ಪಂಚೆ ಸಡಿಲಿಸಿ ಈ ಸ್ಪೆಷಲ್ ಸಮೋಸಾ ತಿಂದ್ರೆ 51,000 ರೂಪಾಯಿ ಬಹುಮಾನ

ಇಲ್ಲಿಯವರೆಗೆ ನೀವು ಐಸ್ ಬಕೆಟ್ ಚಾಲೆಂಜ್ ಮತ್ತು ರೈಸ್ ಬಕೆಟ್ ಚಾಲೆಂಜ್ ಬಗ್ಗೆ ಕೇಳಿರಬೇಕು. ಅವರು ಬಾಹುಬಲಿ ಥಾಲಿ ಮತ್ತು ಬಾಹುಬಲಿ ಹಲೀಮ್ ರುಚಿ ನೋಡಿರಬೇಕು. ಆದ್ರೆ, ಸಮೋಸಾ ಚಾಲೆಂಜ್ ಬಗ್ಗೆ ಕೇಳಿದ್ದೀರಾ? ಇದರಲ್ಲಿ ಏನಿದು ಚಾಲೆಂಜ್, ಚಿಟಿಕೆಯಲ್ಲಿ ಮಡಚಿ ತಿನ್ನಬಹುದು ಅಂದ್ಕೊಂಡ್ರಾ? ಅದು ಅಷ್ಟು ಸುಲಭವಲ್ಲ. ಯಾಕಂದ್ರೆ, ಇದು ನಿಮ್ಮ ಅಂಗೈ ಗಾತ್ರದ ಸಮೋಸಾ ಅಲ್ಲ. ಬಾಹುಬಲಿ ಸಮೋಸಾ ! ಹೆಸರಿಗೆ ತಕ್ಕಂತೆ ಬೃಹತ್ತಾಗಿದೆ. ಇಂತಹ ಬಾಹುಬಲಿ ಸಮೋಸಾವನ್ನು 30 ನಿಮಿಷದಲ್ಲಿ ತಿಂದ್ರೆ, 51 ಸಾವಿರ ಕೊಡುತ್ತೇನೆ ಎಂದು ಆ ಅಂಗಡಿ ಮಾಲೀಕರೊಬ್ಬರು ಸವಾಲು ಹಾಕಿದ್ದಾರೆ.

ಮನೆಯಲ್ಲಿ ಮಾಡುವ ನಿತ್ಯದ ತಿನಿಸುಗಳಿಂದ ಬೇಜಾರಾಗಿದ್ದರೆ, ವಾರಾಂತ್ಯದಲ್ಲಿ ಯಾರಾದರೂ ರೆಸ್ಟೋರೆಂಟ್‌ಗಳಿಗೆ ಹೋಗಿ ಕೆಲವು ವೆರೈಟಿಗಳನ್ನು ಸವಿಯುತ್ತಾರೆ. ಆಯಾ ರೆಸ್ಟೋರೆಂಟ್ʼಗಳ ಮಾಲೀಕರು ಗ್ರಾಹಕರನ್ನು ತಮ್ಮತ್ತ ಸೆಳೆಯಲು ನಾನಾ ಸವಾಲುಗಳನ್ನ ಎಸೆಯುತ್ತಿದ್ದಾರೆ. ಅಂಥದ್ದೇ ಈ ಸಮೋಸಾ ಚಾಲೆಂಜ್. ಉತ್ತರ ಪ್ರದೇಶದ ಮೀರತ್ʼನಲ್ಲಿ ಸಿಹಿ ಅಂಗಡಿ ಮಾಲೀಕರೊಬ್ಬರು ಇಂಥದ್ದೊಂದು ಚಾಲೆಂಜ್ ಒಗೆದಿದ್ದಾರೆ. ಇಲ್ಲಿ ಕಾಣಿಸಿಕೊಂಡಿರುವ ಬಾಹುಬಲಿ ಸಮೋಸವನ್ನ ಕೇವಲ 30 ನಿಮಿಷದಲ್ಲಿ ತಿಂದವರಿಗೆ 51 ಸಾವಿರ ರೂಪಾಯಿ ನೆಟ್ ಕ್ಯಾಷ್ ನೀಡುವುದಾಗಿ ಘೋಷಿಸಿದ್ದಾರೆ.

