ಒಂದೇ ಫೋನಿಗೆ ಡ್ಯುಯಲ್ ಸ್ಕ್ರೀನ್ ! ಹೊಸ ಫೀಚರ್ ನ ಫೋನ್ ಪರಿಚಯಿಸಿದ ಹಳೆಯ ಮಿತ್ರ ನೋಕಿಯಾ !
ಫೋನ್ ಜಗತ್ತಿನಲ್ಲೇ ತನ್ನದೇ ಛಾಪು ಮೂಡಿಸಿ, ನಂತರ ಬದಲಾವಣೆಗೆ ತೆರೆದುಕೊಳ್ಳದೆ ಫೋನ್ ಜಗತ್ತಿನಿಂದ ಎಕ್ಸಿಟ್ ಆಗಿದ್ದ ನೋಕಿಯಾ ಮತ್ತೆ ಹೊಸ ಪ್ರಾಡಕ್ಟ್ ಎತ್ತಿಕೊಂಡು ಬಂದಿದೆ. ಮೈಕ್ರೋಸಾಫ್ಟ್ ನೋಕಿಯಾ ಅನ್ನು ಕೊಂಡು ಕೊಂಡ ನಂತರ ಪ್ರಸಿದ್ದ ಫೋನ್ ತಯಾರಕ ನೋಕಿಯಾ ಕೈಗೆಟಕುವ ದರಲ್ಲಿ ಡ್ಯುಯಲ್ ಸ್ಕ್ರೀನ್ ಫೋನ್ ಅನ್ನು ಪರಿಚಯಿಸಿದೆ. ಗೆಳೆಯರೇ ಸರಿಯಾಗಿ, ಓದಿ, ಇದು ಡುಯಲ್ ಸಿಮ್ ಅಲ್ಲ ಇದು ಡುಯಲ್ ಸ್ಕ್ರೀನ್ !! ಒಂದೇ ಫೋನಿಗೆ ಎರಡೆರಡು ಸ್ಕ್ರೀನ್.. ವಾರೆವ್ವ !!
ಅದು ನೋಕಿಯಾದ 2660 ಫ್ಲಿಪ್ ಫೋನ್. ಜನರು ಈಗ ನೋಕಿಯಾ 2660 ಫ್ಲಿಪ್ ವಿನ್ಯಾಸವನ್ನು ಇಷ್ಟಪಡುತ್ತಿದ್ದಾರೆ. ನೋಕಿಯಾ 2660 ಫ್ಲಿಪ್ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ.
ನೋಕಿಯಾ 2660 ಫ್ಲಿಪ್ ನ ವಿಶೇಷತೆಗಳು:
ನೋಕಿಯಾ 2660 ಫ್ಲಿಪ್, ನೀವು ಊಹಿಸಿದಂತೆ ಫ್ಲಿಪ್ ಫೋನ್ ಆಗಿದೆ. ಇದು ಸಾಂಪ್ರದಾಯಿಕ ಕ್ಲಾಮ್‌ಶೆ ತರಹದ ವಿನ್ಯಾಸವನ್ನು ಹೊಂದಿದೆ ಮತ್ತು ಡ್ಯುಯಲ್-ಸಿಮ್ ಬೆಂಬಲದೊಂದಿಗೆ ಬರುತ್ತದೆ. ಹ್ಯಾಂಡ್ಸೆಟ್ ಎರಡು ಡಿಸ್ಪ್ಲೇಗಳನ್ನು ಹೊಂದಿದೆ. ಇದರ ಒಳಭಾಗದಲ್ಲಿ 2.8-ಇಂಚಿನ QVGA ಡಿಸ್ಪ್ಲೇ ಮತ್ತು ಹಿಂಭಾಗದಲ್ಲಿ 1.77 ಇಂಚಿನ QQVGA ಡಿಸ್ಪ್ಲೇ ಇದೆ.
ನೋಕಿಯಾ 2660 ಫ್ಲಿಪ್ ಫೋನಿನ ಇನ್ನೊಂದು ಅದ್ಭುತ ವೈಶಿಷ್ಟ್ಯ ಏನೆಂದರೆ, ಈ ಸಾಧನ 1,450mAh ಬ್ಯಾಟರಿ ಹೊಂದಿದೆ. ಅದು ಸ್ಟ್ಯಾಂಡ್‌ಬೈನಲ್ಲಿ 20 ದಿನಗಳವರೆಗೆ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಅಲ್ಲದೆ, ಇದು ಇಯರ್‌ಫೋನ್‌ಗಳನ್ನು ಪ್ಲಗ್ ಮಾಡದೆಯೇ ಕಾರ್ಯನಿರ್ವಹಿಸುವ ಎಫ್‌ಎಂ ರೇಡಿಯೊವನ್ನು ಸಹಾ ಹೊಂದಿದೆ. ಫೋನ್ MP3 ಪ್ಲೇಯರ್ ಮತ್ತು VGA ಕ್ಯಾಮೆರಾವನ್ನು ಸಹ ಹೊಂದಿದೆ.
ಸ್ಟೋರೇಜ್:
ಫೋನ್ Unisoc T107 ಪ್ರೊಸೆಸರ್‌ನಿಂದ ಚಾಲಿತವಾಗಿದೆ ಮತ್ತು 128 MB ಇಂಟರ್ನಲ್ ಮೆಮೊರಿ ಸಂಗ್ರಹಣೆಯನ್ನು ಹೊಂದಿದೆ ಮತ್ತು ಇದನ್ನು ಮೈಕ್ರೋ SD ಕಾರ್ಡ್‌ನೊಂದಿಗೆ 32ಜಿಬಿ ಸಂಗ್ರಹಣೆಯನ್ನು ವಿಸ್ತರಿಸಬಹುದು.
ವಿಶೇಷವೆಂದರೆ, ಈ ಹಿಂದೆ ಕೇವಲ ಡುಯಲ್ ಸಿಮ್ ಫೋನ್ ಗಳನ್ನ ಮಾರ್ಕೆಟ್ ಗೆ ಬಿಡದ ತಪ್ಪಿಗೆ ದೈತ್ಯ ಕಂಪನಿಯೇ ನಿಂತು ಹೋಗಿತ್ತು. ಆಗ ಎಲ್ಲಾ ಕಂಪನಿಗಳು ಡುಯಲ್ ಫೋನ್ ಅನ್ನು ಮಾರ್ಕೆಟ್ ಗೆ ಬಿಡುತ್ತಿದ್ದಾಗ, ನೋಕಿಯಾ ಮಾತ್ರ ತನ್ನ ಸಾಂಪ್ರದಾಯಿಕ ಮನಸ್ಥಿತಿಗೆ ಅಂಟಿಕೊಂಡಿದ್ದು, ಒಂದೇ ವರ್ಷದಲ್ಲಿ ನೋಕಿಯಾ ಸೆಲ್ ಫೋನ್ ಕೊಳ್ಳುವವರೆ ಇಲ್ಲ ಎನ್ನುವಂತಾಗಿ ಕಂಪನಿಯನ್ನು ಮಾರಾಟ ಮಾಡಬೇಕಾಗಿ ಬಂದಿತ್ತು. ಡ್ಯುಯಲ್ ಸಿಮ್ ನಲ್ಲಿ ಹೋದದ್ದನ್ನು ಡ್ಯುಯಲ್ ಸ್ಕ್ರೀನ್ ನಲ್ಲಿ ಕವರ್ ಮಾಡುತ್ತಾ ಕಂಪನಿ ಅಂತ ನೋಡಬೇಕಿದೆ.