ಬಿಲ್ಲವರ ತಾಕತ್ತು ತೋರಿಸುತ್ತೇವೆ-ಬಿಲ್ಲವ ಮುಖಂಡರ ಪತ್ರಿಕಾಗೋಷ್ಠಿ

ಬಿಲ್ಲವರ ತಾಕತ್ತು ತೋರಿಸುತ್ತೇವೆ ಎಂದು ಬಿಲ್ಲವ ಮುಖಂಡರ ಪತ್ರಿಕಾಗೋಷ್ಠಿ ನಡೆದಿದ್ದು, ಬಿಲ್ಲವವರ ಸಮುದಾಯದ ಬೇಡಿಕೆ ಬಗ್ಗೆ ಸರ್ಕಾರದ ಯಾವುದೇ ರೀತಿಯ ಸ್ಪಂದನೆ ಇಲ್ಲವೆಂದು ಪ್ರತಿಭಟನೆಗೆ ಇಳಿದ ಪ್ರಣಾಮನಂದ ಸ್ವಾಮೀಜಿ ಅವರಿಗೆ ಬೆಂಬಲವಾಗಿ ಸತ್ಯಜಿತ್ ಸುರತ್ಕಲ್ ಮತ್ತು ನಮ್ಮ ”ಬಿರುವೆರ್” ಬಿಲ್ಲವ ಸಮುದಾಯದ ಜನತೆ ನಿಂತಿದೆ.

ಶ್ರೀ ಪ್ರಣಾಮನಂದ ಸ್ವಾಮೀಜಿ ಇವರು ರಾಷ್ಟ್ರೀಯ ಅಧ್ಯಕ್ಷರು ಮತ್ತು ಆರ್ಯ ರಾಷ್ಟ್ರೀಯ ಮಹಾಮಂಡಲ ಹಾಗೂ ಶ್ರೀ ನಾರಾಯಣ ಗುರು ಶಕ್ತಿ ಪೀಠದ ಮುಖ್ಯಸ್ಥರಾಗಿದ್ದಾರೆ. ಈಗಾಗಲೇ ಸರ್ಕಾರದಿಂದ ನಮ್ಮ ಬಿಲ್ಲವ ಸಮುದಾಯಕ್ಕೆ ತುಂಬಾನೇ ಅನ್ಯಾಯವಾಗಿದೆ ಎನ್ನುತ್ತಾ, ತಮಗಾದ ಹಲವು ಅನ್ಯಾಯಗಳ ಬಗ್ಗೆ ಮಾತಾಡಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

*2007 ರಲ್ಲಿ ಸಾರಾಯಿ ಬಂದು ಮಾಡಿದ ಸರ್ಕಾರ ಆ ಕಸುಬು ಮಾಡುವವರಿಗೆ ಯಾವುದೇ ಅಳ್ತಾರ್ ನೇಟಿವ್ ವ್ಯವಸ್ಥೆ ಮಾಡಿ ಕೊಡಲಿಲ್ಲ.

  • 2014 ರಲ್ಲಿ ಶೇಂದಿಯನ್ನು ಬಂದು ಮಾಡಿದ ಸರ್ಕಾರ.

ಇದು ನಮ್ಮ ಬಿಲ್ಲವರ ಕುಲಕಸುಬು ಆಗಿತ್ತು, ಅದನ್ನು ನಿಲ್ಲಿಸಿದ ಸರ್ಕಾರ. ಅವರಿಗೆ ಬೇರೆ ಯಾವುದೇ ರೀತಿಯ ಅಳ್ತೆರ್ ನೇಟಿವ್ ವ್ಯವಸ್ಥೆ ಮಾಡಿ ಕೊಡಲೇ ಇಲ್ಲ. ಅದನ್ನು ನಂಬಿಕೊಂಡು ಎಷ್ಟೋ ಮಂದಿ ಬಿಲ್ಲವರು ಜೀವನ ನಡೆಸುತ್ತಿದ್ದರು, ಇದೊಂದು ನಮ್ಮ ಸಮುದಾಯಕ್ಕೆ ಸರ್ಕಾರ ಮಾಡಿದ ಅನ್ಯಾಯವಾಗಿದೆ. ಅಲ್ಲದೇ ನಾರಾಯಣಗುರು ಪಠ್ಯಕ್ಕೆ ಕತ್ತರಿ ಹಾಕಿದ್ದು, ಇದರ ವಾಗ್ದಾನದಲ್ಲಿ ಸರ್ಕಾರ ಯಾವುದೇ ಪ್ರತಿಕ್ರಿಯೆ ತೋರಲಿಲ್ಲ.

ಬಿಲ್ಲವರ ಬಹು ಮುಖ್ಯ ಬೇಡಿಕೆಯಾದ ಬ್ರಹ್ಮಶ್ರೀ ನಾರಾಯಣ ಗುರು ನಿಗಮದ ಸ್ಥಾಪನೆ ಬಗ್ಗೆ ಸರ್ಕಾರಕ್ಕೆ ಬೇಡಿಕೆ ನೀಡಿದ್ದರು ಸರ್ಕಾರ ಸುಮ್ಮನೆ ಇದ್ದು ಬಿಟ್ಟಿದೆ. ಅಲ್ಲದೇ ನಾರಾಯಣ ಗುರುಗಳ ಪಠ್ಯಕ್ಕೆ ಕತ್ತರಿ ಮತ್ತು ವಾಗ್ದಾನದಲ್ಲಿ ವಂಚನೆ. ಇದೀಗ ಮುಖ್ಯ ಮಂತ್ರಿಗಳು ರಾಜೀನಾಮೆ ನೀಡಲಿ, ಜನರ ಬೇಡಿಕೆಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಇಡೀ ಬಿಲ್ಲವ ಸಮುದಾಯ ಪ್ರತಿಭಟನೆ ನಡೆಸುತ್ತಿದ್ದಾರೆ.

2007 ರಲ್ಲಿ ಸಾರಾಯಿ ಬಂದು ಮಾಡಿದರು, 2014 ರಲ್ಲಿ ಶೇಂದಿ ಬಂದ್ ಮಾಡಿದರು. ಇದು ಬಿಲ್ಲವರ ಕುಲಕಸುಬು. ಇದರಿಂದ ಎಷ್ಟೋ ಬಿಲ್ಲವರು ಜೀವನ ನಡೆಸುತ್ತಿದ್ದರು. ಕುಲಕಸುಬು ವ್ಯವಸ್ಥೆಗೆ ಯಾವುದೇ ವ್ಯವಸ್ಥೆ ಮಾಡಿಕೊಡಲೇ ಇಲ್ಲ. ಸರ್ಕಾರ ಮೇಲಿಂದ ಮೇಲೆ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡುತ್ತ ಬಂದಿದೆ. ಹೀಗಾದರೆ ನಮ್ಮ ಸಮುದಾಯದವರು ಏನು ಸಾಯಬೇಕ ಎಂದು ಪ್ರಶ್ನೆ ಮಾಡಿದ್ದಾರೆ ಗುಲ್ಬರ್ಗದ ರಾಷ್ಟ್ರೀಯ ಅಧ್ಯಕ್ಷರು ಪ್ರಣಾಮನಂದ ಸ್ವಾಮೀಜಿ.

ಬಿಲ್ಲವ ಸಮುದಾಯ ಹಿಂದುತ್ವದ ಪರಾಕಷ್ಠೆಗೆ ಹೋಗಿಯಾಗಿದೆ. ಅದನ್ನು ಹಿಂದೆ ತರುವುದು ಅಷ್ಟು ಸುಲಭವಲ್ಲ ಎಂದು ಹೇಳಿದ ಸತ್ಯಜಿತ್ ಸುರತ್ಕಲ್. ಬಿಲ್ಲವ ಯುವಕರು ಕೇಸರಿ ಬಡಿಗಿಟ್ಟು, ಹಳದಿ ಶಾಲ್ ದರಿಸುತ್ತಿದರೆ ಎಂಬುದೇ ಬದಲಾವಣೆಗೆ ಸಾಕ್ಷಿ ಎಂದಿದ್ದಾರೆ. ಯಾವುದೇ ನಾಲ್ಕು ಜಾತಿ ಸಬಲವಾದರೆ ಹಿಂದೂ ಸಮಾಜ ಸಬಲವಾದಂತೆ ಎಂಬುದು ಸರಿಯಲ್ಲ ಎಂದು ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.

ಹಿಂದುತ್ವ ಹೋರಾಟ ಕೇವಲ ಹಿಂದುಳಿದ ಮತ್ತು ದಲಿತ ಸಮಾಜದ ಹೋರಾಟವಲ್ಲ ಇದು ಎಲ್ಲಾ ಸಮಾಜದ ಜವಬ್ದಾರಿ, ಎಲ್ಲಾ ಸಮಾಜದ ಕರ್ತವ್ಯವಿದು ಎಂದು ಹೇಳಿದರು. ಹಿಂದುತ್ವ ಹೆಸರಿನಲ್ಲಿ ಹೋರಾಟಕ್ಕೆ ಇವತ್ತು ಹಿಂದೂಗಳು ಗಟ್ಟಿಯಾಗಿ ನಿಂತುಕೊಂಡರೆ ಉಳಿದವರು ಇದನ್ನು ಉಪಯೋಗಿಸಿಕೊಂಡು ಸಾಮಾಜಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ನಾಯಕತ್ವವನ್ನೇ ಪಡೆಯುವಲ್ಲಿ ಅಧಿಕಾರವನ್ನು ಪಡೆಯುವಲ್ಲಿ ಎದ್ದು ನಿಂತಿದ್ದಾರೆ ಎಂದ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.

ಹಿಂದೂ ಸಮಾಜ ಆಲದ ಮರವಾಗಿದ್ದರೆ, ಅದರ ಕಾಂಡ ಮತ್ತು ಬೇರು ದಲಿತ ಮತ್ತು ಹಿಂದುಳಿದ ಸಮಾಜ. ಅದನ್ನು ತುಳಿತಕ್ಕೆ ನೀವು ಹೊರಟರೆ ಅದನ್ನು ಶೈಕ್ಷಣಿಕವಾಗಿ ಧಾರ್ಮಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಸಿಗುವ ನ್ಯಾಯ ದೊರಕದಲ್ಲಿ ಹಿಂದೂ ಸಮಾಜ ಸಾಯುತ್ತದೆ ಎಂದಿದ್ದಾರೆ. ಯಾವುದೇ ನಾಲ್ಕು ಜಾತಿ ಇಟ್ಟುಕೊಂಡು ಉದ್ದಾರ ಮಾಡಿದರೆ ಸಾಕಾಗಲ್ಲ ಎಂದು ಸತ್ಯಜಿತ್ ಸುರತ್ಕಲ್ ಮಾತನಾಡಿದ್ದಾರೆ.

error: Content is protected !!
Scroll to Top
%d bloggers like this: