ಬೀದರ್ | ಅಮರನಾಥ್ ಯಾತ್ರೆಗೆ ತೆರಳಿದ್ದ 18 ಜನ ಮೇಘ ಸ್ಫೋಟಕ್ಕೆ ಮೊದಲೇ ವಾಪಸ್

ಬೀದರ್‌ : ಜಮ್ಮು ಕಾಶ್ಮೀರದ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಅಮರನಾಥದಲ್ಲಿ ಮೇಘ ಸ್ಪೋಟಗೊಂಡಿದ್ದು,  ಬೀದರ್‌ ಜಿಲ್ಲೆಯ 18 ಯಾತ್ರಾತ್ರಿಗಳು ಈ ದುರಂತಕ್ಕೂ ಮುನ್ನವೇ ಸುರಕ್ಷಿತವಾಗಿ ಮನೆಗೆ ಸೇರಿದ್ದಾರೆ 

ಬೀದರ್‌ ಜಿಲ್ಲೆಯಿಂದ ಮೂರು ಪ್ರತ್ಯೇಕ ತಂಡಗಳಾಗಿ ಅಮರನಾಥಕ್ಕೆ ತೆರಳಿದ್ದ ಯಾತ್ರಾತ್ರಿಗಳು ಫುಲ್‌ ಸೇಫ್‌ ಆಗಿದ್ದು ನಿಟ್ಟುಸಿರು ಬಿಟ್ಟಂತಾಗಿದೆ.  ಅದರಲ್ಲೂ ಕುಮಲನಗರದ ತಾಲೂಕಿನ 6 ಜನ , ಬಾಲ್ಕಿ2 ಮತ್ತು ಬಸವಕಲ್ಯಾಣದ 1ಸೇರಿ ಒಟ್ಟು 9 ಜನರ ತಂದ ಜು.3ಕ್ಕೆ ಹೈದ್ರಾಬಾದ್‌ನಿಂದ ಬಿಟ್ಟು ಜು.6ಕ್ಕೆ ಪಾಲಗಮ್‌ ತಲುಪಿದೆ. ನಂತರ ಎರಡು ದಿನ ಅಮರನಾಥನ ದರ್ಶನ ಪಡೆದು ಶುಕ್ರವಾರ ಮೇಘ ಸ್ಪೋಟಕ್ಕೂ ಮುನ್ನ ಶ್ರೀನಗರಕ್ಕೆ ಆಗಮಿಸಿದ್ದು, ಸದ್ಯ ವೈಷ್ಠೋದೇವಿ ಪ್ರವಾಸದಲ್ಲಿದೆ.

ಬೀದರ್‌ ಶಿವಕುಮಾರ ಸ್ವಾಮಿ ಮತ್ತು ಪ್ರಕಾಶ ಭಂಡಾರಿ ಸೇರಿ ಒಟ್ಟು 8 ಜನರ ಮತ್ತೊಂದು ತಂಡವು ಶುಕ್ರವಾರ ಬೆಳಗ್ಗೆವರೆಗೆ ಗುಹೆಯಲ್ಲಿ ದರ್ಶನ ಪಡೆದು ಶ್ರೀನಗರದಲ್ಲಿ ಸುರಕ್ಷಿತ ಸ್ಥಳದಲ್ಲಿ ನೆಲೆಸಿದ್ದಾರೆ. ಇನ್ನೂ ಬೀದರ್‌ ಮಹೇಶ್ವರ ಸ್ವಾಮಿ ಅವರು ತಮ್ಮ ತೆಲಂಗಾಣದ ಮೂವರು ಗೆಳೆಯರಿಂದಿಗೆ ದೇವರ ದರ್ಶನ ಪಡೆದು ವಾಪಸ್ಸಾಗಿದ್ದು ಬಳಿ ಈ ಘಟನೆ ಸಂಭವಿಸಿದೆ ಸದ್ಯಕ್ಕೆ ಸ್ವಾಮಿ ಅವರು ವೈಷ್ಟೋದೇವ ದರ್ಶನದ ಪ್ರಯಾಣದಲ್ಲಿದ್ದಾರೆ.

Leave A Reply

Your email address will not be published.