ಮಗಳ ಗಂಡನನ್ನೇ ಲವ್ ಮಾಡಿದ ತಾಯಿ, ಈ ಲವ್ವಿಡವ್ವಿ ಪರಿಣಾಮ, ಮುಂದೇನಾಯ್ತು ಗೊತ್ತಾ?

ಪ್ರೀತಿಗೆ ಕಣ್ಣಿಲ್ಲ ನಿಜ, ಪ್ರೀತಿಯ ಅಮಲಿನಲ್ಲಿ ಬಿದ್ದವರಿಗೆ ಜಗತ್ತು ಕಾಣಿಸಲ್ಲ. ಆದರೆ ಪ್ರೀತಿಸೋರಿಗೆ ಸ್ವಲ್ಪ ಜ್ಞಾನ ಇರುತ್ತಲ್ವಾ ? ಅಥವಾ ಬುದ್ಧಿನೇ ಇಲ್ವಾ ? ಎಂಬ ಪ್ರಶ್ನೆ ಆಗಾಗ್ಗೆ ಮೂಡುತ್ತಿರುತ್ತದೆ. ಕೆಲವೊಂದು ಪ್ರಕರಣಗಳಲ್ಲಿ ಹೀಗೂ ಇರುತ್ತಾರಾ ಎಂದೆನಿಸಿಬಿಡುತ್ತೆ. ಅಂತಹದೊಂದು ವಿಚಿತ್ರ ಪ್ರಕರಣವೊಂದು ರಾಜಸ್ಥಾನದಿಂದ ವರದಿಯಾಗಿದೆ.

ಈ ಪ್ರಕರಣದಲ್ಲಿ ಅತ್ತೆ ಮತ್ತು ಅಳಿಯನೇ ಪ್ರಮುಖ ಪಾತ್ರಧಾರಿಗಳು ಅಂತ ಹೇಳಬಹುದು. ಅಂದರೆ ವರ್ಷಗಳ ಹಿಂದೆ ದರಿಯಾ ದೇವಿ (38) ತನ್ನ ಮಗಳನ್ನು ಖರಾಂತಿಯಾ ಪ್ರದೇಶದ ಹೋತಾರಾಮ್ (22) ಗೆ ವಿವಾಹ ಮಾಡಿಕೊಟ್ಟಿದ್ದರು. ಅನಂತರವೇ ಎಲ್ಲಾ ಎಡವಟ್ಟು ಶುರುವಾಗಿದೆ. ಮದುವೆ ಮಾಡಿಕೊಟ್ಟ ನಂತರ, ಆರಂಭದಲ್ಲೇ ಅತ್ತೆ-ಅಳಿಯನ ಸಂಬಂಧದಲ್ಲಿದ್ದ ದರಿಯಾ ದೇವಿ ಹಾಗೂ ಹೋತಾರಾಮ್ ಇಬ್ಬರಿ ಅನೋನ್ಯತೆ ಮೂಡಿದೆ. ಈ ಅನೋನ್ಯತೆಯು ನಿಧಾನವಾಗಿ ಅಳಿಯನ ಮೇಲಿನ ಪ್ರೇಮವಾಗಿ ಮಾರ್ಪಟ್ಟಿದೆ. ಇನ್ನೂ ಮುಂದಕ್ಕೆ ಹೋಗಿ, ತನ್ನ ಮನದ ಇಂಗಿತವನ್ನು ದರಿಯಾ ದೇವಿ ಅಳಿಯನಿಗೆ ತಿಳಿಸಿದ್ದಾಳೆ. ತನ್ನ ಮನಸ್ಸಿನ ತುಮುಲಗಳನ್ನು ಅದುಮಿಟ್ಟುಕೊಳ್ಳಲಾಗದೇ ತನ್ನ ಮನದ ಇಂಗಿತವನ್ನು ದರಿ ದೇವಿ ಅಳಿಯನಿಗೆ ತಿಳಿಸಿದ್ದಾಳೆ. ಆದರೆ ಇತ್ತ ಹೋತಾರಾಮ್‌ಗೂ ಅದಾಗಲೇ ಅತ್ತೆಯ ಮೇಲೆ ಪ್ರೇಮಾಂಕುರವಾಗಿತ್ತು. ವೈದ್ಯ ಹೇಳಿದ್ದು ಹಾಲು ಅನ್ನ, ರೋಗಿ ಬಯಸಿದ್ದೂ ಹಾಲು ಅನ್ನ ಅನ್ನೋತರಹ ಆಯ್ತು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಪ್ರೀತಿ ಪ್ರೇಮದ ಅಮಲಿನಲ್ಲಿ ಇದ್ದ ಈ ಜೋಡಿ, ತಮ್ಮ ಸಂಬಂಧಗಳನ್ನೇ ಮೆರೆತಿದ್ದಾರೆ. ಯಾರಿಗೂ ಕ್ಯಾರೇ ಮಾಡದೇ ಇಬ್ಬರೂ ಪ್ರೇಮ ಪಕ್ಷಿಗಳಾಗಿ ಜೊತೆ ಜೊತೆಯಾಗಿ ತಿರುಗಾಡಲಾರಂಭಿಸಿದ್ದಾರೆ. ಈ ವಿಚಾರ ಮನೆ ಮಂದಿಗೆ ಅನುಮಾನ ಮೂಡಿಸದಿದ್ದರೂ, ಊರವರಿಗೆ ಗೊತ್ತಾಗಿತ್ತು. ಮಗಳ ಬಾಳು ಹಾಳು ಮಾಡುತ್ತಿದ್ದೇನೆ ಎಂಬ ಸ್ವಲ್ಪ ಜ್ಞಾನ ಕೂಡಾ ಇಲ್ಲದೇ, ಇಬ್ಬರೂ ಜೊತೆಯಾಗಿ ಬದುಕಲು ಕೂಡ ನಿರ್ಧಾರ ಮಾಡಿದ್ದಾರೆ. ಆದರೆ ಸಮಾಜ ಬಿಡಬೇಕೇ? ಅದು ಬೇರೆ ಮಗಳ ಗಂಡ. ಮಗಳಿಗೆ ಮೋಸ ಮಾಡಿ, ಸಮಾಜವನ್ನು ಎದುರು ಹಾಕಿಕೊಳ್ಳುವ ಭಯ ಇಬ್ಬರಲ್ಲೂ ಆವರಿಸಿದೆ.

