ಮದುವೆಗೂ ಮುಂಚೆನೇ ‘ನೆಕ್ಸ್ಟ್ ಹೆಂಗೇ’ ಅನ್ನೋ ಅಗ್ರಿಮೆಂಟ್ ಗೆ ಸೈನ್ ಹಾಕಿದ ವಧು-ವರರು
ಈಗಿನ ಪ್ರತಿಯೊಂದು ಯುವಜೋಡಿಯು, ತಾನು ಮದುವೆಯಾದ ಮೇಲೆ ಯಾವ ರೀತಿಲಿ ಜೀವನ ನಡೆಸಬೇಕು ಎಂಬುದನ್ನು ಮೊದಲೇ ತೀರ್ಮಾನಿಸಿರುತ್ತಾರೆ. ಮೊದಲೆಲ್ಲ ಮದುವೆಯ ಮುಂಚೆ ವರದಕ್ಷಿಣೆಯ ಮಾತುಕತೆ ನಡೆಸುತ್ತಿದ್ದರು. ಆದರೆ, ಇದೀಗ ವರದಕ್ಷಿಣೆ ಎಂಬ ಮಾತು ಅಳಿಸಿಹೋಗಿ ‘ಆಫ್ಟರ್ ಮ್ಯಾರೇಜ್ ಲೈಫ್ ರೂಲ್ಸ್’ ಎಂಬ ಅಗ್ರಿಮೆಂಟ್ ಗೆ ಸಹಿ ಹಾಕುತ್ತಿದ್ದಾರೆ.
ಹೌದು.ಮದುವೆಯಾದ ಬಳಿಕ ಪತಿ ಮತ್ತು ಪತ್ನಿ ನಡುವೆ ಭಿನ್ನಾಭಿಪ್ರಾಯ ಬರಬಾರದು ಎಂಬ ಕಾರಣಕ್ಕೆ ಮದುವೆಗಿಂತ ಮೊದಲೇ ‘ನೆಕ್ಸ್ಟ್ ಹೆಂಗೇ’ ಅನ್ನೋ ಅಗ್ರಿಮೆಂಟ್ ಮಾಡಿಕೊಳ್ಳುತ್ತಿದ್ದಾರೆ ಜೋಡಿಗಳು. ಕೆಲವು ಒಪ್ಪಂದ ಮಾಡಿಕೊಂಡು ಇದನ್ನು ಮದುವೆಯಾದ ಬಳಿಕ ಇಬ್ಬರೂ ಪಾಲಿಸಬೇಕೆಂದು ಮತ್ತು ಈ ಒಪ್ಪಂದಕ್ಕೆ ಬದ್ದವಾಗಿರಬೇಕು ಎಂದು ಮದುವೆ ಮೊದಲೇ ಅಗ್ರಿಮೆಂಟ್ ಮಾಡಿಕೊಳ್ಳುವುದು ಈಗಿನ ಟ್ರೆಂಡ್ ಆಗಿದೆ.
ಅದೇ ರೀತಿ ಅಸ್ಸಾಂನಲ್ಲಿ ಇಂತಹವೊಂದು ಮದುವೆ ನಡೆದಿದ್ದು, ಮದುವೆ ವೇಳೆ ವರನು ಮಿಂಟು ಮತ್ತು ವಧುವು ಶಾಂತಿ ಈ ರೀತಿಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಜಿಮ್ ಗೆ ಹೋಗುವುದರಿಂದ ಹಿಡಿದು ಶಾಪಿಂಗ್ ವೇಳೆ ಅನುಸರಿಸಬೇಕಾದ ಕ್ರಮಗಳನ್ನು ಈ ಕರಾರು ಪತ್ರ ಒಳಗೊಂಡಿದ್ದು ಇದಕ್ಕೆ ಇಬ್ಬರು ಸಹಿ ಹಾಕಿದ್ದಾರೆ.
ಇದರಲ್ಲಿ ವರ ಮಿಂಟು ವಿಶೇಷವಾಗಿ ಒಂದು ಅಂಶ ಪ್ರಸ್ತಾಪಿಸಿದ್ದಾನೆ. ವಧು ಪ್ರತಿನಿತ್ಯ ಸೀರೆ ಉಡಬೇಕು ಎಂದು ಹೇಳಿದ್ದಾನೆ. ಇದು ಇನ್ ಸ್ಟಾಗ್ರಾಂ ನಲ್ಲಿ ಈ ಮದುವೆ ಒಪ್ಪಂದದ ಅಂಶಗಳು ಹರಿದಾಡುತ್ತಿದ್ದು, ನೆಟ್ಟಿಗರ ಕಮೆಂಟ್ ಸುರಿಮಳೆಯೇ ಸುರಿಯುತ್ತಿದೆ. ಬಹುಶಃ, ಇನ್ನು ಮುಂದೆ ಪ್ರತಿಯೊಂದು ಜೋಡಿಯ ಮಧ್ಯೆ ಇಂತಹ ಅಗ್ರಿಮೆಂಟ್ ಮಾಮೂಲು ಆಗೋದರಲ್ಲಿ ಡೌಟ್ ಇಲ್ಲ ಅನಿಸುತ್ತೆ ಅಲ್ವಾ!?..