ಚಾಲಕನ ನಿಯಂತ್ರಣ ತಪ್ಪಿ, ಕಾರು ಪಲ್ಟಿ | ಎರಡು ತಿಂಗಳ ಪುಟ್ಟ ಕಂದ ಸಾವು, ಪೋಷಕರು ಗಂಭೀರ

Share the Article

ತುಮಕೂರು : ಕುಣಿಗಲ್ ತಾಲೂಕಿನ‌ ರಾ.ಹೆದ್ದಾರಿ 75 ರ ಬಿ.ಎಂ ರಸ್ತೆ ನಾಗೇಗೌನಪಾಳ್ಯ ಗೇಟ್ ಬಳಿ  ಚಾಲಕನ ನಿಯಂತ್ರಣ ತಪ್ಪಿ, ಕಾರು ಪಲ್ಟಿಯಾಗಿದ್ದ ಪರಿಣಾಮ ಎರಡುವರೆ ತಿಂಗಳ ಮಗು ಸ್ಥಳದಲ್ಲೇ ಮೃತಪಟ್ಟಿದ್ದು, ಮಗುವಿನ ತಂದೆ, ತಾಯಿ ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಶನಿವಾರ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ

ಪರಮೇಶ್ ತನ್ನ ಹೆಂಡತಿ ರಮ್ಯ ಹಾಗೂ ಮಗು ಸಮರ್ಥನೊಂದಿಗೆ ತನ್ನ ಗ್ರಾಮದಿಂದ ಕಾರಿನಲ್ಲಿ ಕುಣಿಗಲ್ ತಾಲೂಕಿನ‌ ಎಡಿಯೂರಿಗೆ ಹೋಗಿ ಸಿದ್ದಲಿಂಗಸ್ವಾಮಿ ಸ್ವಾಮಿಗೆ ಪೂಜೆ ಸಲ್ಲಿಸಿ ತನ್ನ ಗ್ರಾಮಕ್ಕೆ ಹಿಂತಿರುಗುತ್ತಿರಬೇಕಾದರೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಗಾಯಗೊಂಡ ರಮ್ಯ ಹಾಗೂ ಪರಮೇಶ್ ಅವರಿಗೆ ಕುಣಿಗಲ್ ಸರ್ಕಾರಿ ಆಸ್ಪತ್ರೆ ಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲಾಗಿದೆ.  ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Leave A Reply