ಬೆಂಕಿಯಿಲ್ಲದೆ ಹೊಗೆಯಾಡಲ್ಲ ಎಂಬ ಮಾತೊಂದಿದೆ. ಇವರಿಬ್ಬರ ಅನೈತಿಕ ಸಂಬಂಧದ ಬಗ್ಗೆ ಊರಲ್ಲಿ ಚರ್ಚೆಗಳು ಶುರುವಾಗಿದ್ದವು. ಇದರಿಂದ ಅವಮಾನಿತರಾದ ಅತ್ತೆ-ಅಳಿಯ ಜೋಡಿ ಆತ್ಮಹತ್ಯೆಯ ದಾರಿ ಆಯ್ಕೆ ಮಾಡಿಕೊಂಡಿದ್ದಾರೆ. ಅದರಂತೆ ಮನೆಯಿಂದ ಪಡಿತರ ತರಲು ಹೋದ ಹೋತಾರಾಮ್ ಹಾಗೂ ದರಿಯಾ ದೇವಿ ಮತ್ತೆ ಹಿಂತಿರುಗಿರಲಿಲ್ಲ. ಆರಂಭದಲ್ಲಿ ಇಬ್ಬರೂ ಊರು ಬಿಟ್ಟು ಓಡಿ ಹೋಗಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಮರುದಿನ ಊರ ಹೊರಗಿನ ಜಾಗದ ಮರವೊಂದರಲ್ಲಿ ಇಬ್ಬರ ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಈ ಬಗ್ಗೆ ಬಾರ್ಮ‌್ರನ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ತನಿಖೆಯಲ್ಲಿ ಇಬ್ಬರು ಅದೇ ಗ್ರಾಮದ ನಿವಾಸಿಗಳೆಂದು ತಿಳಿದು ಬಂದಿದೆ. ಅಲ್ಲದೆ ಹೆಚ್ಚಿನ ತನಿಖೆಯ ವೇಳೆ ಇಬ್ಬರೂ ಪ್ರೀತಿಸುತ್ತಿದ್ದ ವಿಚಾರ ಕೂಡ ಬೆಳಕಿಗೆ ಬಂದಿದೆ. ಜೊತೆಯಾಗಿ ಬಾಳುವ ಅವಕಾಶ ಸಿಗಲ್ಲ ಎಂಬ ಭಯದಿಂದ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಅಧಿಕಾರಿ ಪರ್ಬತ್ ಸಿಂಗ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಪ್ರೀತಿಯ ಅಮಲು ಸಾವಿನ ಹಾದಿ ಹಿಡಿಯಿತು. ಪ್ರೀತಿಯ ನಶೆಯಲ್ಲಿ ಮೈಮರೆತ ಅತ್ತೆ-ಅಳಿಯನ ಪ್ರೇಮಕಥೆ ದಾರುಣ ಅಂತ್ಯ ಕಂಡಿದೆ.

error: Content is protected !!
Scroll to Top
%d bloggers like this: