ಮಳೆರಾಯನ ಆರ್ಭಟ | ಸೂರು ಕಳೆದುಕೊಂಡ ಅಮ್ಮ ಮಗಳ ರೋದನೆ
ಚಿಕ್ಕಮಗಳೂರು : ಮಳೆರಾಯನ ಆರ್ಭಟಕ್ಕೆ ಇಡೀ ರಾಜ್ಯದ ಜನತೆಯೇ ಕಂಗಾಲಾಗಿ ಕೂತಿದ್ದಾರೆ. ಒಂಚೂರು ಬಿಡದೆ ಮಳೆ ಬರುತ್ತಿರುವುದರಿಂದ ಅಪಾರ ಸಾವು-ನೋವು, ಮನೆ ಹಾನಿ ಸಂಭವಿಸಿದೆ. ಅದೇ ರೀತಿ ಚಿಕ್ಕಮಗಳೂರಿನಲ್ಲಿ ಐದಳ್ಳಿ ಗ್ರಾಮದಲ್ಲಿ ರಾತ್ರೋರಾತ್ರಿ ಮನೆ ಕುಸಿದುಕೊಂಡು ತಾಯಿ ಮಗಳು ಸೂರಿಲ್ಲದೆ ಆತಂಕಗೊಂಡ ಘಟನೆ ಬೆಳಕಿಗೆ ಬಂದಿದೆ.
ಐದಳ್ಳಿ ಗ್ರಾಮದ ನಿಲಮ್ಮ ಎಂಬ ಮಹಿಳೆಗೆ ಸೇರಿದ ಮನೆಯಾಗಿದ್ದು, ಬೆಳಗ್ಗೆ 5 ಗಂಟೆ ಸುಮಾರಿಗೆ ಕುಸಿದು ಬಿದ್ದಿದೆ.
50 ವರ್ಷಗಳಿಂದ ಈ ಮನೆಯಲ್ಲಿ ಗಂಡನಿಲ್ಲದ ನಿಲಮ್ಮಮತ್ತು ಮಗಳು ಇಬ್ಬರೇ ನೆಲೆಸಿದ್ದರು. ಹಲವು ವರ್ಷಗಳ ಹಿಂದೆ ತನ್ನ ಗಂಡನನ್ನು ಕಳೆದುಕೊಂಡ ನಿಲಮ್ಮ ಒಬ್ಬಳೇ ಮಗಳ ಜತೆ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೇ ನಿನ್ನೆ ಸುರಿದ ಭಾರೀ ಮಳೆಯಿಂದ ಮನೆ ಕುಸಿದಿದೆ.
ತುಂಬಾ ಬಡತನದಲ್ಲಿ ಇರುವ ಈ ಕುಟುಂಬಕ್ಕೆ ಗ್ರಾಮಸ್ಥರು ನೆರವಾಗಿದ್ದು, ವಾಸಮಾಡಲು ಒಂದು ಸಣ್ಣ ಶೆಡ್ ನಿರ್ಮಾಣ ಮಾಡಿಕೊಟ್ಟಿದ್ದಾರೆ.