ಗುಜರಿ ಹುಡುಕಲು ಹೋದವರಿಗೆ ಸ್ಕ್ರಾಪ್ ನಲ್ಲಿ ಸಿಕ್ಕಿತ್ತು ಹೊಸ ಸ್ಟೀಲ್ ಡಬ್ಬ | ತೆರೆದು ನೋಡಲಾಗಲಿಲ್ಲ, ಸದ್ದು ಊರಿಡೀ ಕೇಳಿಸಿತ್ತು !

ಬಾಡಿಗೆ ಮನೆಯೊಂದರಲ್ಲಿ ಬಾಂಬ್ ಸ್ಫೋಟವೊಂದು ನಡೆದಿದ್ದು, ಈ ಅವಘಡದಲ್ಲಿ ತಂದೆ ಮಗ ಇಬ್ಬರು ದಾರುಣವಾಗಿ ಸತ್ತ ಘಟನೆಯೊಂದು
ಕೇರಳದ ಕಣ್ಣೂರು ಜಿಲ್ಲೆಯ ಮಟ್ಟನ್ನೂರಿನ ಕಾಸಿಮುಕ್ಕು ಎಂಬಲ್ಲಿ ನಡೆದಿದೆ.


Ad Widget

Ad Widget

Ad Widget

Ad Widget
Ad Widget

Ad Widget

ವರದಿಗಳ ಪ್ರಕಾರ, ತಂದೆ ಮಗ ಇಬ್ಬರು ಸ್ಕ್ರ್ಯಾಪ್ ಸಂಗ್ರಹಕಾರರು. ಸ್ಕ್ರ್ಯಾಪ್ ಸಂಗ್ರಹಿಸಿ ಅದನ್ನ ಮಾರಾಟಮಾಡಿ ಜೀವನ ಸಾಗಿಸುತ್ತಿದ್ದರು. ಅಸ್ಸಾಂ ಮೂಲದ ಫಸಲ್ ಹಕ್ (45) ಮತ್ತು ಮಗ ಶಹೀದುಲ್ ಎಂಬುವವರೇ ಸ್ಫೋಟದಲ್ಲಿ ಸಾವನ್ನಪ್ಪಿದ್ದ ವ್ಯಕ್ತಿಗಳು.


Ad Widget

ಎಂದಿನಂತೆ ಇವರು ಗುಜರಿ ಹೆಕ್ಕಲು ಹೊರಟಿದ್ದು, ಸ್ಕ್ರ್ಯಾಪ್ ಸಂಗ್ರಹದ ವೇಳೆ ತಮಗೆ ದೊರೆತಿದ್ದ ಸ್ಟೀಲ್‌ ಬಾಕ್ಸ್‌ವೊಂದು ದೊರಕಿದೆ. ಅದನ್ನು ಮನೆಗೆ ತಂದು ಓಪನ್‌ ಮಾಡಿದ ತಕ್ಷಣವೇ ಅದು ಸ್ಫೋಟಗೊಂಡಿದೆ. ಈ ವೇಳೆ ಫಸಲ್ ಹಕ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮಗ ಶಹೀದುಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

ಬುಧವಾರ ಸಂಜೆ 5.30ಕ್ಕೆ ಅಪಘಾತ ಸಂಭವಿಸಿದೆ. ಸುದ್ದಿ ತಿಳಿಯುತ್ತಿದ್ದಂತೇ ಘಟನಾ ಸ್ಥಳಕ್ಕೆ ಬಂದ ಪೊಲೀಸರು, ಬಾಂಬ್ ಸ್ಕ್ವಾಡ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಫೋಟಕ್ಕೆ ಏನು ಬಳಸಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!
Scroll to Top
%d bloggers like this: