Breaking । Dolo 650 ಮೆಡಿಸಿನ್ ಖ್ಯಾತಿಯ ಮೈಕ್ರೋ ಲ್ಯಾಬ್ಸ್ ಮೇಲೆ ದಾಳಿ ಮೈಕ್ರೋ ಲ್ಯಾಬ್ಸ್ ಗೆ ಐಟಿ ತಲೆನೋವು !

Share the Article

ಬೆಂಗಳೂರು : ದೇಶಾದ್ಯಂತ ಡೋಲೋ 650 ಖ್ಯಾತಿಯ ಮೈಕ್ರೋ ಲ್ಯಾಬ್ಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆದಾಯ ತೆರಿಗೆ ವಂಚನೆ ಆರೋಪದಲ್ಲಿ ಇಂದು ಬೆಳ್ಳಂಬೆಳಗ್ಗೆ ಬೆಂಗಳೂರು ಸೇರಿದಂತೆ ಹಲವೆಡೆ ದಾಳಿ ನಡೆದಿದೆ. ಮೈಕ್ರೋ ಲ್ಯಾಬ್ಸ್ ಬೆಂಗಳೂರು ಮೂಲದ ಔಷಧ ತಯಾರಿಕಾ ಸಂಸ್ಥೆಯಾಗಿದೆ.

ಬೆಂಗಳೂರು ಸೇರಿ ದೇಶಾದ್ಯಂತ ಏಕಕಾಲದಲ್ಲಿ ಡೋಲೋ 650 ಖ್ಯಾತಿಯ ಮೈಕ್ರೋ ಲ್ಯಾಬ್ಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಫ್ಯಾಕ್ಟರಿ, ಕಚೇರಿಗಳ ಮೇಲೆ ಏಕಕಾಲಕ್ಕೆ 40 ಕ್ಕೂ ಹೆಚ್ಚು ಕಡೆಗಳಲ್ಲಿ 200 ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಂಗಳೂರು, ದೆಹಲಿ, ತಮಿಳುನಾಡು, ಪಂಜಾಬ್ ಸೇರಿದಂತೆ 40 ಕಡೆಗಳಲ್ಲಿ ಐಟಿ ಅಧಿಕಾರಿಳು ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಹಲವು ಕಾಗದಪತ್ರಗಳ ಪರಿಶೀಲನೆ ನಡೆದಿದೆ.

Leave A Reply