ಅಂದ್ಹಾಗೆ, ಈ ಬಾಹುಬಲಿ ಸಮೋಸಾದ ತೂಕವೆಷ್ಟು ಗೊತ್ತಾ? ಬರೋಬ್ಬರಿ 8 ಕೆಜಿ. ಇನ್ನು ಚಾಲೆಂಜ್‌ ಲೆಕ್ಕಾಚಾರದಲ್ಲಿ ಪ್ರತಿ ಐದು ನಿಮಿಷಕ್ಕೆ 1 ಕೆಜಿಗಿಂತ ಹೆಚ್ಚು ಸಮೋಸ ತಿನ್ನಬೇಕು. ಆಗ ಮಾತ್ರ ನೀವು ಅರ್ಧ ಗಂಟೆಯಲ್ಲಿ 8 ಕೆಜಿ ತಿಂದು ಮುಗಿಸಬಹುದು. ಸಾಮಾನ್ಯವಾಗಿ ಸಮೋಸಾ 50 ಗ್ರಾಂ ರಿಂದ 100 ಗ್ರಾಂ ತೂಕದಲ್ಲಿರುತ್ತದೆ. ಆದರೆ ಬಾಹುಬಲಿ ಸಮೋಸಾ 8 ಕೆಜಿ ತೂಕವಿದೆ. ಬಾಹುಬಲಿ ಸಮೋಸ ಬಡಿದು ಹಾಕುವ ಧೈರ್ಯವನ್ನು ಯಾರು ಮಾಡ್ಬೋದು ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.

https://www.instagram.com/reel/CfTKtSijiZ_/?utm_source=ig_web_copy_link

ಮೀರತ್‌ನ ಶುಭಂ ಲಾಲ್ಕುರ್ತಿ ಬಜಾರ್‌ನಲ್ಲಿ ಕೌಶಲ್ ಸ್ವೀಟ್ಸ್ ಎಂಬ ಸಿಹಿತಿಂಡಿ ಅಂಗಡಿ ನಡೆಸುತ್ತಿದ್ದಾರೆ. ಸಿಹಿತಿಂಡಿಗಳು ಮತ್ತು ಸಮೋಸಾಗಳಲ್ಲಿ ಹಲವು ವಿಧಗಳಿವೆ. ಗ್ರಾಹಕರನ್ನು ಹೆಚ್ಚು ಆಕರ್ಷಿಸಲು ಹೊಸದನ್ನು ಪ್ರಯತ್ನಿಸಲು ಬಯಸುತ್ತಿರುವ ಲಾಲ್ಕುರ್ತಿ ಬಾಹುಬಲಿ ಸಮೋಸಾದೊಂದಿಗೆ ಎಲ್ಲರಿಗೂ ಸವಾಲನ್ನ ಎಸೆಯುತ್ತಿದ್ದಾರೆ. ಈ ಸಮೋಸ ತಯಾರಿಸಲು ಒಂದರಿಂದ ಒಂದೂವರೆ ಗಂಟೆ ಬೇಕಾಗುತ್ತದೆ. ಇನ್ನೀದು ಬಾಹುಬಲಿ ಸಮೋಸಾವು ಪನೀರ್ ಮತ್ತು ಡ್ರೈ ಫ್ರೂಟ್ಸ್ ಜೊತೆಗೆ ಆಲೂ ಮಸಾಲವನ್ನ ಒಳಗೊಂಡಿದೆ. ಆದ್ದರಿಂದಲೇ ಇದರ ರುಚಿ ಅದ್ಭುತವಾಗಿರುತ್ತೆ. ಆದ್ರೆ, ಇಲ್ಲಿಯವರೆಗೆ ಯಾರೂ ಈ ಸವಾಲನ್ನ ಗೆದ್ದಿಲ್ಲ. ಜಂಗುಳಿ ದೊಡ್ಡದಿದೆ, ಗುಂಪಿನಿಂದ ಯಾರಾದ್ರೂ ಓರ್ವ ಬಾಹುಬಲಿ ಪಂಚೆ ಯಾ ಬೆಲ್ಟ್ ಸಡಿಲಿಸಿಕೊಂದು ಎದ್ದು ಬಂದೇ ಬರ್ತಾನೆ. ನಿಮಗಿದ್ದಶ್ಟೆ ಕುತೂಹಲ ನಮಗೂ ಇದೆ !

Leave A Reply

Your email address will not be published.