ಕಾರ್ಕಳ: ಕಾರು ಮತ್ತು ಸ್ಕೂಟರ್ ನಡುವೆ ಭೀಕರ ಅಪಘಾತ – ಸಹೋದರರಿಬ್ಬರ ದಾರುಣ ಸಾವು!

ಕಾರ್ಕಳ : ನಂದಳಿಗೆ ಮಾವಿನಕಟ್ಟೆಯ ಬಳಿ ಕಾರು ಮತ್ತು ಸ್ಕೂಟರ್ ನಡುವೆ ಅಪಾಘಾತ ಸಂಭವಿಸಿ ಸಹೋದರರಿಬ್ಬರು ಮೃತಪಟ್ಟಿರುವ ಘಟನೆಯೊಂದು ನಡೆದಿದೆ.


Ad Widget

Ad Widget

Ad Widget

Ad Widget
Ad Widget

Ad Widget

Ad Widget

ಮೃತರನ್ನು ಹಾಳೆಕಟ್ಟಿ ಸಂದೀಪ್ ಕುಲಾಲ್ ಮತ್ತು ಸತೀಶ್ ಕುಲಾಲ್ ಎಂದು ಗುರುತಿಸಲಾಗಿದೆ.

ಕಾರ್ಕಳ ಕಡೆಯಿಂದ ಬೆಳ್ಮಣ್ ಕಡೆಗೆ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಕಾರ್ಕಳ ಕಡೆಗೆ ಪ್ರಯಾಣಿಸುತ್ತಿದ್ದ ಇನೋವಾ ಕಾರಿಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ಪರಿಣಾಮ ಸಂದೀಪ್ ಸ್ಥಳದಲ್ಲಿಯೇ ಮೃತ ಪಟ್ಟರೆ, ಸತೀಶ್ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.

ಇನ್ನು ಸಂದೀಪ್ ಕುಲಾಲ್ ಅವರು ಬೆಳ್ಳಣ್ ಜೆ ಸಿ ಸಂಸ್ಥೆಯಲ್ಲಿ ಕೋಶಾಧಿಕಾರಿಯಾಗಿ ಮತ್ತು ಜೂನಿಯರ್ ಜೆಸಿಯಾಗಿ ಉತ್ತಮ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ

error: Content is protected !!
Scroll to Top
%d bloggers like this: