ಓಟಿಟಿಯಲ್ಲಿ ಮತ್ತು ಕಲರ್ಸ್ ವಾಹಿನಿಯಲ್ಲಿ ಎರಡು ರೀತಿಯ ಬಿಗ್ ಬಾಸ್ ಸೀಸನ್‌ಗಳನ್ನು ಪ್ರಸಾರ ಮಾಡಲು ಕಲರ್ಸ್ ಸಂಸ್ಥೆ ನಿರ್ಧರಿಸಿದೆ. ಈ ಬಾರಿ ಕಲರ್ಸ್ ವಾಹಿನಿಯಲ್ಲಿ ಬಿಗ್ ಬಾಸ್ ಪ್ರಸಾರ ಆರಂಭವಾಗುವ ಮೊದಲೇ ವೂಟ್ ಸೆಲೆಕ್ಟ್ ನಲ್ಲಿ ಬಿಗ್ ಬಾಸ್ ಮಿನಿ ಸೀಸನ್ ಪ್ರಸಾರವಾಗಲಿದೆ. ಈ ಮಿನಿ ಸೀಸನ್ 42 ದಿನಗಳ ಕಾಲ ಪ್ರಸಾರವಾಗಲಿದ್ದು, ಇಂಟರ್‌ನೆಟ್ ಸ್ಟಾರ್‌ಗಳು, ಇನ್‌ಪ್ಲುಯೆನ್ಸರ್‌ಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮಿನಿ ಸೀಸನ್‌ನಲ್ಲಿ ಆಯ್ಕೆಯಾದ ಒಂದಿಬ್ಬರು ಸ್ಪರ್ಧಿಯಲ್ಲಿ ವಾಹಿನಿಯಲ್ಲಿ ಪ್ರಸಾರವಾಗುವ ಪೂರ್ಣ ಪ್ರಮಾಣದ ಬಿಗ್ ಬಾಸ್‌ನಲ್ಲಿ ಭಾಗವಹಿಸುತ್ತಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ 90 ದಿನಗಳ ಕಾಲ ಪ್ರಸಾರವಾಗಲಿದೆ.

ಈ ರೀತಿಯ ಪ್ರಯತ್ನ ಕಳೆದ ಬಾರಿ ಹಿಂದಿಯಲ್ಲಿ ಮೊದಲ ಪ್ರಯತ್ನ ಮಾಡಲಾಗಿತ್ತು. ಹಿಂದಿಯಲ್ಲಿ ಕರಣ್ ಜೋಹರ್ ನಡೆಸಿಕೊಟ್ಟಿದ್ದರು. ಒಟಿಟಿ ಬಳಿಕ ಬಿಗ್ ಬಾಸ್ ಟಿವಿಯಲ್ಲಿ ಪ್ರಸಾರವಾಗಿತ್ತು. ಈ ಬಾರಿ ಕನ್ನಡದಲ್ಲೂ ಅದೇ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಕನ್ನಡದಲ್ಲಿ ಪ್ರಸಾರವಾಗುವ ಒಟಿಟಿ ಬಿಗ್ ಬಾಸ್ ಅನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆಸಿಕೊಡಲಿದ್ದು,90 ದಿನಗಳ ಟಿವಿಯಲ್ಲಿ ಆರಂಭವಾಗುವ ಬಿಗ್ ಬಾಸ್ ಜವಾಬ್ದಾರಿ ಕೂಡಾ ಸುದೀಪ್ ನಡೆಸಿಕೊಡಲಿದ್ದಾರೆ.

ಚಂದನ್ ಶರ್ಮಾ ಚಂದನ್ ಶರ್ಮಾ ಅವರು ವೃತ್ತಿಪರ ಸುದ್ದಿ ನಿರೂಪಕ ಹಾಗೂ ಕಿರಿಯ ಕಾರ್ಯನಿರ್ವಾಹಕ ಸಂಪಾದಕ.
ವಿನಯ್ ಕುಮಾರ್ ಅವರು ಟೀಮ್ ಇಂಡಿಯಾದ ಮಾಜಿ ಆಟಗಾರ.
ನವೀನ್ ಕೃಷ್ಣ ಓರ್ವ ಕನ್ನಡದ ಕಲಾವಿದ, ಬರಹಗಾರ ಮತ್ತು ನಿರ್ದೇಶಕ. ಹಿರಿಯ ನಟ ಶ್ರೀನಿವಾಸ್ ಮೂರ್ತಿ ಮಗ.
ಟೆನ್ನಿಸ್ ಕೃಷ್ಣ ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟರಾಗಿರುವ ಟೆನ್ನಿಸ್ ಕೃಷ್ಣ ಈ ಬಾರಿ ಬಿಗ್‌ಬಾಸ್ ಮನೆ ಪ್ರವೇಶಿಸುವ ಸಾಧ್ಯತೆ ಇದೆ.
ಆಶಾ ಭಟ್ ಭಾರತೀಯ ಗಾಯಕಿಯಾಗಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಜನಪ್ರಿಯತೆಯನ್ನು ಗಳಿಸಿದ್ದಾರೆ. ಜೀ ಕನ್ನಡದ ಸರಿಗಮಪದಲ್ಲಿ ಭಾಗವಹಿಸಿದ್ದಾರೆ.
ರವಿ ಶ್ರೀವಾತ್ಸವ ಕನ್ನಡದ ಪ್ರಖ್ಯಾತ ನಿರ್ದೇಶಕ. ಗಂಡ ಹೆಂಡತಿ, ಡೆಡ್ಲಿ ಸೋಮದಂತಹ ಯಶಸ್ವಿ ಸಿನಿಮಾಗಳ ನಿರ್ದೇಶನ ಮಾಡಿದ್ದಾರೆ.
ನಟ ತರುಣ್ ಚಂದ್ರ ಎಲ್ಲರಿಗೂ ಪರಿಚಿತರಾಗಿರುವ ಸ್ಪುರದ್ರೂಪಿ ನಟ. 2003ರಲ್ಲಿ ಖುಷಿ ಸಿನಿಮಾ ಮೂ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.
ನಮ್ರತಾ ಗೌಡ ಖ್ಯಾತ ಕಿರುತೆರೆ ಕಲಾವಿದೆ. ಕೆಲ ಧಾರವಾಹಿಗಳಲ್ಲಿ ನಮ್ರತಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ನಾಗಿನಿ 2 ಧಾರವಾಹಿಯಲ್ಲಿ ತಮ್ಮ ಅದ್ಭುತ ನಟನೆ ಮೂಲಕ ಜನಮನ್ನಣೆ ಗಳಿಸಿದ್ದಾರೆ.
ನಟಿ ರೇಖಾ ವೇದವ್ಯಾಸ್ ಕನ್ನಡಿಗರಿಗೆ ಚಿರಪರಿಚಿತರಾಗಿದ್ದಾರೆ. ಏಕೆಂದರೆ, ಕಿಚ್ಚ ಸುದೀಪ್‌
ಕೆರಿಯರ್‌ನಲ್ಲಿ ದೊಡ್ಡ ಯಶಸ್ಸು ತಂದುಕೊಟ್ಟ ಹುಚ್ಚ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ಭೂಮಿಕ ಬಸವರಾಜ್ ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸುವವರ ಅಥವಾ ಇನ್‌ಸ್ಟಾಗ್ರಾಂ ರೀಲ್ಸ್ ನೋಡುವವರಿಗೆ ಭೂಮಿಕ ಬಸವರಾಜ್ ಚೆನ್ನಾಗಿ ತಿಳಿದಿರುತ್ತದೆ.
ನಟಿ ಪ್ರೇಮಾ ಯಾರಿಗೆ ತಾನೆ ಗೊತ್ತಿಲ್ಲ. ತುಂಬಾ ವರ್ಷಗಳ ಬಳಿಕ ಮತ್ತೆ ಸಿನಿಮಾ ಲೋಕದಲ್ಲಿ ಸಕ್ರಿಯರಾಗಿರುವ ಪ್ರೇಮಾ ಕೆಲವೊಂದಿಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಮಿಮಿಕ್ರಿ ಗೋಪಿ ಅವರ ಹಾಸ್ಯ, ಮಿಮಿಕ್ರಿ ಮತ್ತು ನಗು ತರಿಸು ಒನ್-ಲೈನ್ ಡೈಲಾಗ್‌ಗಳಿಂದ ಜನಪ್ರಿಯರಾಗಿದ್ದಾರೆ.
ದಿಲೀಪ್ ರಾಜ್ ಕನ್ನಡ ಮನರಂಜನಾ ಉದ್ಯಮದ ಯಶಸ್ವಿ ನಟ, ನಿರ್ಮಾಪಕ ಮತ್ತು ಕಿರುತೆರೆ ನಿರ್ದೇಶಕ
ಆರ್ಯವರ್ಧನ್ ಗುರೂಜಿ ಕನ್ನಡ ಟೆಲಿವಿಷನ್ ಉದ್ಯಮದಲ್ಲಿ ಪ್ರಧಾನವಾಗಿ ಕೆಲಸ ಮಾಡುವ ಗುರೂಜಿ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುತ್ತಾರೆ.

ಈ ಮೇಲಿನ ಎಲ್ಲ ಸ್ಪರ್ಧಿಗಳು ಸಂಭವನೀಯ ಸ್ಪರ್ಧಿಗಳಷ್ಟೇ. ಸಾಮಾಜಿಕ ಜಾಲತಾಣದಲ್ಲಿ ಈ ಹೆಸರುಗಳು ಹೆಚ್ಚಾಗಿ ಕೇಳಿಬರುತ್ತಿರುವುದರಿಂದ ಈ ಬಾರಿ ಬಿಗ್‌ಬಾಸ್ ಮನೆಯೊಳಗೆ ಇವರುಗಳು ಪ್ರವೇಶಿಸಬಹುದು ಎಂದು ಊಹಿಸಲಾಗಿದೆ. ಉಳಿದಂತೆ ಜಗ್ಗೇಶ್ ತಮ್ಮನಾದ ನಟ ಕೋಮಲ್, ಇಳಾ ವಿಟ್ಲ, ಬಂಧನ ಚಿತ್ರದ ಹಿರಿಯ ನಟಿ ಭವ್ಯಾ, ಹಾಸ್ಯಗಾರ ಪ್ರಾಣೇಶ್ ಬೀಚಿ ಮತ್ತು ಸುಧಾರಾಣಿ ಹೆಸರು ಕೂಡಾ ದೊಡ್ಡದಾಗಿ ಚಲಾವಣೆಯಲ್ಲಿದೆ.

Leave A Reply

Your email address will not be published.