ಟೈಲರ್ ಕನ್ಹಯ್ಯ ಲಾಲ್ ಶಿರಚ್ಚೇದ ಪ್ರಕರಣ : 7 ನೇ ಫರ್ಹಾದ್ ಮೊಹಮ್ಮದ್ ಶೇಖ್ ಪೊಲೀಸ್ ಬಲೆಗೆ

ರಾಜಸ್ಥಾನ: ಬಿಜೆಪಿ ನಾಯಕಿ ನೂಪುರ್ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಕೊಲೆಗೀಡಾಗಿದ್ದ ಕನ್ನಯ್ಯ ಲಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಆರೋಪಿಯನ್ನು ಬಂಧಿಸಲಾಗಿದೆ.

 

ಉದಯಪುರದ ಮಲ್ಲಾಸ್ ಸ್ಟ್ರೀಟ್ ನಲ್ಲಿರುವ ಟೈಲರ್ ಕನ್ಹಯ್ಯ ಲಾಲ್ ಅಂಗಡಿಗೆ ಜೂ.28ರಂದು ಬಟ್ಟೆ ಹೊಲಿಸಲು ಕೊಡುವವರ ಸೋಗಿನಲ್ಲಿ ಬಂದಿದ್ದ ಹಂತಕರಿಬ್ಬರು, ಕೆಲವೇ ಕ್ಷಣಗಳ ಕನ್ನಯ್ಯ ಲಾಲ್ ತಲೆ ಕತ್ತರಿಸಿ ಪರಾರಿಯಾಗಿದ್ದರು. ಬಳಿಕ ವಿಡಿಯೋ ಮಾಡಿ ಕೃತ್ಯದ ಕುರಿತು ಹೇಳಿಕೊಂಡಿದ್ದಲ್ಲದೆ ಪ್ರಧಾನಿ ಮೋದಿಗೂ ಬೆದರಿಕೆಯೊಡ್ಡಿದ್ದರು. ಈ ಶಿರಛೇದದ ಪ್ರಕರಣ ದೇಶವನ್ನೇ ತಲ್ಲಣಕ್ಕೆ ದೂಡಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳಾದ ಮೊಹಮ್ಮದ್ ರಿಯಾಜ್ ಅಟ್ಟರಿ ಮತ್ತು ಗೌಸ್ ಮೊಹಮ್ಮದ್ ಅವರನ್ನು ಅಂದೇ ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದರು. ಆನಂತರ ನಾಲ್ವರ ಬಂಧನ ಆಗಿತ್ತು. ಇದುವರೆಗೆ ಒಟ್ಟು ಆರು ಆರೋಪಿಗಳನ್ನು ಬಂಧಿಸಿದ್ದು, ಇದೀಗ ಏಳನೇ ಆರೋಪಿ ಫರ್ಹಾದ್ ಮೊಹಮ್ಮದ್ ಶೇಖ್ (31) ಎಂಬಾತನನ್ನು ವಶಪಡಿಸಿಕೊಳ್ಳಲಾಗಿದೆ. ಈತ ಪ್ರಮುಖ ಆರೋಪಿಗಳಿಬ್ಬರಲ್ಲಿ ಒಬ್ಬನಾದ ರಿಯಾಜ್ ಅಟ್ಟರಿ ನಿಕಟವರ್ತಿ ಎಂಬ ಮಾಹಿತಿ ಇದೆ.

Leave A Reply

Your email address will not be published.