ರಸ್ತೆಯಲ್ಲಿ ಬಿದ್ದಿತ್ತು ವೈದ್ಯೆಯೊಬ್ಬಳ ಡೆಡ್ ಬಾಡಿ!

Share the Article

ಯುವ ವೈದ್ಯೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿ ನಡದಿದೆ.

ಕೊಲ್ಲಾಪುರ ಜಿಲ್ಲೆಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಹಾಗೂ ಸ್ತ್ರೀರೋಗ ತಜ್ಞ ಡಾ.ಪ್ರವೀಣ್ ಚಂದ್ರ ಹೆಂಡ್ರೆ ಅವರ 30 ವರ್ಷದ ಪುತ್ರಿಯ ಮೃತದೇಹ ​ರೋಡ್ ನಲ್ಲಿ ಬಿದ್ದ ಸ್ಥಿತಿಯಲ್ಲಿ ಪಟ್ಟೆಯಾಗಿದೆ.

ಅಪೂರ್ವ ಪ್ರವೀಣ್ ಚಂದ್ರ ಹೆಂಡ್ರೆ ಕೂಡ ವೈದ್ಯರಾಗಿದ್ದು, ನಗರದ ಆಸ್ಪತ್ರೆಯೊಂದರಲ್ಲಿ ಪ್ರಾಕ್ಟಿಸ್​ ಮಾಡುತ್ತಿದ್ದು, ರಾತ್ರಿ ಕಾರ್ಯಕ್ರಮವೊಂದಕ್ಕೆ ಹೋಗಿದ್ದ ಅವರು ತಡವಾಗಿ ಮನೆಗೆ ಮರಳಿದ್ದರು. ಸ್ವಲ್ಪ ಸಮಯದ ನಂತರ ಅಪೂರ್ವ ಮತ್ತೆ ಮನೆಯಿಂದ ಹೊರ ಹೋಗಿದ್ದಾರೆ.

ಮನೆಯಿಂದ ಹೊರ ಹೋದ ಅಪೂರ್ವ ಮೇಲೆ ಪೋಷಕರಿಗೆ ಅನುಮಾನ ಬಂದಿದ್ದು, ಹೊರ ಹೋಗಲು ಯತ್ನಿಸಿದಾಗ ಬಾಗಿಲು ಮುಚ್ಚಿತ್ತು. ಹಿಂಬಾಗಿಲಿನಿಂದ ಹೊರಗೆ ಹೋಗಿ ಅಪೂರ್ವಳನ್ನು ಹುಡುಕಿದ್ದಾರೆ. ಆದರೆ ಅವರು ಎಲ್ಲಿಯೂ ಪತ್ತೆಯಾಗಲಿಲ್ಲ.

ಬೆಳಿಗ್ಗೆ ಪ್ರವೀಣ್ ಚಂದ್ರ ಹೆಂಡ್ರೆ ಅವರಿಗೆ ಡಿ ಮಾರ್ಟ್ ಪ್ರದೇಶದ ಪಾದಚಾರಿ ಮಾರ್ಗದಲ್ಲಿ ನಿಮ್ಮ ಮಗಳು ಬಿದ್ದಿದ್ದಾರೆ ಎಂದು ಕರೆ ಬಂದಿದೆ.‌ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅಪೂರ್ವ ಬಿದ್ದುಕೊಂಡಿದ್ದರು.

ಈ ಘಟನೆಗೆ ಏನು ಕಾರಣವೆಂಬುದು ಇನ್ನು ತಿಳಿದಿಲ್ಲ. ಕೊಲ್ಲಾಪುರ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲೆಯಾಗಿದ್ದು, ತನಿಖೆ ಮುಂದುವರೆದಿದೆ.

Leave A Reply