ಜಪಾನ್ ನ ಮಾಜಿ ಪ್ರಧಾನಿಯನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳು !

ಜಪಾನ್ : ಜಪಾನ್ ನ ಮಾಜಿ ಪ್ರಧಾನಿಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಜಪಾನ್ ನ ನಾರಾ ನಗರದಲ್ಲಿ ನಡೆದಿದೆ.

 

ಜಪಾನ್ ನ ನಾರಾ ನಗರದಲ್ಲಿ ಮಾಜಿ ಪ್ರಧಾನಿ ಶಿಂಜೊ ಅಬೆಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.

ಭಾನುವಾರದ ಮೇಲ್ಮನೆ ಚುನಾವಣೆಗೆ ಮುನ್ನ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ನಾಯಕ ಸಾರ್ವಜನಿಕವಾಗಿ ಭಾಷಣ ಮಾಡುತ್ತಿದ್ದಾಗ ಗುಂಡೇಟಿನ ಸದ್ದು ಕೇಳಿಬಂದಿದೆ. ಎಂದು ರಾಷ್ಟ್ರೀಯ ಪ್ರಸಾರಕ ಎನ್‌ಎಚ್‌ಕೆ ಮತ್ತು ಕ್ರೋಡೋ ಸುದ್ದಿ ಸಂಸ್ಥೆ ತಿಳಿಸಿದೆ. ಗುಂಡೇಟಿನ ಶಬ್ದ ಕೇಳಿದ ಬೆನ್ನಲ್ಲಿಯೇ ಶಿಂಜೋ ಅಬೆ ಕುಸಿದು ಬಿದ್ದಿದ್ದಾರೆ. ಈ ವೇಳೆ ಅವರ ಎದೆಯ ಭಾಗದ ಕಡೆಯಲ್ಲಿ ರಕ್ತ ಕಂಡುಬಂದಿದೆ ಎಂದು ವರದಿಯಾಗಿದೆ.

ಭಾಷಣ ಮಾಡುವಾಗ ಮಾಜಿ ಪ್ರಧಾನಿ ಶಿಂಜೊ ಅಬೆ ಅವರನ್ನು ನಾರಾ ನಗರದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ, ಸದ್ಯ ಶಂಕಿತ ಹಂತಕರನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ ಎಂದು ಜಪಾನ್ ನ ಎನ್ ಎಚ್ ಕೆ ವರದಿ ಮಾಡಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave A Reply

Your email address will not be published.