ಎಸಿಬಿ ಭ್ರಷ್ಟಾಚಾರ ಪ್ರಶ್ನೆ ಮಾಡಿದ್ದಕ್ಕೆ ನನಗೆ ವರ್ಗಾವಣೆ ಬೆದರಿಕೆ : ಹೈ ಕೋರ್ಟ್ ನ್ಯಾಯಾಧೀಶರ ಗಂಭೀರ ಆರೋಪ
ಬೆಂಗಳೂರು : ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ ) ಕಚೇರಿಗಳು ವಸೂಲಿ ಕೇಂದ್ರಗಳಾಗಿವೆ. ಅಲ್ಲಿನ ಅಕ್ರಮ ಪ್ರಶ್ನಿಸಿದ್ದಕ್ಕೆ ನನಗೆ ವರ್ಗಾವಣೆ ಬೆದರಿಕೆ ಹಾಕಲಾಗಿದೆಯೆಂದು ರಾಜ್ಯ ಹೈ ಕೋರ್ಟ್ ನ್ಯಾಯಾಧೀಶ ಎಚ್. ಪಿ ಸಂದೇಶ್ ಗಂಭೀರ ಆರೋಪ ಮಾಡಿದ್ದಾರೆ.
ನನಗೆ ಯಾರ ಹೆದರಿಕೆಯು ಇಲ್ಲ, ಬೆಕ್ಕಿಗೆ ಗಂಟೆ ಕಟ್ಟಲು ಸಿದ್ಧನಿದ್ದೇನೆ. ಎಸಿಬಿ ಭ್ರಷ್ಟಾಚಾರ ಪ್ರಶ್ನೆ ಮಾಡಿದ್ದಕ್ಕೆ ನನಗೆ ವರ್ಗಾವಣೆ ಬೆದರಿಕೆ ಎಂಬ ಹೈ ಕೋರ್ಟ್ ನ್ಯಾಯಾಧೀಶರ ಗಂಭೀರ ಆರೋಪವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಲಂಚ ಸ್ವೀಕಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬೆಂಗಳೂರು ಕಚೇರಿಯ ಉಪತಹಶೀಲ್ದಾರ ಪಿಎಚ್ ಮಹೇಶ್ ಸಲ್ಲಿಸಿ ಇರುವ ಜಮೀನು ಅರ್ಜಿಯ ವಿಚಾರಣೆಯನ್ನು ನಿನ್ನೆ ನಡೆಸಿದ ನ್ಯಾಯಮೂರ್ತಿ ಸಂದೇಶ್ ಅವರಿದ್ದ ಏಕ ಸದಸ್ಯ ಪೀಠವು ಎಸಿಬಿಯಲ್ಲಿನ ಅಕ್ರಮಗಳನ್ನು ಪ್ರಶ್ನೆ ಮಾಡಿದ್ದಕ್ಕೆ ನನಗೆ ವರ್ಗಾವಣೆ ಬೆದರಿಕೆ ಮಾಡಲಾಗಿದೆ. ಎಸಿಬಿ ಮತ್ತು ಎಡಿಜಿಪಿ ತುಂಬಾ ಪವರ್ ಫುಲ್ ಆಗಿದ್ದರಂತೆ.
ಓರ್ವ ವ್ಯಕ್ತಿ ಈ ವಿಚಾರವನ್ನು ನನ್ನ ಸಹದ್ಯೋಗಿ ನ್ಯಾಯಮೂರ್ತಿಯೊಬ್ಬರಿಗೆ ಹೇಳಿದ್ದಾರಂತೆ. ಅದನ್ನು ಆಧಾರಿಸಿ ನ್ಯಾಯಮೂರ್ತಿಗಳೇ ನನಗೆ ವರ್ಗಾವಣೆ ಬೆದರಿಕೆ ಇದೆಯೆಂದು ಹೇಳಿದ್ದಾರೆ. ಈ ಬಗ್ಗೆ ಯಾರು ಎಂಬ ವಿವರಣೆ ಮದ್ಯಾಹ್ನ ದ ಕಲಾಪದಲ್ಲಿ ಆದೇಶದಲ್ಲಿ ಬರೆಸಿ ಹೇಳುತ್ತೇನೆ ಎಂದು ಪಟ್ಟು ಹಿಡಿದಿದ್ದಾರೆ.
ಮಧ್ಯಾಹ್ನದ ಕಲಾಪದಲ್ಲಿ ಸರ್ಕಾರದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಹಾಜರಾಗಿ ಸರ್ಕಾರ ಯಾರನ್ನು ಕೂಡ ರಕ್ಷಣೆ ಮಾಡುತ್ತಿಲ್ಲ ಎಂದಿದ್ದಾರೆ. ತಾವು ಯಾವುದಕ್ಕೂ ಬೇಸರ ಮಾಡಿ ಕೊಳ್ಳಬೇಡಿ.ಎಸಿಬಿ ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನೀಡುತ್ತೇವೆ. ರಿಪೋರ್ಟ್ ನ ಸಂಪೂರ್ಣ ಮಾಹಿತಿ ಕೊಡುತ್ತೇವೆ. ಸರ್ಕಾರ ಹೈ ಕೋರ್ಟ್ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತದೆಯೆಂದು ಭರವಸೆ ನೀಡಿದ್ದರು.
ಇದಕ್ಕೆ ಸಂದೇಶ್, ವರ್ಗಾವಣೆ ಪರೋಕ್ಷವಾಗಿ ಬೆದರಿಕೆ ನೀಡಿದ್ದಾರೆ. ನಾನೀಗ ನ್ಯಾಯಾಂಗದ ಸ್ವಾತಂತ್ರವನ್ನು ಎತ್ತಿ ಹಿಡಿಯಬೇಕು. ಜಡ್ಜ್ ಅದ ಮೇಲೆ ನಾನು ಸ್ವಲ್ಪ ಕೂಡ ಆಸ್ತಿ ಮಾಡಿಲ್ಲ. ಆದರೂ ನನಗೆ ವರ್ಗಾವಣೆ ಬೆದರಿಕೆ ಎದುರಿಸುತ್ತಿದ್ದೇನೆ. ಜನರ ಒಳಿತಿಗಾಗಿ ವರ್ಗಾವಣೆ ಆಗಲು ಸಿದ್ಧ ಇದ್ದೇನೆ. ನನಗೆ 500₹ ಯಲ್ಲಿ ಜೀವನ ಮಾಡಿ ಕೂಡ ಗೊತ್ತು. ಯಾರ ಹೆದರಿಕೆಯು ಇಲ್ಲ. ಬೆಕ್ಕಿಗೆ ಗಂಟೆ ಕಟ್ಟಲು ಸಿದ್ಧ ಇದೇನೇ ಎಂದಿದ್ದಾರೆ. ಇವತ್ತು ಭ್ರಷ್ಟಾಚಾರ ಸಮಾಜದಲ್ಲಿ ಕನ್ಸರ್ ಆಗಿ ಪರಿಣಮಿಸಿದೆ ಎಂದ ಅವರು,ಜಿಲ್ಲಾಧಿಕಾರಿ ಮಂಜುನಾಥ್ ಅವರು ಸೇವಾ ದಾಖಲೆಗಳನ್ನು ಹಾಜರು ಪಡಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಜೂನ್ 7 ರಂದು ಮುಂದೂಡಲಾಗಿದೆ.