ಮಂಗಳೂರು : ಓಮ್ನಿ ಮೇಲೆ ಬಿದ್ದ ಲಾರಿ | ಕಾರು ಚಾಲಕ ಗಂಭೀರ

ಮಂಗಳೂರು: ಓಮ್ನಿ ಕಾರಿನ ಮೇಲೆ ಸರಕು ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ, ಕಾರು ಚಾಲಕ ಗಂಭೀರ ಗಾಯಗೊಂಡ ಘಟನೆ ಮಂಗಳೂರು ನಗರ ಹೊರವಲಯದ ಸುರತ್ಕಲ್ ಹೊನ್ನಕಟ್ಟೆ ಜಂಕ್ಷನ್ ನಲ್ಲಿ ಇಂದು ಮಧ್ಯಾಹ್ನ ನಡೆದಿದೆ.

 

ಗಾಯಾಳುವನ್ನು ಗೋಕುಲ ನಗರದ ಲೋಕೇಶ್‌ ಕುಲಾಲ್‌(38) ಎಂದು ಗುರುತಿಸಲಾಗಿದೆ.

ಓಮ್ನಿ ಕಾರಿನ ಮೇಲೆ ಸರಕು ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿದ್ದು, ಕಾರು ಅಪ್ಪಚ್ಚಿಯಾಗಿದೆ. ಟ್ರಾಫಿಕ್ ಪೊಲೀಸರು ಆಗಮಿಸಿ, ಲಾರಿಯನ್ನು ಮೇಳಕ್ಕೆತ್ತಿಸಿ, ಅರ್ಧ ಗಂಟೆಯ ರಕ್ಷಣಾ ಕಾರ್ಯದ ನಂತರ ಓಮ್ನಿ ಚಾಲಕನನ್ನು ಹೊರತೆಗೆಯಲಾಗಿದೆ. ಓಮ್ನಿ ಚಾಲಕನಿಗೆ ಗಂಭೀರಗಾಯವಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದುರ್ಘಟನೆಗೆ ಲಾರಿ ಚಾಲಕನ ನಿರ್ಲಕ್ಷವೇ ಕಾರಣವೆಂದು ತಿಳಿದುಬಂದಿದೆ.

Leave A Reply

Your email address will not be published.