6 ವರ್ಷದ ಬಾಲಕನನ್ನು ಭೀಕರವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳು !ಕಾರಣ…

ನಾಪತ್ತೆಯಾದ ಮಗುವನ್ನು ಭೀಕರವಾಗಿ ಕೊಂದು ಬಿಸಾಡಿದ ಘಟನೆಯೊಂದು ಬಿಹಾರದ ಪುರ್ನಿಯಾ ಗ್ರಾಮದಲ್ಲಿ ಭೀಕರವಾಗಿ ಈ ಘಟನೆ ನಡೆದಿದೆ.

 

ಆರು (6) ವರ್ಷದ ಮಗುವೊಂದರ ಕತ್ತು ಸೀಳಿ ಬರ್ಬರವಾಗಿ ಕೊಂದು ಹತ್ಯೆ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೇ, ಮಗುವಿನ ಎಲ್ಲಾ ಖಾಸಗಿ ಅಂಗವನ್ನು ಕತ್ತರಿಸುವುದರ ಜೊತೆಗೆ ದೇಹದ ಹಲವು ಭಾಗಗಳನ್ನೂ ಕತ್ತರಿಸಿ ಬರ್ಬರವಾಗಿ ಕ್ರೂರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಈ ಭೀಭತ್ಸ್ಯ ಘಟನೆಯಿಂದ ಸ್ಥಳೀಯ ಜನರು ಭಯಭೀತರಾಗಿದ್ದಾರೆ. ಈ ಕೃತ್ಯ ಯಾರು ಮಾಡಿದ್ದಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಮಕ್ಕಳ ಅಂಗವನ್ನು ಕತ್ತರಿಸಿ ಮಾರುವ, ಯಾವುದೋ ದೊಡ್ಡ ಗ್ಯಾಂಗ್ ಈ ರೀತಿ ದುಷ್ಕೃತ್ಯ ಮಾಡಿರಬೇಕು ಎಂದು ಅಂದಾಜಿಸಲಾಗಿದೆ.

ಮೃತ ಮಗುವನ್ನು ಗೌರವ್ ಕುಮಾರ್ ಎಂದು ಗುರುತಿಸಲಾಗಿದೆ. ಕಳೆದ ಮೂರು ದಿನಗಳಿಂದ ಮಗು ಮನೆಯಿಂದ ನಾಪತ್ತೆಯಾಗಿತ್ತು. ಎರಡು ದಿನಗಳ ಹುಡುಕಾಟದ ಬಳಿಕ ಮನೆಯ ಹಿಂಬದಿಯ ಖಾಲಿ ಮನೆಯಲ್ಲಿ ಶವ ಪತ್ತೆಯಾಗಿದೆ. ಮೃತ ದೇಹವನ್ನು ಕಂಬಳಿಯಲ್ಲಿ ಸುತ್ತಲಾಗಿತ್ತು.

ಇದೀಗ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಈ ಪ್ರಕರಣ ಬಿಹಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ತನಿಖೆ ಕೂಡ ಬಹಳ ಗಂಭಿರವಾಗಿ ಮುಂದುವರಿಯಲಿದೆ ಎಂದು ತಿಳಿದಿದೆ.

ಹಾಗಾಗಿ ಎಲ್ಲರಿಗೂ ಮುಖ್ಯವಾಗಿ ಪೋಷಕರು ತಮ್ಮ ಮಕ್ಕಳ ಬಗ್ಗೆ ಜಾಗೃತೆ ವಹಿಸಬೇಕೆಂದು ಪೊಲೀಸರು ಸೂಚಿಸಿದ್ದಾರೆ.

Leave A Reply

Your email address will not be published.