ಕೇವಲ 26ರೂ.ಗೆ ವಿಮಾನ ಟಿಕೆಟ್, ಏರ್‌ಲೈನ್ಸ್‌ ಪ್ರಾರಂಭಿಸಿದ ಈ ಆಫರ್ ಗೆ ಜುಲೈ 13 ಕೊನೆ ದಿನ

ವಿಮಾನಯಾನ ಕಂಪನಿಗಳು ಪ್ರಯಾಣಿಕರಿಗೆ ಅಗ್ಗದ ವಿಮಾನ ಟಿಕೆಟ್‌ಗಳ ಆಫರ್‌ಗಳನ್ನು ನೀಡುತ್ತಲೇ ಬಂದಿದ್ದು, ಈಗ ವಿಮಾನಯಾನ ಸಂಸ್ಥೆಯೊಂದು ಕೇವಲ 26 ರೂಪಾಯಿಗೆ ವಿಮಾನ ಟಿಕೆಟ್ ನೀಡುತ್ತಿದೆ. ಹೌದು. ವಿಯೆಟ್ನಾಂ ಮೂಲದ ವಿಯೆಟ್ಜೆಟ್ ಏರ್ಲೈನ್ಸ್ ಕಂಪನಿಯು ಅಗ್ಗದ ವಿಮಾನ ಟಿಕೆಟ್ ಗಳನ್ನು ನೀಡುತ್ತಿದ್ದು, ಕೇವಲ ರೂ.26 ದರದಲ್ಲಿ ವಿಮಾನ ಟಿಕೆಟ್ ಗಳನ್ನು ಬುಕ್ ಮಾಡಬಹುದಾಗಿದೆ.

ಎಲ್ಲಾ ದೇಶೀಯ ವಿಮಾನಗಳು ಮತ್ತು ಅಂತಾರಾಷ್ಟ್ರೀಯ ವಿಮಾನ ಟಿಕೆಟ್ ಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ. ನೀವು ದೆಹಲಿ, ಮುಂಬೈನಿಂದ ಹನೋಯಿ, ಹೋ ಚಿ ಮಿನ್ಹ್ ಸಿಟಿಯಂತಹ ಸ್ಥಳಗಳಿಗೆ ವಿಮಾನ ಟಿಕೆಟ್ ಗಳನ್ನು ಬುಕ್ ಮಾಡಬಹುದು.

ಎಲ್ಲಾ ಪ್ರಯಾಣಿಕರು ಮಾರ್ಚ್ 26, 2023 ರಿಂದ ಕಡಿಮೆ ದರದಲ್ಲಿ ಪ್ರಯಾಣಕ್ಕಾಗಿ ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದ್ದು, ಭಾರತೀಯ ಪ್ರಯಾಣಿಕರು ಸೆಪ್ಟೆಂಬರ್ ನಿಂದ ಈ ಕೊಡುಗೆಯನ್ನು ಪಡೆಯಲಿದ್ದಾರೆ. ಅಂದರೆ ಸೆಪ್ಟೆಂಬರ್‌ನಿಂದ ಪ್ರಯಾಣಿಸಲು ನೀವು ಈಗ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಬಹುದು. VietJet ಏರ್‌ಲೈನ್ಸ್‌ನಿಂದ ಪ್ರಾರಂಭಿಸಲಾದ ಈ ಆಫರ್ ಜುಲೈನಲ್ಲಿ 7 ರಂದು ಪ್ರಾರಂಭವಾಗಿದ್ದು, ಜುಲೈ 13 ರಂದು ಕೊನೆಗೊಳ್ಳಲಿದೆ.

