ಪತ್ನಿಯನ್ನು ಟಚ್ ಮಾಡಿದ್ದಕ್ಕೆ ನಡೆಯಿತು ಭೀಕರ ಮರ್ಡರ್ !

ಪತ್ನಿಯ ಕೈಯನ್ನು ಟಚ್ ಮಾಡಿದ್ದಕ್ಕೆ ಗಂಡನೋರ್ವ ಅಪ್ರಾಪ್ತನನ್ನು ಯುವಕನನ್ನು ಕೊಲೆ ಮಾಡಿ ಅಮಾನುಷ ಘಟನೆಯೊಂದು ನಡೆದಿದೆ. ಈ ಘಟನೆ ಹಾಸನದಲ್ಲಿ ನಡೆದಿದ್ದು, ವಿನಯ್, ಕೊಲೆಯಾದ ಅಪ್ರಾಪ್ತ.

 

ಆರೋಪಿ ರೌಡಿಶೀಟರ್ ತನ್ನ ಪತ್ನಿ ಹಾಗೂ ಸಹಚರರೊಂದಿಗೆ ಸ್ನೇಹಿತನ ಬರ್ತಡೇ ಪಾರ್ಟಿಗೆ ಹೋಗಿದ್ದಾರೆ. ನಂತರ ಪಾರ್ಟಿ ಮುಗಿಸಿ ಲಿಫ್ಟ್ ನಲ್ಲಿ ಬರುವಾಗ, ಆರೋಪಿ ರೌಡಿಶೀಟರ್ ನ ಪತ್ನಿಗೆ ಅಪ್ರಾಪ್ತ ಯುವಕನೊಬ್ಬನ ಕೈ ಟಚ್ ಆಗಿದೆ. ಇದ ಕ್ಷುಲ್ಲಕ ವಿಷಯವೇ ಕೊಲೆಗೆ ಕಾರಣ ಎನ್ನಲಾಗಿದೆ.

ಯುವಕನೊಂದಿಗೆ ರೌಡಿ ಗಲಾಟೆ ಮಾಡುತ್ತಾನೆ. ಸಿಟ್ಟುಗೊಂಡ ಅಪ್ರಾಪ್ತ ಯುವಕ ಆ ರೌಡಿಶೀಟರ್ ಗೆ ಆತನ ಪತ್ನಿ ಮುಂದೆ ಬೈಯುತ್ತಾನೆ. ಇದರಿಂದ ಕುಪಿತಗೊಂಡ ರೌಡಿ, ನಾನೊಬ್ಬ ರೌಡಿಶೀಟರ್ ನನ್ನ ಹೆಂಡತಿ ಮುಂದೆನೇ ಒಬ್ಬ ಅಪ್ರಾಪ್ತ ಹುಡ್ಗ ಮರ್ಯಾದೆ ತೆಗೆದಿಬಿಟ್ಟ ಎಂದು ತನ್ನ ಸಹಚರರೊಂದಿಗೆ ಮನಬಂದಂತೆ ಹಲ್ಲೆ ಮಾಡಿ, ಕೊಂದು ಹಾಕಿದ್ದಾನೆ. ಕೊಂದ ಬಳಿಕ ಮೃತದೇಹವನ್ನ ನದಿಗೆ ಬಿಸಾಡಿ ಎಸ್ಕೆಪ್ ಆಗಿದ್ದಾರೆ. ಇದೀಗ ಅಪ್ರಾಪ್ತ ಬಾಲಕನ ಮೃತದೇಹ ಸಕಲೇಶಪುರದ ಶಿರಾಡಿ ಘಾಟ್ ನಲ್ಲಿ ಸಿಕ್ಕಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಜುಲೈ 9 ರ ಶನಿವಾರ ರಾತ್ರಿ ಹಾಸನ ನಗರದ ಬಿಎಂ ರಸ್ತೆಯಲ್ಲಿರುವ ಬಾರ್ ನಲ್ಲಿ ಸ್ನೇಹಿತನ ಬರ್ತ್ ಡೇ ಪಾರ್ಟಿಗೆಂದು ರೌಡಿಶೀಟರ್ ರಾಖಿ, ತನ್ನ ಪತ್ನಿ ಹಾಗೂ ಸಹಚರರೊಂದಿಗೆ ಹೋಗಿದ್ದ. ಪಾರ್ಟಿ ಮುಗಿಸಿ ಬರೋ ವೇಳೆ ಲಿಫ್ಟ್ ನಲ್ಲಿ ತನ್ನ ಹೆಂಡತಿಯ ಕೈಗೆ ಟಚ್ ಮಾಡಿದ್ದನೆಂದು ಅಪ್ರಾಪ್ತ ಯುವಕ ವಿನಯ್ ಎಂಬಾತನೊಂದಿಗೆ ಗಲಾಟೆ ಆಗುತ್ತೆ‌.

ಆದರೆ ಇದು ಮುಂದುವರಿದು ಭಾನುವಾರ ಮನೆಗೆ ಬಂದ ರೌಡಿಶೀಟರ್ ಬಲವಂತವಾಗಿ ಅಪ್ರಾಪ್ತನನ್ನು ಎಳೆದೊಯ್ದು ಹಲ್ಲೆ ಮಾಡಿ. ಚಾಕುವಿನಿಂದ ಇರಿದು ಕೊಂದು ಹಾಕಿದ್ದಾರೆ ಎಂದು ಸಂಬಂಧಿಕರು ಆರೋಪ ಮಾಡಿದ್ದಾರೆ.

ಪಬ್‌ನಲ್ಲಿ ರಾಖಿ ಹಾಗೂ ವಿನಯ್ ನಡುವೆ ನಡೆದಿರೋ ಗಲಾಟೆಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಹಾಗೂ ತಾಯಿಯ ದೂರನ್ನ ಆಧರಿಸಿ ಪೊಲೀಸರು ತನಿಖೆ ಆರಂಭ ಮಾಡಿದ್ದಾರೆ. ಈ ಘಟನೆ ಸಂಬಂಧ ರೌಡಿಶೀಟರ್ ರಾಖಿ, ಆತನ ಪತ್ನಿ ಸೇರಿ ಎಂಟು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಇಂದು (ಮಂಗಳವಾರ) ಮಧ್ಯಾಹ್ನ ಮೃತ ದೇಹ ಸಕಲೇಶಪುರ ಕೆಂಪುಹೊಳೆ ಬಳಿ ಪತ್ತೆಯಾಗಿದೆ. ಇದೀಗ ಮೃತದೇಹ ಸಿಕ್ಕಿದ್ದು ಕೊಲೆ ಎಂಬುದು ಸಾಬೀತಾದ ಮೇಲೆ ಮೊದಲು ದಾಖಲಾಗಿದ್ದ ನಾಪತ್ತೆ ಪ್ರಮಾಣವನ್ನು ಕೊಲೆ ಕೇಸ್ ಆಗಿ ಪರಿವರ್ತಿಸಿ, ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದೇವೆ ಎಂದು ಹಾಸನ ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

Leave A Reply

Your email address will not be published.