ಹವಾಮಾನ ವೈಪರೀತ್ಯ : ಮಂಗಳೂರಿಗೆ ಬರಬೇಕಿದ್ದ ವಿಮಾನ ಬೆಂಗಳೂರಿಗೆ ಡೈವರ್ಟ್

ಬೆಂಗಳೂರು : ಸೌದಿ ಅರೇಬಿಯಾದ ದಮ್ಮಮ್ ನಿಂದ ಮಂಗಳೂರಿಗೆ ಬರಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವನ್ನು ಹವಾಮಾನ ವೈಫಲ್ಯದಿಂದ ಬೆಂಗಳೂರಿಗೆ ತಿರುಗಿಸಲಾಯಿತು.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಐಎಕ್ಸ್ 886 ವಿಮಾನವು ಸುಮಾರು 7 ಗಂಟೆಗಳಿಗೂ ಹೆಚ್ಚು ವಿಳಂಬವಾಗಿ ಮಧ್ಯಾಹ್ನ 3 ಗಂಟೆಗೆ ಟೇಕ್ಆಫ್ ಆಯಿತು. ಸೋಮವಾರ ರಾತ್ರಿ 10.30ಕ್ಕೆ ದಮ್ಮಮ್ ನ ಕಿಂಗ್ ಫಹದ್ ಅಂತರ್ ರಾಷ್ಟ್ರೀಯ ವಿಮಾನದಿಂದ ಹೊರಟಿದ್ದ ವಿಮಾನ, ಮಂಗಳವಾರ ಬೆಳಿಗ್ಗೆ 5.25ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಮಂಗಳೂರಿಗೆ ಹೋಗದೆ, ಬೆಳಿಗ್ಗೆ 8 ಗಂಟೆಗೆ ಬೆಂಗಳೂರಿನಲ್ಲಿ ಲ್ಯಾಂಡ್ ಆಗಿತ್ತು.

ಅಂತಿಮವಾಗಿ, ಕೆ ಐಎಯಿಂದ ಮಧ್ಯಾಹ್ನ 2.57 ಕ್ಕೆ ಹೊರಟು, ನಿಗದಿತ ಆಗಮನದ ಸಮಯಕ್ಕಿಂತ 9.5 ಗಂಟೆಗಳು ತಡವಾಗಿ 3.35 ಕ್ಕೆ ಮಂಗಳೂರು ಲ್ಯಾಂಡ್ ಆಯಿತು. ಹವಾಮಾನ ವಿಳಂಬದಿಂದ ಈ ರೀತಿ ಲೇಟ್ ಆಗಿದ್ದು, ಪ್ರಯಾಣಿಕರಿಗೆ ಉತ್ತಮ ಕಾಳಜಿ ವಹಿಸಲಾಗಿದೆಯೆಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಾಕ್ತರರು ಹೇಳಿದ್ದಾರೆ.

Leave A Reply

Your email address will not be published.