ಇತ್ತೀಚೆಗೆ, ವಿಯೆಟ್‌ಜೆಟ್ ಏರ್‌ಲೈನ್ಸ್ ಹೊಸ ದೆಹಲಿ, ಮುಂಬೈ, ಹೈದರಾಬಾದ್, ಅಹಮದಾಬಾದ್ ಮತ್ತು ಬೆಂಗಳೂರಿನಿಂದ ಪ್ರಸಿದ್ಧ ಕರಾವಳಿ ನಗರವಾದ ಡಾ ನಾಂಗ್‌ಗೆ 5 ಅಂತರರಾಷ್ಟ್ರೀಯ ವಿಮಾನಗಳನ್ನು ಪ್ರಾರಂಭಿಸಿತು. ವಿಯೆಟ್ನಾಂ ಮತ್ತು ಭಾರತ ನಡುವೆ ಈಗಾಗಲೇ ನಾಲ್ಕು ಸೇವೆಗಳಿವೆ. ವಿಯೆಟ್ಜೆಟ್ ಏರ್ಲೈನ್ಸ್ ವಾರಕ್ಕೆ ನಾಲ್ಕರಿಂದ ಏಳು ವಿಮಾನಗಳನ್ನು ನಿರ್ವಹಿಸಲು ಯೋಜಿಸಿದೆ.

ಭಾರತದ ಇಂಡಿಗೋ ಏರ್‌ಲೈನ್ಸ್ ಮಾರಾಟವನ್ನು ಘೋಷಿಸಿದೆ. ಜುಲೈ 7 ರಂದು ಮಾರಾಟ ಪ್ರಾರಂಭವಾಗಿದ್ದು, ಜುಲೈ 10ರವರೆಗೆ ಮಾರಾಟ ಮುಂದುವರಿಯಲಿದೆ. ಜುಲೈ 26, 2022 ರಿಂದ ಮಾರ್ಚ್ 31, 2023 ರವರೆಗೆ ಪ್ರಯಾಣಿಸುವವರು ಅಗ್ಗದ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ವಿಮಾನ ಟಿಕೆಟ್‌ಗಳು ರೂ.1,496 ರಿಂದ ಪ್ರಾರಂಭವಾಗುತ್ತವೆ.

ಮತ್ತೊಂದೆಡೆ, ಗೋ ಫಸ್ಟ್ ಏರ್‌ಲೈನ್ಸ್ ಕೂಡ ಮಾನ್ಸುನ್ ಸೇಲ್ ಅನ್ನು ಪ್ರಾರಂಭಿಸಿದೆ. ಜುಲೈ 10 ರವರೆಗೆ ಕಡಿಮೆ ದರದಲ್ಲಿ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಜುಲೈ 26, 2022 ರಿಂದ ಮಾರ್ಚ್ 31, 2023 ರವರೆಗೆ ಪ್ರಯಾಣವನ್ನು ಯೋಜಿಸುವವರು ರೂ.1,499 ರಿಂದ ಪ್ರಾರಂಭವಾಗುವ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಬಹುದು.

ವಿಮಾನಯಾನ ಕಂಪನಿಗಳು ಸೀಮಿತ ಸಂಖ್ಯೆಯ ವಿಮಾನ ಟಿಕೆಟ್‌ಗಳನ್ನು ಮಾತ್ರ ನೀಡುತ್ತವೆ. ಒಂದು ವಿಮಾನದಲ್ಲಿ ಕೇವಲ ಎರಡು ಅಥವಾ ಮೂರು ಟಿಕೆಟ್‌ಗಳು ಕಡಿಮೆ ದರದಲ್ಲಿ ಲಭ್ಯವಿವೆ. ಹಾಗಾಗಿ ಟಿಕೆಟ್ ಬುಕ್ ಮಾಡುವವರು ಯಾವ ದಿನಾಂಕ ಮತ್ತು ಯಾವ ವಿಮಾನದ ಟಿಕೆಟ್ ದರ ಕಡಿಮೆ ಇದೆ ಎಂಬುದನ್ನು ಹೋಲಿಕೆ ಮಾಡಿ ನೋಡಬೇಕು. ರದ್ದತಿ ನೀತಿಯ ವಿವರಗಳನ್ನು ಸಹ ಪರಿಶೀಲಿಸಬೇಕಾಗಿದೆ.

Leave A Reply

Your email address will not be published.