ವಿವೋ ಭಾರತಕ್ಕೆ ಮಾಡಿದ ಮಹಾ ವಂಚನೆ ಬಯಲು

ಚೀನಾ ಮೂಲದ ಮೊಬೈಲ್​ ತಯಾರಿಕಾ ಸಂಸ್ಥೆಯ ತೆರಿಗೆ ವಂಚನೆ ಬಯಲಾಗಿದೆ. ವಿವೊ ಮೊಬೈಲ್​ ಇಂಡಿಯಾ ಪ್ರೈವೆಟ್​ ಲಿಮಿಟೆಡ್​​ ಹಾಗೂ ದರ ಸಹಭಾಗಿಯಾಗಿರುವ ವಿವಿಧ 23 ಕಂಪನಿಗಳ ಮೇಲೆ ಜಾರಿ ನಿರ್ದೇಶನಾಲಯ ಕಳೆದ ಎರಡು ದಿನಗಳ ಹಿಂದೆ ದಾಳಿ ಮಾಡಿತ್ತು.

ವಿವೋ ಮತ್ತು ಅದಕ್ಕೆ ಸಂಬಂಧಿಸಿದ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ. ದೆಹಲಿ, ಮೇಘಾಲಯ, ಮಹಾರಾಷ್ಟ್ರ, ಉತ್ತರಪ್ರದೇಶ ಸೇರಿದಂತೆ ಒಟ್ಟು 44 ಸ್ಥಳಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕಂಪನಿಯಲ್ಲಿ ಕೆಲ ಚೀನಿ ಷೇರುದಾರರು ತಮ್ಮ ಗುರುತಿನ ದಾಖಲೆಗಳನ್ನು ತಿರುಚಿದ್ದು ಕಂಡುಬಂದಿತ್ತು. ಅವರು ಹೀಗೆ ಮಾಡಿದ್ದು, ಕಂಪನಿಯ ಹಣ ಅಕ್ರಮ ಹಣ ವರ್ಗಾವಣೆ ಉದ್ದೇಶದಿಂದ ಇರಬಹುದು ಎಂದು ಪ್ರಕರಣ ದಾಖಲಿಸಲಾಗಿತ್ತು. ಇದೇ ಆಧಾರದಲ್ಲಿ ಇದೀಗ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಭಾರತದಲ್ಲಿ ತೆರಿಗೆ ಪಾವತಿಸಲು ತಪ್ಪಿಸಲು ಬರೋಬ್ಬರಿ ಶೇ.50ರಷ್ಟು ತೆರಿಗೆ ಹಣವನ್ನು ಚೀನಾ ರವಾನಿಸಿದೆ. ಇದೀಗ ಶೇ.50 ರಷ್ಟು ಅಂದರೆ ಬರೋಬ್ಬರಿ 62, 476ಕೋಟಿ ರೂ. ಹಣವನ್ನು ಚೀನಾಗೆ ರವಾನಿಸಿರುವುದು ಬಯಲಾಗಿದೆ

ಸಂಸ್ಥೆಯ ವಿವಿಧ ಬ್ಯಾಂಕ್​ಗಳ 119 ಖಾತೆಗಳಲ್ಲಿಇರಿಸಿದ್ದ ಸುಮಾರು 465 ಕೋಟಿ ರೂ.ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ

Leave A Reply

Your email address will not be published.